ಕಲಬುರಗಿ: ಪ್ರಧಾನಿ ಮೋದಿ ಅವರೂ ಕರಿಮಣಿ ಮಾಲೀಕ (Karimani Malika) ಆಗಿದ್ದರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.
ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ (BJP) ನಿರೀಕ್ಷೆಗೆ ತಕ್ಕಷ್ಟು ಮತಗಳು ಬಂದಿಲ್ಲ. ಹಾಗಾಗಿ ವಿಶ್ವಗುರು ಅಂತ ಕರೆಸಿಕೊಳ್ಳುವ ಮೋದಿ ಹತಾಶರಾಗಿದ್ದಾರೆ. ಮೊದಲ ಹಂತದ ಮತದಾನದ ವೇಳೆ ಅಲ್ಪಸಂಖ್ಯಾತರ ಪರವಾಗಿದ್ದರು, ಮುಸ್ಲಿಮರ (Muslims) ಏಳಿಗೆ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ನಾಗಪುರ ಆರ್‌ಎಸ್‌ಎಸ್ ಕಚೇರಿಗೆ ಮೋದಿ ಹೋಗಿ ಬಂದ ಮೇಲೆ ಏನಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟಿದ್ದು ಭಾರತದಲ್ಲಿ, ಬೆಳೆದಿದ್ದು ಪಾಕಿಸ್ತಾನ – ಪಾಕ್ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ!
Advertisement
Advertisement
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಿಂದೂ ಮಹಿಳೆಯ ಮಂಗಳಸೂತ್ರ ಸಹ ಉಳಿಯೋದಿಲ್ಲ ಅಂತಾ ಮೋದಿ ಹೇಳಿದ್ದಾರೆ. ಸೋನಿಯಾ ಗಾಂಧಿ ದೇಶಕ್ಕಾಗಿ ತಮ್ಮ ತಮ್ಮ ಮಂಗಳ ಸೂತ್ರ ಬಲಿಕೊಟ್ಟರು. ಎಲ್‌ಟಿಟಿಯವರು ರಾಜೀವ್‌ಗಾಂಧಿ ಅವರನ್ನ ಹತ್ಯೆಮಾಡಿದರು. ಮೋದಿ ಅವರೂ ಕರಿಮಣಿ ಮಾಲೀಕ ಆಗಿದ್ರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಜನ ಚಿನ್ನ ಆಸ್ತಿ-ಪಾಸ್ತಿ ಮಾರಾಟ ಮಾಡಿದ್ದು ಮೋದಿಯ ಮಾಸ್ಟರ್ ಸ್ಟ್ರೋಕ್‌ಗಳಿಂದ, ಬೆಲೆ ಏರಿಕೆ, ಕೊರೊನಾ ವೇಳೆ ಚಿಕಿತ್ಸೆಗೋಸ್ಕರ ಜನ ತಮ್ಮ ಆಸ್ತಿ ಮಾರಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ
Advertisement
Advertisement
ಮೋದಿಯವರ ಭಾಷಣಕ್ಕೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ? ಅವರ ಭಾಷಣದಲ್ಲಿ ಬರೀ ರಾಮಮಂದಿರ, ಹನುಮಾನ್ ಚಾಲಿಸಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇವುಗಳ ಹೆಸರು ಬಿಟ್ಟರೆ ಬೇರೆನೂ ಬರುತ್ತಿಲ್ಲ. ಚುನಾವಣಾ ಆಯೋಗ ಸತ್ತು ಹೋಗಿದೆಯಾ? ಮೋದಿ ಅವರ ದ್ವೇಷದ ಭಾಷಣಗಳಿಗೆ ಚುನಾವಣಾ ಆಯೋಗದಿಂದ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ. ಸಾಕಷ್ಟು ದೂರುಗಳನ್ನ ಕೊಟ್ಟರೂ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ರೆ ನಮಗೆ ಮಾತ್ರ ತಕ್ಷಣವೇ ನೋಟೀಸ್ ಜಾರಿ ಮಾಡ್ತಾರೆ. ಎಲೆಕ್ಷನ್ ಕಮಿಷನ್‌ನನ್ನ ಕಿತ್ತು ಬಿಸಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 93.5% ಮಾರ್ಕ್ಸ್ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು