– ಮೋದಿಯವ್ರು ಕೆಂಪು ಕೋಟೆ ಮೇಲೆ ಮಾತ್ರ ಮಾತನಾಡಲು ಸೀಮಿತ
ಕಲಬುರಗಿ: ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮದ ಕುರಿತು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ(Narendra MOdi) ಅವರು ಸತ್ಯ ಹೇಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ತಾಕೀತು ಮಾಡಿದರು.
ಕಲಬುರಗಿಯಲ್ಲಿ(Kalaburagi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮ(Ceasefire) ಘೋಷಣೆ ಅಮೆರಿಕ ಮಾಡಿಸಿದೆಯೋ ಅಥವಾ ಖುದ್ದು ಮೋದಿಯವರೇ ಮಾಡಿದ್ದಾರೋ ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು ಎಂದರು. ಇದನ್ನೂ ಓದಿ: Photo Gallery: ‘ಆಪರೇಷನ್ ಸಿಂಧೂರ’ ವೀರರನ್ನು ಭೇಟಿಯಾದ ಪಿಎಂ ಮೋದಿ
ದೇಶದ ಜನರ ಮುಂದೆ ಈ ಸತ್ಯ ಮೋದಿ ಹೇಳಬೇಕು. ಅವರು ಕೇವಲ ಸೋಷಿಯಲ್ ಮೀಡಿಯಾ ಬಳಸಿಕೊಂಡು ಯುದ್ಧ ಮಾಡುತ್ತಿದ್ದಾರೆ. ಆದರೂ ಈ ಕಾರ್ಯಾಚರಣೆಯಲ್ಲಿ ಮೋದಿಯವರಿಗೆ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲ ನೀಡಿದೆ. ಇಷ್ಟಾದರೂ ಪ್ರಧಾನಿ ಮೋದಿ ಸರ್ವ ಪಕ್ಷಗಳೊಂದಿಗೆ ಚರ್ಚಿಸುತ್ತಿಲ್ಲ. ಸಂಸತ್ ಅಧಿವೇಶನ ಕೂಡ ಕರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ʻಆಪರೇಷನ್ ಸಿಂಧೂರ’ ಸಂಭ್ರಮ: 17 ಶಿಶುಗಳಿಗೆ ‘ಸಿಂಧೂರ’ ನಾಮಕರಣ
ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ್ ಬೆದರಿಕೆಗೆ ಹೆದರಿ ನೀವು ಈ ನಿರ್ಣಯ ಕೈಗೊಂಡಿದ್ದೀರಾ? ಅತ್ತ ಪಾಕಿಸ್ತಾನ ಪ್ರಧಾನಿ ತಮ್ಮ ಸಂಸತ್ತಿನಲ್ಲಿ ಯುದ್ಧ ಗೆದ್ದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವುದರ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ\
ಸೋಮವಾರ ಸಂಜೆ ಪ್ರಧಾನಿ ಅವರು ದೇಶ ಉದ್ದೇಶಿಸಿ ಮಾತನಾಡಿದ ವೇಳೆ ಕದನ ವಿರಾಮ ಘೋಷಣೆಯ ಹಿಂದಿನ ಸತ್ಯ ಕುರಿತು ಅವರು ಹೇಳಬೇಕಿತ್ತು. 56 ಇಂಚು ವಿಸ್ತಾರದ ಎದೆಯುಳ್ಳ ಪ್ರಧಾನಿ ಕೇವಲ ಕೆಂಪು ಕೋಟೆಯ ಮೇಲೆ ಮಾತನಾಡಲು ಮಾತ್ರ ಸೀಮಿತವಾಗಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಪಾಕ್ ಶೆಲ್ ದಾಳಿ, ಯುದ್ಧದ ತೀವ್ರತೆಯ ಅನುಭವ ಬಿಚ್ಚಿಟ್ಟ ಕಾಶ್ಮೀರದಿಂದ ಮರಳಿದ ಕನ್ನಡಿಗ ವಿದ್ಯಾರ್ಥಿಗಳು
ಪಾಕಿಸ್ತಾನವನ್ನು ಈವರೆಗೆ ಭಾರತ ನಾಲ್ಕು ಬಾರಿ ಸೋಲಿಸಿದ್ದಾಗಿದೆ. ಆದರೆ ಈ ಬಾರಿ ವಿದೇಶಾಂಗ ನೀತಿಯಲ್ಲಿಯೇ ಭಾರತ ಸೋತಿದೆ. ಪಹಲ್ಗಾಮ್ ದಾಳಿ(Pahalgam Attack) ನಡೆಸಿದ ನಾಲ್ವರು ಉಗ್ರರು ಈಗ ಎಲ್ಲಿದ್ದಾರೆ? ಅವರು ದೇಶದ ಒಳಗಡೆಯೇ ಇದ್ದಾರಾ? ಹೊರಗಡೆ ಹೋಗಿದ್ದಾರಾ, ಎಲ್ಲಿದ್ದಾರೆ? ಎಂಬುದನ್ನು ಹೇಳಲಿ. ಈ ಕುರಿತು ಕೂಡಲೇ ಸಂಸತ್ ಅಧಿವೇಶನ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು.