ಬೆಂಗಳೂರು: ಖಾಸಗಿ ಫೋರೆನ್ಸಿಕ್ ವರದಿ (FSL) ತರಿಸಿ ಬಹಿರಂಗ ಪಡಿಸಿದ ಬಿಜೆಪಿಯ ನಡೆ ದೇಶದ್ರೋಹದ ಕೆಲಸ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಖಾಸಗಿ ಸಂಸ್ಥೆಗಳನ್ನಿಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು (Private FSL Report) ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವುದು ದೇಶದ್ರೋಹದ ಕೆಲಸ. ಇದು ಸಾಮಾನ್ಯ ಪ್ರಕರಣ ಅಲ್ಲ. ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅಂತ ಹೇಳ್ತಾ ಇದ್ದಾರೆ. ಅದಕ್ಕೆ ಸರ್ಕಾರವೇ ಉತ್ತರ ಕೊಡಬೇಕು. ಬಿಜೆಪಿಯವರು ಖಾಸಗಿ ಸಂಸ್ಥೆಗಳ ಹತ್ತಿರ ಹೋಗಿ ಅದನ್ನು ಪಬ್ಲಿಕ್ ಮಾಡ್ತಾ ಇದ್ದಾರಲ್ಲ, ಇದು ನಿಜಕ್ಕೂ ದೇಶದ್ರೋಹದ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್ ಮೂಲಗಳು
Advertisement
Advertisement
ರಾ ಫೂಟೇಜ್ ಎಲ್ಲಿಂದ ಸಿಕ್ತು?: ಕ್ಲೂ ಫಾರ್ ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಅನ್ನೋ ಸಂಸ್ಥೆಯ ಕ್ರೆಡಿಬಿಲಿಟಿ ಏನು? ಇವರು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ, ಆ ಸಂಸ್ಥೆಗೆ ಸರ್ಕಾರದ ಪ್ರಮಾಣೀಕೃತ ಇದೆಯೇ ಅಥವಾ ತರಬೇತಿ ಇದೆಯೇ ನನಗೆ ಗೊತ್ತಿಲ್ಲ. ಇದ್ದರೂ ಕೂಡ ಆ ಲ್ಯಾಬ್ ಈ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮತ್ತು ಸರ್ಕಾರದ ಗಮನಕ್ಕೆ ತಂದು ವರದಿ ಕೊಡಬೇಕಿತ್ತು. ಅಷ್ಟು ಮೆಚುರಿಟಿ ಸಂಸ್ಥೆಗೆ ಇರಬೇಕಾಗಿತ್ತು. ಬಿಜೆಪಿಯವರು ಫೋರೆನ್ಸಿಕ್ ಲ್ಯಾಬ್‌ಗೆ ಕೊಟ್ಟಿರುವ ಫೂಟೇಜ್ ಯಾವುದು? ಇಂಟರ್ನೆಟ್‌ನಲ್ಲಿ ವೀಡಿಯೋ ಕ್ವಾಲಿಟಿ ಸಪ್ರೆಸ್ ಆಗೇ ಆಗುತ್ತದೆ. ಯಾವ ಫೂಟೇಜ್ ಕೊಟ್ಟಿದ್ದಾರೆ? ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ಎಲ್ಲಿಂದ ಸಿಕ್ತು? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಯಾರ ಅನುಮತಿ ಪಡೆದು ಪರೀಕ್ಷೆ ಮಾಡಿದ್ದಾರೆ- ಖಾಸಗಿ ಎಫ್‌ಎಸ್‌ಎಲ್ ವರದಿಗೆ ಪರಮೇಶ್ವರ್ ಗರಂ
Advertisement
Advertisement
ಸಂವಾದ RSS ಭಜನೆ ಮಾಡುವ ಸಂಸ್ಥೆ: ಸಂವಾದ ಫೌಂಡೇಶನ್‌ಗೆ ಈ ಕೇಸ್‌ನಲ್ಲಿ ಏನು ಆಸಕ್ತಿ? ಸಂವಾದ ಆರ್‌ಎಸ್‌ಎಸ್ ನವರು ಭಜನೆ ಮಾಡುವ ಸಂಸ್ಥೆ. ಇದು ಯಾವ ರೀತಿ ಸಾಮಾಜಿಕ ಜಾಲತಾಣದಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಫೂಟೇಜ್ ಕೊಡೋದಕ್ಕೆ, ಲ್ಯಾಬ್ ಟೆಸ್ಟ್ ಮಾಡೋದಕ್ಕೆ ಅವರು ಯಾರು? ನಾನೂ ಖಾಸಗಿ ಸಂಸ್ಥೆಗಳಿಗೆ ಕೊಟ್ಟು ರಿಪೋರ್ಟ್ ತೆಗೆದುಕೊಂಡಿದ್ದೇನೆ. ನಾನೂ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬಹುದಲ್ಲ? ಆದ್ರೆ ಆ ಕೆಲಸ ನಾನು ಮಾಡಿಲ್ಲ. ನಾನೂ ಯಾವುದೋ ರಿಪೋರ್ಟ್ ತಂದು ಹೇಳಬಹುದಲ್ಲ. ಬಿಜೆಪಿಯವರು ಮಾಡಿದ್ದು ನಿಜವಾದ ದೇಶದ್ರೋಹ. ಸಮಾಜದಲ್ಲಿ ಆತಂಕ ಇರಬೇಕು ಅಂತ ಇವರು ಯಾಕೆ ಬಯಸುತ್ತಿದ್ದಾರೆ? ಸಂವಾದ ಫೌಂಡೇಷನ್ ರಿಪೋರ್ಟ್ ತೆಗೆದುಕೊಳ್ಳೋದಕ್ಕೆ ಇವರ್ಯಾರು? ಅವರಿಗೇನು ಆಸಕ್ತಿ? ಸರ್ಕಾರ ಪದೇ-ಪದೇ ಎಫ್ಎಸ್ಎಲ್ ವರದಿ ಪರಿಶೀಲನೆ ಮಾಡೋದಕ್ಕೆ ಕಾರಣ ಯಾವುದೇ ಗೊಂದಲ ಇರಬಾರದು ಅಂತ. ಇವರು ಯಾವ ಫೂಟೇಜ್ ಕೊಟ್ಟಿದ್ದಾರೋ ಗೊತ್ತಿಲ್ಲ. ಗೃಹ ಇಲಾಖೆ ಇದರ ಬಗ್ಗೆ ವರದಿ ಕೊಡಬೇಕೇ ಹೊರತು ಸಂವಾದ ಫೌಂಡೇಶನ್ ಅಲ್ಲ. ಬಿಜೆಪಿ ಒಂದು ಜವಾಬ್ದಾರಿಯುತ ಪಕ್ಷವಾಗಿ ಸಂವಾದ ಹಾಕಿದ ತಾಳಕ್ಕೆ ಕುಣಿಯುತ್ತಾರಲ್ಲ ಇವರಿಗೆ ನಾಚಿಕೆ ಆಗಲ್ಲವೇ ಎಂದು ಕಿಡಿ ಕಾರಿದ್ದಾರೆ.
