ಬೆಂಗಳೂರು: AI ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಅದಕ್ಕೆ ರಾಹುಲ್ ಗಾಂಧಿ ಹೇಗೆ ಹೊಣೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕೆಲ ಯುವಕರು ಹೇಳದೆ ಕೇಳದೇ ಏನೋ ಮಾಡಿರಬಹುದು ಅದಕ್ಕೆ ರಾಹುಲ್ ಗಾಂಧಿಯವರೇ (Rahul Gandhi) ಹೇಳಿದ್ದಾರೆ ಅಂತ ಇದಿಯಾ? ಎಂದಿದ್ದಾರೆ. ಇದನ್ನೂ ಓದಿ: ಶಾಸಕ ಚಂದ್ರು ಲಮಾಣಿಗೆ ಮಾ.2ರ ತನಕ ನ್ಯಾಯಾಂಗ ಬಂಧನ

ನಮ್ಮ ಕಾಮನ್ ವೆಲ್ತ್ ಗೇಮ್ಸ್ ನಡೆದಾಗ 56 ದೇಶಗಳು ಬಂದಿದ್ವು ಆಗ ಇದೇ ಬಿಜೆಪಿ ಅವರು ಪ್ರತಿಭಟನೆ ಮಾಡಿರುವ ಇತಿಹಾಸ ಇದೆ. ಆಗ ದೇಶದ ಮರ್ಯಾದೆ ಏನಾಗಿಲ್ವ? ಟ್ರಂಪ್ ಅವರು ದಿನ ಬೆಳಗ್ಗೆ ಎದ್ದು ನಾನೇ ಯುದ್ದ ನಿಲ್ಲಿಸಿದ್ದೇನೆ ನನ್ನಿಂದಲೇ ಎಲ್ಲ ನಡೆಯುತ್ತಿದೆ. ನಾನು ಮೋದಿ ಅವರ ಭವಿಷ್ಯವನ್ನ ನಿರ್ನಾಮ ಮಾಡಬಹುದು ಅಂದಾಗ ದೇಶದ ಮರ್ಯಾದೆ ಹಾಳಾಗಲ್ವ? ನಾವು ಹೇಳುವುದು ಬಿಡಿ, ವಿದೇಶದಿಂದ ಬಂದಂತ ತಜ್ಞರು ಅವರು ಈ ಸಮ್ಮಿಟ್ ಬಗ್ಗೆ ಏನ್ ಹೇಳಿದ್ದಾರೆ? ಆಗ ದೇಶದ ಮರ್ಯಾದೆ ಹೋಗಿಲ್ವ.? AI ಸಮ್ಮಿಟ್ ಸರಿಯಾಗಿ ನಡೆಸಿಕೊಂಡು ಹೋಗಿದ್ರೆ ಪ್ರತಿಭಟನೆ ಅವಶ್ಯಕತೆ ಇರಲಿಲ್ಲ. ಚೀನಾಗೆ ಭೂಮಿ ಕೊಟ್ಟಾಗ ದೇಶದ ಮರ್ಯಾದೆ ಹಾಳಾಗಿಲ್ವ? ಆಪರೇಷನ್ ಸಿಂಧೂರ ಬಗ್ಗೆ ಅಮೆರಿಕದವರು (America) ಹೇಳಿದಾಗ ಮರ್ಯಾದೆ ಹೋಗಿಲ್ವ ಶೇ.50 ರಷ್ಟು ತೆರಿಗೆ ಹಾಕಿದಾಗ ಮರ್ಯಾದೆ ಹೋಗಿಲ್ವ? ಅಂತಾ ಪ್ರಶ್ನೆಗಳ ಮಳೆ ಸುರಿಸಿದ್ರು.

ಯಾರೋ ನಾಲ್ಕು ಜನ ಪ್ರತಿಭಟನೆ ಮಾಡಿದ್ದನ್ನ ರಾಹುಲ್ ಗಾಂಧಿ ಮೇಲೆ ಹಾಕೋದು ಸರಿಯಲ್ಲ. ಬಿಜೆಪಿಯವರು ಮಾಡಿದ್ದಾರಲ್ಲ ಪ್ರಧಾನಿ ವಿದೇಶಕ್ಕೆ ಹೋಗಿ ಭಾರತೀಯರಾಗಿ ಹುಟ್ಟಿದ್ದಕ್ಕೆ ನಾಚಿಕೆ ಆಗ್ತಿತ್ತು, ಎಂದಿದ್ದರಲ್ಲ ಅವಾಗ ಮರ್ಯಾದೆ ಹೋಗಿಲ್ವಾ? ಇವರೆಲ್ಲಾ ಏನೂ ಮಾಡೇ ಇಲ್ಲ ಅಂತಾರೆ. ದೇಶದ ಮರ್ಯಾದೆ ಪಾವರ್ಟಿ ಇಂಡೆಕ್ಸ್‌ನಲ್ಲಿ ಪಾಸ್ ಪೋರ್ಟ್ ಸ್ಟೇಟಸ್ ಅಲ್ಲಿ ಹೋಗಲ್ವಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪೋಕ್ಸೊ ಕೇಸ್ ದಾಖಲು

