ಕಲಬುರಗಿ: ಯಾರು ಕಾಂಗ್ರೆಸ್ ಬಿಟ್ಟು ಹೋಗುತ್ತಾರೆ ಅವರಿಗೆ ಬೂಸ್ಟರ್ ಡೋಸ್ ಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‍ಗೆ ಕೊರೊನಾ ಬಂದಿದೆ ಎಂಬ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸಿಗೆ ಹಿನ್ನಡೆ ಅನ್ನುವ ಭ್ರಮೆಯಿದೆ. ಆದರೆ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾಗಿದೆ. ಬಿಜೆಪಿ ವೈರಸ್‍ಗೆ ಕಾಂಗ್ರೆಸ್ ಮಾತ್ರ ವ್ಯಾಕ್ಸಿನ್ ಇದ್ದಂತೆ ಎಂದರು. ಇದನ್ನೂ ಓದಿ: ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ
Advertisement
Advertisement
ಯಾರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಅವರಿಗೆ ಬೂಸ್ಟರ್ ಡೋಸ್ ಬೇಕಾಗಿದೆ. ಕಾಂಗ್ರೆಸ್ ಪಕ್ಷವೇ ಎಲ್ಲರಿಗೂ ಎಲ್ಲದಕ್ಕೂ ವ್ಯಾಕ್ಸಿನ್ ಇದ್ದ ಹಾಗೇ. ಬಡವರಿಗೆ ದೀನ ದಲಿತರಿಗೆ ಎಲ್ಲರಿಗೂ ಕಾಂಗ್ರೆಸ್ ಬೇಕಾಗಿದೆ. ನಮ್ಮ ಪಕ್ಷಕ್ಕೆ ಯಾವುದೇ ಡೋಸ್ ಬೇಕಾಗಿಲ್ಲ ಎಂದು ಸಿಡಿದರು.
Advertisement
Advertisement
ವಿಧಾನ ಪರಿಷತ್‍ನ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ ಹಿನ್ನೆಲೆ ಸಿಎಂ ಇಬ್ರಾಹಿಂ ಕಾಂಗ್ರೆಸ್‍ಗೆ ಗುಡ್ ಬೈ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ನಿರ್ಧಾರ ನೋಡಿ ನನಗೆ ಸಂತೋಷ ಆಯಿತು. ಇದರಿಂದ ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ಅವರಿಬ್ಬರ ವಿಚಾರಧಾರೆ ಒಂದೇ ಆಗಿರುವುದರಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ಅಶ್ಲೀಲ ಫೋಟೋ ವಾಟ್ಸಪ್ ಗ್ರೂಪ್‍ಗೆ ಹಾಕಿ ಪೇಚೆಗೆ ಸಿಲುಕಿದ ಬಿಜೆಪಿ ಮುಖಂಡ
ಚಾಮುಂಡೇಶ್ವರಿ ಸೋಲುತ್ತಾರೆ ಎಂದು ಬಾದಾಮಿಗೆ ಕರೆದೊಯ್ದಿದ್ದೇನೆ. ಅದಕ್ಕೆ ಅವರು ಒಳ್ಳೆ ಉಡುಗೊರೆ ಕೊಟ್ಟಿದ್ದಾರೆ. ಪಾದಯಾತ್ರೆಯಿಂದ ಕಾಂಗ್ರೆಸ್‍ಗೆ ಕೋವಿಡ್ ಸೋಂಕು ಬಂದಿದೆ. ಯಾವ ಡೋಸ್‍ನಿಂದಲೂ ಸೋಂಕು ಇಳಿತಿಲ್ಲ. ನಾನು ಕೊಡುವ ಡೋಸ್‍ನಿಂದ ಸೋಂಕು ಇಳಿಯುತ್ತಾ ನೋಡೋಣ ಎಂದು ಕಿಡಿಕಾರಿದ್ದರು.