ನಮಗೂ ಸೈಬರ್ ಕಂಪನಿಗಳು ಗೊತ್ತಿವೆ: ಅಂದು ಮಂಡ್ಯದಲ್ಲಿ ಬಿಜೆಪಿಯವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ರು. ಅವರ ಮೇಲೆ ನಾವೂ ಕೇಸ್ ಹಾಕಬಹುದು. ಇವರು ಕೊಟ್ಟ ವರದಿಯಲ್ಲಿ ಹೈಲಿ ಪ್ರೊಬ್ಯಾಬಲ್ ಅಂತ (ಹೆಚ್ಚು ಸಂಭವನೀಯ) ಇದೆ. ಹಣ ಕೊಟ್ಟರೆ ಯಾರು ಬೇಕಾದರೂ ವರದಿ ಕೊಡ್ತಾರೆ. ಸಂವಾದ ರಿಪೋರ್ಟ್ ನಲ್ಲಿ ಗೃಹ ಸಚಿವರು ಹೇಳಿದ್ದು ಸರಿಯಾಗಿದೆ. ನಮಗೂ ಸೈಬರ್ ಕಂಪನಿಗಳು, ಅನಿಮೇಷನ್ ಕಂಪನಿಗಳು ಗೊತ್ತಿದೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು ನಾನು ಮಾಡಿಸಿದ ವರದಿ ಬಹಿರಂಗ ಮಾಡಿದ್ದೀನಾ? ಖಾಸಗಿ ಸಂಸ್ಥೆ, ಫೌಂಡೇಷನ್ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಿತ್ತು. ಇದೇ ಪ್ರೊಬ್ಯಾಬಲ್ ವರದಿಗೆ ಬಿಜೆಪಿ ಇಷ್ಟೆಲ್ಲ ಕುಣಿಯಬೇಕಾ? ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣದಲ್ಲೇ ಟೈಮರ್ ಫಿಕ್ಸ್ – ಕೊನೆಯ 10 ನಿಮಿಷದ ಕಂಪ್ಲೀಟ್ ವರದಿ ಓದಿ
ಇವರ ಉದ್ದೇಶ ಬಹಳ ಸ್ಪಷ್ಟವಾಗಿದೆ. ಸಮಾಜದಲ್ಲಿ ಆತಂಕ ಇದ್ದಾಗಲೆಲ್ಲ ಬಿಜೆಪಿಗೆ ರಾಜಕೀಯವಾಗಿ ಲಾಭ ಆಗಿದೆ ಅನ್ನೋ ವರದಿ ಇದೆ. ಸಮಾಜದಲ್ಲಿ ಗೊಂದಲ ಇದ್ದಾಗಲೆಲ್ಲ ಬಿಜೆಪಿಗೆ ರಾಜಕೀಯ ಲಾಭ ಆಗುತ್ತದೆ. ಸಂವಾದ ಯಾವತ್ತೂ ದೀಪ ಹಚ್ಚುವ ಕೆಲಸ ಮಾಡಿಲ್ಲ, ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡಿದೆ. ಆ ರಿಪೋರ್ಟ್ ಇಟ್ಟುಕೊಂಡು ಕುಣಿಯುತ್ತಿದ್ದಾರೆ. ಕೇಶವ ಕುಂಜ ಹಾಗೂ ಕೇಶವ ಕೃಪಾಗೆ ತೋರಿಸಬೇಕು. ನಾವು ಬದುಕಿದ್ದೇವೆ, ಇನ್ನೂ ಸತ್ತಿಲ್ಲ ಅಂತ ಮೋದಿ, ಅಮಿತ್ ಶಾಗೆ ತೋರಿಸಬೇಕು. ಅದಕ್ಕೆ ಅವರ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ, ಆರ್‌ಎಸ್‌ಎಸ್ ಕಿವಿಗೆ ಏನು ಇಂಪಾಗಿ ಕೇಳಿಸುತ್ತದೆಯೋ ಅದನ್ನು ಮಾತ್ರ ಹೇಳ್ತಿದ್ದಾರೆ. ಬಜೆಟ್ ಬಗ್ಗೆ ಮಾತನಾಡಿ ಅಂದ್ರೆ, ಜಮೀರ್ ಬಜೆಟ್ ಅಂತಾರೆ ಇವರ ಉದ್ದೇಶ ಅಂಕಿ ಅಂಶದ ಮೇಲೆ ಚರ್ಚೆ ಮಾಡೋದಲ್ಲ. ಸಂವಾದ ಸಂಸ್ಥೆಯ ತಾಳಕ್ಕೆ ಅವರು ಕುಣಿಯಲಿ, ಸರ್ಕಾರ ಅವರ ಮಾತನ್ನು ಕೇಳೋದಕ್ಕೆ ರೆಡಿಯಿಲ್ಲ ಎಂದಿದ್ದಾರೆ.