ಬೆಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಆಗಲಿ, ಅವರ ಅಪ್ಪ ಆಗಲಿ ಕಾನೂನು ಒಂದೇ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ಪಥ ಸಂಚಲನ (RSS Parade) ಮಾಡೇ ಮಾಡುತ್ತೇವೆ ಎಂಬ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ಕೋರ್ಟ್‌ಗಿಂತ ಅವರು ದೊಡ್ಡವರಾ? ಮಾಡಲಿ ನೋಡೋಣ. ಕೋರ್ಟ್ ಅನುಮತಿ ಸಿಗದೇ ಮಾಡುತ್ತಾರಾ? ಅನುಮತಿ ಇಲ್ಲದೇ ಮಾಡಿದರೆ ಸರ್ಕಾರ ಕತ್ತೆ ಕಾಯುತ್ತಿರುತ್ತಾ? ಅನುಮತಿ ತಗೆದುಕೊಳ್ಳಲೇ ಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ
ಬಹಿರಂಗ ಚರ್ಚೆಗೆ ಬನ್ನಿ ಎಂದರೂ ಚರ್ಚೆಗೆ ಬರಲ್ಲ. ಏನಾದ್ರೂ ಕಂಟೆಂಟ್ ಇದ್ರೆ ಬರುತ್ತಿದ್ದರು. ಬರೀ ವೈಯಕ್ತಿಕವಾಗಿ ಮಾತನಾಡುತ್ತಾರೆ. ಆರ್‌ಎಸ್‌ಎಸ್ ರಿಜಿಸ್ಟರ್ ಆಗಿದ್ಯಾ ಎಂದು ಕೇಳಿದ್ರೆ ತಪ್ಪಾ? ದಾಖಲೆ ತಂದು ಮುಖದ ಮೇಲೆ ಬಿಸಾಕಲಿ. ಇವರಿಗೆ ಎಲ್ಲಿಂದ ದೇಣಿಗೆ ಸಿಗುತ್ತಿದೆ? ದೇವಸ್ಥಾನದ ಹುಂಡಿ ಲಾಕ್ ಆಗಿರುತ್ತೆ. ಅದನ್ನ ತೆಗೆಯಬೇಕಾದರೆ ತಹಶೀಲ್ದಾರ್ ಬರಬೇಕು, ಎಲ್ಲವನ್ನೂ ಪಾರದರ್ಶಕವಾಗಿ ತೆಗೆಯುತ್ತಾರೆ. ಆದರೆ ಆರ್‌ಎಸ್‌ಎಸ್‌ಗೆ ಎಲ್ಲಿಂದ ದೇಣಿಗೆ ಬರುತ್ತಿದೆ. ದೇಣಿಗೆ ಮೂಲ ಗೊತ್ತಾಗಬೇಕಲ್ವಾ? ರಾಜ್ಯ, ದೇಶ, ವಿದೇಶದಿಂದ ಬರುತ್ತಿದ್ಯಾ? ಇದರ ಮೂಲ ಗೊತ್ತಾಗಬೇಕಲ್ವಾ? ದೇಶದ ದೊಡ್ಡ ಎನ್‌ಜಿಓ ಅಂತ ಮೋದಿ ಹೇಳ್ತಾರಲ್ವಾ? ಅದರ ಲೆಕ್ಕವನ್ನು ಕೊಡಲಿ ಈಗ. ಸರ್ದಾರ್ ವಲ್ಲಬಾಯ್ ಪಟೇಲ್‌ರಿಂದ ಹಿಡಿದು ಇಂದಿರಾಗಾಂಧಿವರೆಗೆ ನಾವು ದೊಡ್ಡ ಮನಸ್ಸು ಮಾಡಿಕೊಂಡು ಬಂದಿದ್ದೇವೆ, ಅದೇ ತಪ್ಪಾಗಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಈರುಳ್ಳಿ ಮೂಟೆಯಲ್ಲಿ ಶ್ರೀಗಂಧ ತುಂಡುಗಳ ಕಳ್ಳಸಾಗಣೆ – 18 ಮೂಟೆಗಳಲ್ಲಿ 750 ಕೆಜಿ ಶ್ರೀಗಂಧ ವಶಕ್ಕೆ
ಆರ್‌ಎಸ್‌ಎಸ್ ಹೊಗಳೋದು ಬಿಜೆಪಿಯಲ್ಲಿ ಇರುವವರಿಗೆ ಅನಿವಾರ್ಯ. ಬಸವರಾಜ ಬೊಮ್ಮಾಯಿ ಸಾಹೇಬ್ರು ಎಲ್ಲ ಜ್ಞಾನ ಇರುವ ಮನುಷ್ಯ, ಕಾನೂನಿನ ಅರಿವು ಅವರಿಗೆ ತುಂಬಾ ಚೆನ್ನಾಗಿಯೇ ಇದೆ. ಸುಪ್ರೀಂ ಕೋರ್ಟ್ ತನಕ ಬೊಮ್ಮಾಯಿಯವರ ತಂದೆ ಹೋರಾಟ ಮಾಡಿದ್ರು. ಅದೇ ಜಡ್ಜ್ಮೆಂಟ್ ನೋಡಿಬಿಟ್ಟರೆ ಬೊಮ್ಮಾಯಿಯವರು ಬಿಜೆಪಿ ಬಿಟ್ಟು ಹೊರಗೆ ಬರುತ್ತಾರೆ. ಭಾರತೀಯ ಸಂಸ್ಕೃತಿಯ ವಾರಸುದಾರರ ಸಂಸ್ಕೃತಿ ಹೇಗಿದೆ ನೋಡಿ ಇವರ ಸಂಸ್ಕೃತಿ ಇದು. ಇವರೆಲ್ಲ ನಡೆಯಲಾರದ ನಾಣ್ಯಗಳು, ಇವರನ್ನು ಮುಂದೆ ಬಿಟ್ಟು ನಮ್ಮನ್ನು ಟೀಕೆ ಮಾಡಿಸುತ್ತಾರೆ. ಇವರಿಗೆ ಹೇಳುವುದಕ್ಕೆ ಬೇರೆ ವಿಷಯಗಳಿಲ್ಲ. ಅದಕ್ಕೆ ನಮ್ಮ ಬಣ್ಣ ನಮ್ಮ ಹೇರ್ ಲಾಸ್ ಇದರ ಬಗ್ಗೆಯೇ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಪ್ರೀತಿಸುವಂತೆ ಫ್ಯಾಷನ್ ಡಿಸೈನರ್‌ಗೆ ಕಿರುಕುಳ – ಇವಿಪಿ ಫಿಲ್ಮ್ ಸಿಟಿ ಮಾಲೀಕನ ವಿರುದ್ಧ ಎಫ್‍ಐಆರ್
ಆರ್‌ಎಸ್‌ಎಸ್ ದೇವರಿಗಿಂತ ದೊಡ್ಡವರಾಗಿಬಿಟ್ಟಿದೆಯಾ? ಆರ್‌ಎಸ್‌ಎಸ್‌ಗೆ ದೇಣಿಗೆ ಕೊಡುವವರು ಯಾರು ಎಂಬುದು ಮಾಹಿತಿ ಬೇಕು. ಇವರಿಗೆ ಎಲ್ಲಿಂದ ದೇಣಿಗೆ ಬರುತ್ತಿದೆ? ಹೊರ ರಾಜ್ಯ ಹೊರದೇಶದಿಂದ ಬರುತ್ತಿದೆಯಾ? ಮಾಹಿತಿ ಕೊಡಿ. ಒಂದು ದೇವಸ್ಥಾನದ ಹುಂಡಿ ಹಣಕ್ಕೂ ಲೆಕ್ಕ ಇರುತ್ತದೆ. ಹುಂಡಿಗೆ ಎಷ್ಟು ಹಣ ಬಿದ್ದಿದೆ ಎಂಬುದನ್ನು ಎಣಿಸಿ ಲೆಕ್ಕ ಇಡುತ್ತಾರೆ. ಅದನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸುತ್ತಾರೆ. ಹಾಗಾದರೆ ಆರ್‌ಎಸ್‌ಎಸ್ ದೇವಸ್ಥಾನ ದೇವರಿಗಿಂತ ದೊಡ್ಡವರಾಗಿಬಿಟ್ಟರಾ ಎಂದು ಕೆಂಡಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ಉದ್ಯಮ ವಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ಸರ್ಕಾರದ ಗಮನಕ್ಕೆ ತರಲು ಮುಂದಾದ FKCCI
ನನ್ನ ಮಾತಲ್ಲಿ ಹಿಂದೆ ಒಂದು, ಮುಂದೆ ಒಂದು ಇಲ್ಲ. ನಾನು ಸಾರ್ವಜನಿಕವಾಗಿ ಏನು ಮಾತನಾಡುತ್ತೇನೋ ಖಾಸಗಿಯಾಗಿಯೂ ಅದನ್ನೇ ಮಾತನಾಡುತ್ತೇನೆ. ನಾನು ಯಾರ ಮೇಲೂ ಪ್ರಭಾವ ಬೀರುತ್ತಿಲ್ಲ. 11 ಸಂಘಟನೆಗಳು ಚಿತ್ತಾಪುರದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೋರಿವೆ. ಅದಕ್ಕೆ ಶಾಂತಿ ಸಭೆ ಅಧಿಕಾರಿಗಳು ಮಾಡುತ್ತಾರೆ. ಅಧಿಕಾರಿಗಳೇ ತೀರ್ಮಾನ ಮಾಡಿ ಕೋರ್ಟ್‌ಗೆ ಸಲ್ಲಿಕೆ ಮಾಡುತ್ತಾರೆ. ಕೋರ್ಟ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನೇ ನಾವೂ ಪಾಲನೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೈದಿಗೆ 20,000ಕ್ಕೆ ಮೊಬೈಲ್ ಮಾರಲು ಯತ್ನ – ಪರಪ್ಪನ ಅಗ್ರಹಾರ ಜೈಲು ವೀಕ್ಷಕ ಬಂಧನ
ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ಏನು ಹೇಳುತ್ತದೋ ಅದನ್ನೇ ನಾವು ಮಾಡುತ್ತೇವೆ. ತ್ಯಾಗ ಅಲ್ಲ, ಫಾಲೋವಿಂಗ್ ದಿ ಆರ್ಡರ್. ಪಕ್ಷದಿಂದ ನಾನೇ ಹೊರತು, ನನ್ನಿಂದ ಪಕ್ಷ ಅಲ್ಲ ಅಲ್ವಾ? ಬಿ ಫಾರಂ ಬೇಕಾದಾಗ ಪಕ್ಷ ಬೇಕು, ಚುನಾವಣೆ ಗೆಲ್ಲಬೇಕು ಅಂದಾಗ ಪಕ್ಷ ಬೇಕು. ಪಕ್ಷ ಹೇಳಿದಾಗ ಎಲ್ಲ ಕೆಲಸಕ್ಕೂ ನಾವು ಸಿದ್ಧರಿದ್ದೇವೆ. ನಾನೇ ಇರಬಹುದು, ಕೃಷ್ಣ ಬೈರೇಗೌಡ ಇರಬಹುದು, ದಿನೇಶ್ ಇರಬಹುದು. ಪಕ್ಷ ಸೂಚನೆ ಕೊಟ್ಟರೆ ಎಲ್ಲ ಕೆಲಸವನ್ನೂ ಮಾಡಬೇಕಾಗುತ್ತದೆ. ನಾಳೆ ಚಿತ್ತಾಪುರ ಬೇಡ ಉತ್ತರ ಕನ್ನಡದಿಂದ ಸ್ಪರ್ಧೆ ಮಾಡು ಅಂದ್ರೆ ನಾನು ಅದಕ್ಕೂ ಸಿದ್ಧವಾಗಿರಬೇಕಾಗುತ್ತದೆ. ಇದನ್ನೂ ಓದಿ: ವಿದ್ಯಾವಂತರು ʻಎ ಖಾತಾ’ ಪರಿವರ್ತನೆ ಒಪ್ಪುತ್ತಿರೋದಕ್ಕೆ ಧನ್ಯವಾದ; ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದ ಡಿಕೆಶಿ
ಕಲಬುರಗಿ ಅಧಃಪತನಕ್ಕೆ ಖರ್ಗೆ ಕೊಡುಗೆ ಹೆಚ್ಚಲ್ಲವೇ ಎಂಬ ಸುನೀಲ್‌ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕಲಬುರಗಿ ಹಿಂದುಳಿದ ಜಿಲ್ಲೆ ಅಂತಲೇ 371ಜೆ ತಂದಿರೋದು. ಕಾಮನ್ ಸೆನ್ಸ್ ಇಲ್ಲದೆ ಮಾತನಾಡುತ್ತಾರೆ. ಕಲಬುರಗಿ ತಂದಿರೋ ಸೆಂಟ್ರಲ್ ಯೂನಿವರ್ಸಿಟಿನ ಆರ್‌ಎಸ್‌ಎಸ್ ಶಾಖೆ ಮಾಡಿಟ್ಟಿದ್ದೀರ. ಕಲಬುರಗಿಗೆ ಇದುವರೆಗೂ ಒಂದು ಸಚಿವ ಸ್ಥಾನ ಕೊಟ್ಟಿಲ್ಲ. ಕಲಬುರಗಿ, ಯಾದಗಿರಿ ಅಂತ ಬಂದಾಗ ಪಶು ಸಂಗೋಪನಾ ಇಲಾಖೆ ಫಿಕ್ಸ್. ದನ ಕಾಯೋ ಮಂತ್ರಿ ಸ್ಥಾನ ಕೊಟ್ಟಿದ್ದೀರ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ದತ್ತಪೀಠದ ಗೋರಿಗಳು ನಕಲಿ – ಹಿಂದೂಪರ ಸಂಘಟನೆಗಳ ಆರೋಪ
ಹಿಂದೆ ನಿಮ್ಮ ಸರ್ಕಾರವೇ ಇತ್ತು ಆರ್‌ಎಸ್‌ಎಸ್ ವಿರುದ್ಧ ತನಿಖೆ ಮಾಡಬಹುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದೇ ತಪ್ಪಾಗಿರೋದು ನಮ್ಮದು. ಸರ್ದಾರ್ ಪಟೇಲ್ ಅವರಿಂದ ಹಿಡಿದು ಇಂದಿರಾಗಾಂಧಿ ಅವರ ತನಕ ದೊಡ್ಡ ಮನಸ್ಸು ಮಾಡಿ ಮಾಡಿ ಇವರು ಈ ತರ ಬೆಳೆದಿದ್ದಾರೆ. ಎಲ್ಲ ಹಿಂದುಳಿದ ವರ್ಗದವರಿಗೆ, ದಲಿತರಿಗೆ ಆಳು ಮಾಡಲು ಇಟ್ಟುಕೊಂಡಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಜಾತಿ ಅನ್ನೋದು ಇಲ್ಲ ಅಂತ ಮಹಾನುಭಾವ ಹೇಳುತ್ತಿದ್ದ. ಎಲ್ಲರನ್ನೂ ನಾವು ಕರ್ಕೊಳ್ಳುತ್ತೇವೆ ಅಂತ ಮಹಾನುಭಾವ ಹೇಳುತ್ತಿದ್ದ. ಹೌದು ನೀವು ಕರ್ಕೊಂಡ್ರೆ ಆಳಾಗಿ ಕರೆದುಕೊಳ್ತೀರಾ, ಸರಸಂಘಚಾಲಕರನ್ನಾಗಿ ಒಬ್ಬ ಮಹಿಳೆ ಅಥವಾ ದಲಿತರಿಗೆ ಮಾಡಿ. ಅದು ಯಾಕೆ ಒಂದೇ ಒಂದು ಕಮ್ಯುನಿಟಿಗೆ ಸೀಮಿತ? ಮುಸ್ಲಿಮರು ಮತ್ತು ದಲಿತರು ಒಂದು ದಿನ ಆರ್‌ಎಸ್‌ಎಸ್ ಒಪ್ಪಬೇಕಾಗುತ್ತೆ ಅಂತ ಕಾಗೇರಿ ಸಾಹೇಬ್ರು ಸ್ಪೀಕರ್ ಇದ್ದಾಗ ನನಗೆ ಹೇಳಿದ್ರು. ಮೋಹನ್ ಭಾಗವತರನ್ನ ಇಳಿಸಿ ದಲಿತರನ್ನು ಮಾಡಿ ಅಂತ ನಾನು ಹೇಳಿದೆ ಆಗ ಕೋಲಾಹಲ ಆಯ್ತು, ಅಸೆಂಬ್ಲಿ ಮುಂದಕ್ಕೆ ಹಾಕಿದ್ರು ಎಂದರು. ಇದನ್ನೂ ಓದಿ: ತೀವ್ರ ಕಳಪೆ ಮಟ್ಟಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ – ಅ.29, 30ರಂದು ಕೃತಕ ಮಳೆ ಸಾಧ್ಯತೆ


