ರಝಾಕರು ಮುಸ್ಲಿಮರಲ್ಲ, ಸುಟ್ಟಿದ್ದು ನಮ್ಮನೆ, ಹೋಗಿದ್ದು ನಮ್ಮವರ ಜೀವ, ಯೋಗಿಗೆ ಏನಾಗಬೇಕು? – ಪ್ರಿಯಾಂಕ್ ತಿರುಗೇಟು

Public TV
2 Min Read
PRIYANK KHARGE

ಬೆಂಗಳೂರು: ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ರಝಾಕರು (Razakar) ನಮ್ಮನೆ ಸುಟ್ಟು ಹಾಕಿದರು. ಸುಟ್ಟಿದ್ದು ರಝಾಕರು, ಮುಸ್ಲಿಮರಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.

ರಝಾಕರಿಂದ ಖರ್ಗೆಯವರ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ಎಂಬ ಯೋಗಿ ಆದಿತ್ಯನಾಥ್ ಆರೋಪ ವಿಚಾರವಾಗಿ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು, ಇದರಿಂದ ಯೋಗಿಗೆ ಏನಾಗಬೇಕು? ಆ ಘಟನೆಗೆ ಇಡೀ ಮುಸ್ಲಿಂ ಸಮುದಾಯವನ್ನು ದೂರುವುದಕ್ಕೆ ಆಗುತ್ತಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರು 1 ದಿನದ ವೇತನ ನೀಡುವಂತೆ ಮಂಡ್ಯ ಡಿಸಿ ಮನವಿ

yogi adityanath

ಬೇರೆ ಬೇರೆ ಸಮುದಾಯದ ಕೆಲವರಿಂದ ಮೋಸ ಆಗುತ್ತೆ ಎಂದು ಇಡೀ ಸಮುದಾಯವನ್ನು ಹೊಣೆ ಮಾಡಲಾಗುತ್ತಾ? ಮುಸ್ಲಿಮರಿಗೆಲ್ಲ ಆರೋಪ ಮಾಡಲು ಆಗುತ್ತಾ? ಇದೆಲ್ಲ ಈಗ ಅಪ್ರಸ್ತುತ ಚರ್ಚೆ. ಇಷ್ಟೆಲ್ಲಾ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ? ಮೊದಲು ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಕೇಸ್‌- ಸೈಲ್‌ಗೆ ರಿಲೀಫ್‌, ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಹೈಕೋರ್ಟ್‌

Mallikarjun Kharge

ಯೋಗಿ ಹೇಳಿದ್ದೇನು?
ರಝಾಕರ್‌ಗಳಿಂದಲೇ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರ ಹತ್ಯೆ ನಡೆದಿದೆ. ಆದರೆ ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಖರ್ಗೆಯವರು ಏನೂ ಮಾತನಾಡುತ್ತಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರದ ಅಚಲಪುರದ ಬಿಜೆಪಿ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಖಾಸಗಿ ವೀಡಿಯೋ ಲೀಕ್‌ – ನೆಟ್ಟಿಗರ ಕಾಮೆಂಟ್‌ಗೆ ರೋಸಿ ಇನ್‌ಸ್ಟಾಗೆ ಗುಡ್‌ಬೈ ಹೇಳಿದ ಪಾಕ್‌ ತಾರೆ

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಮೇಲೆ ಅನಗತ್ಯವಾಗಿ ಕೋಪ ಮಾಡಿಕೊಳ್ಳುತ್ತಿದ್ದಾರೆ. ನಾನು ಅವರ ವಯಸ್ಸನ್ನು ಗೌರವಿಸುತ್ತೇನೆ. ಆದರೆ ನನ್ನ ಮೇಲೆ ಕೋಪ ಮಾಡಿಕೊಳ್ಳುವ ಬದಲು ಅವರು ಹೈದರಾಬಾದ್ ನಿಜಾಮಾನ ಮೇಲೆ ಆಕ್ರೋಶ ಹೊರಹಾಕಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬ್ಯಾಗ್‌ ಇಟ್ಟು ಕೆಲಸಕ್ಕೆ ತೆರಳಿ – ಮೆಟ್ರೋ ನಿಲ್ದಾಣದಲ್ಲಿ ಬಂದಿದೆ ಡಿಜಿಟಲ್ ಲಗೇಜ್ ಲಾಕರ್

ಖರ್ಗೆಯವರ ಗ್ರಾಮವಾದ ವಾರ್ವಟ್ಟಿ ಒಮ್ಮೆ ಹೈದರಾಬಾದ್‌ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಬ್ರಿಟಿಷರು ರಾಷ್ಟ್ರವನ್ನು ವಿಭಜಿಸಲು ಮುಸ್ಲಿಂ ಲೀಗ್ ಅನ್ನು ಪ್ರೋತ್ಸಾಹಿಸಿದರು. ಅದಕ್ಕೆ ಕಾಂಗ್ರೆಸ್ ನಾಯಕತ್ವವು ಶರಣಾಯಿತು. ಸ್ವಾತಂತ್ರ‍್ಯದ ನಂತರ ನಿಜಾಮರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಯಿತು ನಂತರ ಹಿಂಸಾಚಾರ ಆರಂಭವಾಯಿತು. ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟುಹಾಕಿದರು. ಹಿಂದೂಗಳನ್ನು ಬರ್ಬರವಾಗಿ ಕೊಂದರು ಮತ್ತು ನಿಮ್ಮ ತಾಯಿ, ಸಹೋದರಿ, ನಿಮ್ಮ ಕುಟುಂಬ ಸದಸ್ಯರನ್ನು ಸುಟ್ಟುಹಾಕಿದರು. ಈ ವಿಚಾರ ಖರ್ಗೆ ಅವರಿಗೆ ಗೊತ್ತಿದ್ದರೂ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ. ಮುಸ್ಲಿಂ ವೋಟ್‌ಬ್ಯಾಂಕ್‌ಗಾಗಿ ಅವರು ಎಲ್ಲವನ್ನೂ ಮರೆಯುತ್ತಾರೆ ಎಂದು ತಿರುಗೇಟು ನೀಡಿದ್ದರು. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಮನೆ ಮೇಲೆ ಲೋಕಾ ದಾಳಿ; 14.80 ಲಕ್ಷ ಹಣ ಜಪ್ತಿ!

Share This Article