ಬೆಂಗಳೂರು: ನಟಿ ರನ್ಯಾ ರಾವ್ (Ranya Rao) ಕೇಸ್‌ನಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ಕೆಸರೆರಚಾಟ ಜೋರಾಗಿದೆ. ವಿಜಯೇಂದ್ರಗೆ ದುಬೈ ನಂಟು ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ, ರನ್ಯಾ ರಾವ್ ಕೇಸ್‌ನಲ್ಲಿ ಕೆಲವು ಸಚಿವರು ಇದ್ದಾರೆ ಎಂದಿದ್ದ ವಿಜಯೇಂದ್ರ ಅವರ ಹೇಳಿಕೆ ಕುರಿತು ಅವರು ಮಾತನಾಡಿದರು. ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡದ ಬಗ್ಗೆ ಹೆಸರು ಇದ್ದರೆ ಹೇಳಲಿ. ಡಿಆರ್‌ಐ ಇದೆ, ಸಿಬಿಐ ಇದೆ. ಬಿಜೆಪಿ ರಾಜ್ಯಾಧ್ಯಕ್ಷರು ಇಬ್ಬರು ಸಚಿವರು ಎಂದಿದ್ದಾರೆ. ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ವಂಚನೆಗೊಳಗಾಗಿದ್ದ 28 ಕನ್ನಡಿಗರ ರಕ್ಷಣೆ
ದುಬೈನಲ್ಲಿ ವಿಜಯೇಂದ್ರ ಅವರ ಸಾಕಷ್ಟು ದುಡ್ಡಿದೆ ಎಂದು ಯತ್ನಾಳ್ ಹೇಳುತ್ತಾರೆ. ವಿಜಯೇಂದ್ರ ದುಬೈಗೆ ಹೋಗೋದು ಬರೋದು ಮಾಡ್ತಾರೆ ಎಂದೂ ಹೇಳುತ್ತಾರೆ. ಸಚಿವರ ವಿಚಾರವಾಗಿ ಸುಮ್ಮನೆ ಗಾಳಿಯಲ್ಲಿ ಗುಂಡು ಹೋಡಿಯೋದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ | ಮಿನಿಸ್ಟರ್ ಕೈವಾಡವಿದೆ ಅನ್ನೋದು ಊಹಾಪೋಹ ಎಂದ ಜಮೀರ್
ಬಳಿಕ ಶಾಸಕ ರಿಜ್ವಾನ್ ಅರ್ಷಾದ್ ಮಾತನಾಡಿ, ಏರ್‌ಪೋರ್ಟ್ ಒಳಗೆ ರನ್ಯಾ ರಾವ್‌ಗೆ ಸಹಾಯ ಮಾಡಿದ್ದಾರೆ ಎನ್ನುತ್ತಿದ್ದಾರೆ. ಪ್ರೋಟೋಕಾಲ್ ಯಾರು ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಬೇಕು ಎಂದಿದ್ದಾರೆ. ಸಚಿವರ ಮಗ, ಅಧಿಕಾರಿ ಮಗಳು ಎಂದು ಪ್ರೋಟೋಕಾಲ್ ಕೊಡಲು ಬರುವುದಿಲ್ಲ.ಪ್ರೋಟೋಕಾಲ್ ಕೊಡಲು ಅದರದೇ ಆದ ನಿಯಮಗಳು ಇವೆ. ಅದಕ್ಕೆ ತನಿಖೆಗೆ ಕೊಟ್ಟಿದೆ. ಆದರೆ ಸಚಿವರು ಯಾರು ಎನ್ನುವುದನ್ನು ಸಿಬಿಐ, ಡಿಆರ್‌ಐ ಹೇಳಲಿ. ಕೇಂದ್ರ ಸರ್ಕಾರವೇ ತನಿಖೆ ನಡೆಸುತ್ತಿದೆ. ಅದನ್ನ ಬಿಟ್ಟು ಇಲ್ಲಿ ರಾಜ್ಯದಲ್ಲಿ ಕೇಳಿದ್ರೆ ಹೇಗೆ? ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ರೈತರ ಹೊಟ್ಟು, ಮೇವಿನ ಬಣವೆಗೆ ಬೆಂಕಿ – ಕೃಷಿ ಸಲಕರಣೆಗಳು ಬೆಂಕಿಗಾಹುತಿ