ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಕುರ್ಚಿಗಾಗಿ ಆರ್‌ಎಸ್‍ಎಸ್‍ನ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಕುರ್ಚಿಗಾಗಿ ಆರ್‍ಎಸ್‍ಎಸ್ ಕೈಗೊಂಬೆಯಾಗಿದ್ದಾರೆ. ಅವರ ತಂದೆ ಎಸ್.ಆರ್ ಬೊಮ್ಮಾಯಿ ಹೀಗಿರಲಿಲ್ಲ. ಅವರು ವಿಶಾಲ ಮನಸ್ಥಿತಿ ಹೊಂದಿದ್ದರು. ಆದರೆ, ಸಿಎಂ ಆರ್‌ಎಸ್‍ಎಸ್ ತಾಳಕ್ಕೆ ಕುಣಿಯುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಮೂವರ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಗೃಹ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಖಾಕಿ ಬಗ್ಗೆ ಭಯನೂ ಇಲ್ಲ, ಗೌರವವೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಅಗಲಿ 9ನೇ ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ
ಗುರುವಾರ ಸಿಎಂ ಪ್ರವೀಣ್ ಸಂತಾಪಕ್ಕೆ ತೆರಳಿದ್ದರು. ನಂತರ ಕೆಲವೇ ಗಂಟೆಗಳಲ್ಲಿ ಮತ್ತೊಂದು ಕೊಲೆಯಾಗುತ್ತದೆ ಅಂದರೆ ಇದರಲ್ಲಿ ಗುಪ್ತಚರ ಸಂಪೂರ್ಣ ವಿಫಲವಾಗಿದೆ. ಖಾಕಿ ಬಗ್ಗೆ ಭಯ ಇದೆ ಅಂತಾ ಹೇಳಲು ಆಗುತ್ತಿದೆಯಾ? ಎಸ್‍ಡಿಪಿಐ, ಪಿಎಫ್‍ಐರನ್ನು ಬೆಳೆಸುತ್ತಿರುವುದು ಬಿಜೆಪಿಯೇ. ಇದನ್ನು ಸ್ವತಃ ಆರ್‌ಎಸ್‍ಎಸ್‍ನ ಪ್ರಮುಖರು ಹೇಳುತ್ತಿದ್ದಾರೆ. ಇವರು ಕಾಂಗ್ರೆಸ್‍ಗೆ ಉತ್ತರ ಕೊಡುವುದು ಬೇಡ. ಅವರದೇ ಪಕ್ಷದ ಕಾರ್ಯಕರಿಗೆ ಉತ್ತರಿಸಲಿ ಎಂದಿದ್ದಾರೆ. ಇದನ್ನೂ ಓದಿ: ದಯವಿಟ್ಟು ಯಾರೂ ಪ್ರಚೋದನೆ ಕೊಡುವಂತಹ ಹೇಳಿಕೆ ಕೊಡಬೇಡಿ: ಯು.ಟಿ ಖಾದರ್
ಸರ್ಕಾರದಿಂದ ಪರಿಹಾರ ನೀಡಿಕೆಗೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದಿಂದ ಈಗ 25 ಲಕ್ಷ ಪರಿಹಾರ ಕೊಡುತ್ತಿದ್ದಾರೆ. ಪರಿಹಾರ ಕೊಡುವುದಿದ್ದರೆ ಎಲ್ಲರಿಗೂ ಕೊಡಲಿ. ಇದರಲ್ಲಿ ತಾರತಮ್ಯ ಏಕೆ? ಅಷ್ಟಕ್ಕೂ ಇದನ್ನು ಯಾವುದರಿಂದ ಕೊಡುತ್ತಿದ್ದಾರೆ. ಕೊರೊನಾ ಫಂಡ್‍ನಿಂದ ಪರಿಹಾರ ಕೊಡುತ್ತಿದೆ. ಕೊರೊನಾದಿಂದ ಮೃತರಾದವರಿಗೆ ಕೊಡುವ ಹಣದಿಂದ ಕೊಡುತ್ತಿದ್ದೀರಾ? ಹಾಗಾದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಏನಾಯಿತು? ಹರ್ಷ ಕುಟುಂಬಕ್ಕೆ ಕೊರೊನಾ ಫಂಡ್‍ನಿಂದ ಪರಿಹಾರ ನೀಡಿದ್ದರು. ನಿನ್ನೆ ಪ್ರವೀಣ್ ಕುಟುಂಬಕ್ಕೆ ಯಾವ ಫಂಡ್‍ನಿಂದ ಕೊಟ್ಟರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‍ನ್ನ ಸೋಲಿಸಲಿ ಪಿಎಫ್‍ಐ, ಎಸ್‍ಡಿಪಿಐಗೆ ಫಂಡ್ ಮಾಡುತ್ತಾರೆಂದು ಆರ್‌ಎಸ್‍ಎಸ್‍ನವರೇ ಹೇಳುತ್ತಿದ್ದಾರೆ. ಯಾರು ಯಾರನ್ನು ಸಾಕುತ್ತಿದ್ದಾರೆ ಎಂಬುದಕ್ಕೆ ಮೊದಲು ಅವರೇ ಉತ್ತರ ಕೊಡಲಿ. ಯಾವಾಗ ಬೇಕೋ ಆಗ ಬಳಸಿಕೊಳ್ಳುತ್ತಿದ್ದಾರೆ. ಇದು ನಾವು ಸಾಕಿದ ಗಿಣಿಯೇ ಪ್ರಶ್ನಿಸಿದ್ದಾರೆ.