– ಕರಡಿ ಮೈಮೇಲಿನ ಕೂದಲಿನಷ್ಟು ಆರೋಪ ಬಿಜೆಪಿ ನಾಯಕರ ಮೇಲಿದೆ ಎಂದ ಸಚಿವ
ಬೆಂಗಳೂರು: 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು 570 ಕೋಟಿ ರೂ. ಬಾಂಡ್ ಹಣ ನೀಡಿವೆ. ಈಗ ಬಿಜೆಪಿ ನಾಯಕರ (BJP Leaders) ಮೇಲೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಮೇಲೆ ರಾಜೀನಾಮೆ ನೀಡಬೇಕಲ್ವಾ? ಹಾಗೆ ರಾಜೀನಾಮೆ ನೀಡಿದರೆ ಇಡೀ ಬಿಜೆಪಿಯೇ ಖಾಲಿ ಆಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಎಫ್‌ಐಆರ್ ದಾಖಲಾದ ಮೇಲೆ ರಾಜೀನಾಮೆ ನೀಡಬೇಕಲ್ವಾ? ಹಾಗೆ ರಾಜೀನಾಮೆ ನೀಡಿದರೆ ಇಡೀ ಬಿಜೆಪಿಯೇ ಖಾಲಿ ಆಗುತ್ತದೆ. 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು 570 ಕೋಟಿ ರೂ. ಬಾಂಡ್ (Electoral Bonds) ಹಣ ನೀಡಿವೆ ಎಂದಿದ್ದಾರೆ.
ಪ್ರಹ್ಲಾದ್ ಜೋಶಿ ಅವರ ಹೇಳಿಕೆ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಜೋಶಿಯವರು ಯಾರನ್ನು ಮೆಚ್ಚಿಸುತ್ರಿದ್ದಾರೋ ಗೊತ್ತಿಲ್ಲ. ರಾಹುಲ್, ಸೋನಿಯಾ ಜೈಲಿಗೆ ಹಾಕಬೇಕು ಅಂತಾರೆ, 10 ವರ್ಷದಿಂದ ನೀವೇ ಅಧಿಕಾರದಲ್ಲಿ ಇದ್ದೀರಾ ಬೆರಳಿ ಚೀಪ್ತಾ ಇದ್ದೀರಾ? ಚಾಂದನಿ ಚೌಕ್‌ನಲ್ಲಿ ಬೇಲ್ ಪುರಿ ತಿನ್ನೋಕೆ ಹೋಗಿದ್ದೀರಾ? ಜೋಶಿಯವರೇ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಪ್ರಕರಣ – ಹತ್ಯೆ ಬಳಿಕ ಪಶ್ಚಾತ್ತಾಪ ಪಟ್ಟಿದ್ದ ಹಂತಕ
23 ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ಆಗಿದೆ:
ವಿಜಯೇಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್ ಇದೆ. ಅದನ್ನು ಜೋಶಿ ಮರೆತಿದ್ದಾರಾ..? ಅತ್ಯಂತ ಇನಕಾಂಪಿಟೆಂಟ್ ಗೃಹ ಸಚಿವರು ಅಂದ್ರೆ ಅದು ಅಮಿತ್ ಶಾ, 10 ವರ್ಷದಿಂದ ಏನ್ ಮಾಡ್ತಿದ್ರಿ? ವಿಜಯೇಂದ್ರ ಜೈಲಿಗೆ ಹೋಗ್ತಾರೆ ಅಂತ ನಿಮ್ಮದೇ ಶಾಸಕರು ಹೇಳ್ತಾರೆ. ಎಷ್ಟು ಬಾರಿ ಮಾರಿಷಸ್ ದುಬೈಗೆ ಹೋಗಿದ್ದಾರೆ? ಅಂತ ನಿಮ್ಮ ಪಾಸಪೋರ್ಟ್ ತೋರಿಸಿ. ನರಿಗಳು ನ್ಯಾಯ ಹೇಳೋದೂ ಒಂದೇ ಬಿಜೆಪಿಯವರು ನ್ಯಾಯ ಹೇಳೋದೂ ಒಂದೇ. ಬಿಜೆಪಿಯ 23 ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ಆಗಿದೆ. ಆರ್.ಅಶೋಕ್ ಭೂಕಬಳಿಕೆ ಪ್ರಕರಣದಲ್ಲಿ ಎ1, ಇದರಲ್ಲಿ ಪೂಜ್ಯ ಅಪ್ಪಾಜಿಯವರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಅವರ ಹೆಸರು ಬಂದಾಗ ಜೋಶಿಯವರು ಯಾಕೆ ಸುಮ್ಮನಾದ್ರಿ? ಬಿಜೆಪಿಯಲ್ಲಿ ಒಂದಿಬ್ಬರು ನೈತಿಕತೆ ಇರುವವರಿದ್ದಾರೆ. ಯಡಿಯೂರಪ್ಪಗೆ ನಾಚಿಕೆ ಇದ್ರೆ ಅವರು ಸ್ಟೇಜ್‌ಗೆ ಹತ್ತಬಾರದು ಅಂತ ಕೆಲವರು ಹೇಳಿದ್ದಾರೆ. ಅದನ್ನು ಹೇಳಿದಾಗ ಯಾವ ಬಿಜೆಪಿ ನಾಯಕರೂ ಮಾತಾಡಲ್ಲ. ಮುನಿರತ್ನ ವಿಷಯ ಬಂದಾಗ ಜೋಶಿ ಸಾಹೇಬ್ರು ಮಾತೇ ಆಡಲ್ಲ. ಮುನಿರತ್ನ ವಿಚಾರವನ್ನು ಸಮರ್ಥನೆ ಮಾಡಿಕೊಂಡ್ರಲ್ಲ ನಾಚಿಕೆ ಆಗಲ್ವಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿರೋಧದ ನಡ್ವೆ ಮೈಸೂರಲ್ಲಿ ಮಹಿಷ ದಸರಾ ಆಚರಣೆ – ಜಿಲ್ಲಾಡಳಿತ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ
ಲೋಕಾಯುಕ್ತ ಐಜಿಪಿ ಹಾಗೂ ಹೆಚ್‌ಡಿಕೆ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೆಚ್‌ಡಿಕೆ ಎರಡು ಬಾರಿ ಸಿಎಂ ಆಗಿದ್ದವರು ಹಾಲಿ ಕೇಂದ್ರ ಸಚಿವರು. ಅವರು ಸಿಎಂ ಆಗಿದ್ದ ಅವಧಿಯಲ್ಲಿ ಈ ಅಧಿಕಾರಿ ಇರ್ಲಿಲ್ವಾ? ಇವರ ಕೈಕೆಳಗೆ ಅವರು ಕೆಲಸ ಮಾಡಿಲ್ವಾ? ಆಗ ಇವರು ಎಂಥವರು ಅನ್ನೋದು ಅವರಿಗೆ ಗೊತ್ತಿರಲಿಲ್ವಾ? ಯಾವ ಕೇಡರ್ ಅಂತ ಆಗ ಇವರಿಗೆ ಗೊತ್ತಿರ್ಲಿಲ್ವಾ? ಒಬ್ಬ ಅಧಿಕಾರಿ ಇವರ ಪರವಾಗಿ ಕೆಲಸ ಮಾಡಿದರೇ ಒಳ್ಳೆಯವನು ಕಾನೂನು ಪಾಲನೆ ಮಾಡಿದರೆ ಕೆಟ್ಟವನಾ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು : ಮಂಜುನಾಥ ಸಾವಂತ
ಯಾರನ್ನ ಹಂದಿ ಎಂದಿದ್ದಾರೋ ಗೊತ್ತಿಲ್ಲ:
ಕುಮಾರಸ್ವಾಮಿಯನ್ನು ಹಂದಿಗೆ ಹೋಲಿಸಿದ ಚಂದ್ರಶೇಖರ್ ಪತ್ರಕ್ಕೆ ಪ್ರಕ್ರಿಯಿಸಿ, ಅದು ಕೇವಲ ಕೋಟ್ ಅಷ್ಟೇ, ನಾನು ಪತ್ರವನ್ನು ಓದಿದ್ದೇನೆ ಹೊರತು ನನಗೂ ಅದಕ್ಕೂ ಸಂಬಂಧ ಇಲ್ಲ. ಪತ್ರ ಬರೆದವನು ನಾನಲ್ಲ ಸ್ವೀಕಾರ ಮಾಡಿದವನು ನಾನಲ್ಲ. ಐಜಿಪಿ ಚಂದ್ರಶೇಖರ್ ಅವರು ಅವರ ಸಿಬ್ಬಂದಿಯ ನೈತಿಕ ಧೈರ್ಯಕ್ಕಾಗಿ ಪತ್ರ ಬರೆದಿದ್ದಾರೆ. ಅವರ ತನಿಖೆ ಮಾಡಿದವರು ಕೂಡ ಚಂದ್ರಶೇಖರಲ್ಲ. ಚಂದ್ರಶೇಖರ್ ಯಾರನ್ನ ಹೋಲಿಕೆ ಮಾಡಿ ಹಂದಿ ಎಂದಿದ್ದಾರೋ ನನಗೆ ಗೊತ್ತಿಲ್ಲ. ನೀವು ಊಹೆ ಮಾಡಿದ್ದರೆ ಅದು ನಿಮಗೆ ಬಿಟ್ಟಿದ್ದು. ಮೊದಲು ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಹೆಚ್‌ಡಿಕೆ ಸಹಿಯೇ ಮಾಡಿಲ್ಲ ಅಂದ್ರು. ಸಹಿ ಫೋರ್ಜರಿ ಆಗಿದೆ ಅಂದ್ರು ಕೊನೆಗೆ ಕೋರ್ಟ್‌ನಲ್ಲಿ ಸಹಿ ಮಾಡಿದ್ದು ನಾನೇ ಎಂದು ತಿಳಿಸಿದ್ದಾರೆ. ಈಗ ಮತ್ತೆ ಸಹಿ ಮಾಡಿದ್ದು ನಾನೇ ಎನ್ನುತ್ತಿದ್ದಾರೆ. ಅಂದ್ರೆ ಇದು ಮರ್ಡರ್ ಮಾಡಿಲ್ಲ ಹಾಫ್ ಮರ್ಡರ್ ಮಾಡಿದ್ದೇನೆ ಅಂದಂಗಾಯ್ತು ಅಂದ ತಿರುಗೇಟು ನೀಡಿದ್ದಾರೆ.
ಕರಡಿ ಮೈಮೇಲಿನ ಕೂದಲಿನಷ್ಟು ಆರೋಪಗಳಿವೆ:
ಮುಂದುವರಿದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ವಿಜಯೇಂದ್ರ, ಯಡಿಯೂರಪ್ಪರನ್ನ ಮೊದಲು ವಜಾ ಮಾಡಿ, ಮುನಿರತ್ನರನ್ನ ಪಾರ್ಟಿಯಿಂದ ತೆಗೆಯಿರಿ ನೋಡೋಣ. ಇದೆಲ್ಲ ಆದಮೇಲೆ ನಮ್ಮಹತ್ರ ಬನ್ನಿ. ಕರಡಿ ಮೈಮೇಲಿನ ಕೂದಲಿನಷ್ಟು ಆರೋಪಗಳು ಬಿಜೆಪಿ ನಾಯಕರ ಮೇಲಿದೆ. ನಾವು ಕಾನೂನು ಹೋರಾಟ ಮಾಡ್ತೇವೆ ಹೆದರೋದಿಲ್ಲ ಜಗ್ಗೋದಿಲ್ಲ. ದೆಹಲಿ ತನಕವೂ ಕೂಡ ನಮ್ಮ ಹೋರಾಟ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: 136 ಶಾಸಕರಿಗೆ 1 ರೂಪಾಯಿ ಅನುದಾನ ಕೊಟ್ಟಿಲ್ಲ, ಇನ್ನೂ ಚನ್ನಪಟ್ಟಣಕ್ಕೆ 500 ಕೋಟಿ ಎಲ್ಲಿಂದ ಬರುತ್ತೆ?- ನಿಖಿಲ್