– ನಮಗೆ ಕೇಸ್ ಕೊಡಬೇಡಿ ಎಂದು ಸಿಬಿಐ ಅವರೇ ಪತ್ರ ಬರೆದಿದ್ದಾರೆ
ಬೆಂಗಳೂರು: ಬಿಜೆಪಿಯವರಿಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಅಭ್ಯಾಸವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಬಿಜೆಪಿ(BJP) ಕಾರ್ಯಕರ್ತ ವಿನಯ್ ಸೋಮಯ್ಯ(Vinay Somaiah) ಆತ್ಮಹತ್ಯೆ ಪ್ರಕರಣದ ಬಗ್ಗೆ ಅವರು ಮಾತನಾಡಿದರು. ಅವರ ಹಲವಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಸೇರುತ್ತದೆ. ಪರಮೇಶ್ ಮೇಸ್ತಾ, ಶಿವಮೊಗ್ಗ ಯುವಕನ ಕೇಸ್ ಮೊನ್ನೆ ಬೀದರ್‌ನಲ್ಲಿ(Bidar) ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡ. ಇವರ ಹೆಸರಿನ ಮೇಲೆ ಬಿಜೆಪಿ ರಾಜಕೀಯ ಮಾಡಿದ ಉದಾಹರಣೆ ಇದೆಯಲ್ವಾ. ಅವರು ಪ್ರಕರಣದ ಸತ್ಯಾಂಶವನ್ನು ನೋಡುವುದಿಲ್ಲ. ಸುಮ್ಮನೆ ದುರುದ್ದೇಶದಿಂದ ರಾಜಕೀಯ ಮಾಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?
- Advertisement
- Advertisement
ಡೆತ್‌ನೋಟ್‌ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರಿದೆಯಾ? ಅದು ವಾಟ್ಸಪ್ ಮೆಸೇಜ್. ಇದೇ ರಾಜಕೀಯವನ್ನು ಕಲಬುರಗಿಯಲ್ಲಿ ಮಾಡಿದ್ದಾರೆ. ಇವರು ಸುಮ್ಮನೆ ಹೈಕಮಾಂಡ್ ಮನವೊಲಿಸಲು ಹಾಗೂ ಇವರ ಅಸ್ತಿತ್ವ ತೋರಿಸಿಕೊಳ್ಳಲು ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಯಾವುದೇ ಕೇಸ್ ಸಾಬೀತಾಗಿಲ್ಲ. ಯಾವುದಾದರೂ ಒಂದು ಕೇಸ್ ಅನ್ನು ಸಾಬೀತು ಮಾಡಿದ್ದಾರಾ? ಬಿಜೆಪಿಯವರು ಯಾರು ಕಾಳಜಿ ವಹಿಸಿದ್ದಾರೆ. ನೂರಾರು ಕಾರ್ಯಕರ್ತರ ಪಟ್ಟಿಗೆ ಈ ಹೆಸರು ಒಂದು ಸೇರ್ಪಡೆಯಾಗಿದೆ. ಬಿಜೆಪಿಯವರ ರಾಜಕೀಯ ಅಸ್ತಿತ್ವವೇ ಇಷ್ಟು ಎಂದು ಕೆಂಡಕಾರಿದರು. ಇದನ್ನೂ ಓದಿ: New Zealand v/s Pakistan – ಕ್ರಿಕೆಟ್ ಪಂದ್ಯದ ವೇಳೆಯೇ ಗ್ರೌಂಡ್‌ನಲ್ಲಿ ಪವರ್‌ಕಟ್; ಮುಂದೇನಾಯ್ತು?
2 ತಿಂಗಳ ಹಿಂದೆ ಬೀದರ್‌ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಯುವಕನ ವಿಚಾರದಲ್ಲಿ ನನ್ನ ಹೆಸರು ಇತ್ತಾ? ಅವರು ಅದನ್ನ ಫಾಲೋ ಅಪ್ ಮಾಡಿದ್ದಾರಾ? ತನಿಖೆ ಆದಮೇಲೆ ಸಿಐಡಿ ಆಫೀಸ್‌ಗೆ ಹೋಗಿ ಏನಾಗಿದೆ ಅಂತ ನೋಡಿದ್ದಾರಾ. ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ, ತನಿಖೆ ಏನಾಗಿದೆ ಎಂದು ನೋಡಿದ್ದಾರಾ? ಸದನದಲ್ಲೇ ವಿಚಾರ ಪ್ರಶ್ನೆ ಮಾಡಿದ್ರಾ. ಸಾವಿನ ಮನೆಯಲ್ಲಿ ಸಂತಸ ಮಾಡುವುದೇ ಇವರ ರಾಜಕೀಯ ಎಂದು ಗುಡುಗಿದರು. ಇದನ್ನೂ ಓದಿ: ರಾಮ್ ಚರಣ್ ‘ಪೆದ್ದಿ’ ಚಿತ್ರದ ಗ್ಲಿಂಪ್ಸ್ ಔಟ್- ನಟನ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಎಷ್ಟು ಜನ ಕಾರ್ಯಕರ್ತರಿಗೆ ಇವರು ಸಹಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ದಕ್ಷಿಣ ಸಂಸದರು ಒಂದು ಹೆಲ್ಪ್‌ಲೈನ್ ಪ್ರಾರಂಭ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿ ಕಿರುಕುಳ ಕೊಡುತ್ತಿದೆ ಅಂದರೆ ಸಹಾಯವಾಣಿಗೆ ಕರೆ ಮಾಡಿ ಎಂದಿದ್ದರು. ಎಷ್ಟು ಜನ ಸಹಾಯವಾಣಿಗೆ ಕರೆ ಮಾಡಿದ್ದಾರೆ ಕೇಳಿ. ಎಷ್ಟು ಜನ ಬಿಜೆಪಿ ಕಾರ್ಯಕರ್ತರು ಸಹಾಯವಾಣಿಗೆ ಕರೆ ಮಾಡಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ. ಆ ಸಹಾಯವಾಣಿಯ ನಂಬರ್ ಆದರೂ ನೆನಪಿದೆಯಾ? ಬಿಜೆಪಿಯ ಶಾಸಕರಿಗೆ ಸಂಸದರಿಗೆ ನನ್ನ ನೇರ ಸವಾಲ್ ಎಂದರು. ಇದನ್ನೂ ಓದಿ: ರಾಮನವಮಿ| ಅಯೋಧ್ಯೆ ಬಾಲರಾಮನ ಹಣೆ ಮೇಲೆ ಮೂಡಿದ ʼಸೂರ್ಯ ತಿಲಕʼ
ಇವರೇ ಕಳ್ಳರನ್ನು ಸಾಕುತ್ತಾರೆ. ಕಳ್ಳರಿಗೆ ಟಿಕೆಟ್ ಕೊಡುತ್ತಾರೆ. ನಮ್ಮ ಕಲಬುರಗಿಯಲ್ಲಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ವಿರುದ್ಧ ಮತ್ತೊಂದು ಎಫ್‌ಐಆರ್ ಆಗಿದೆ. 2 ತಿಂಗಳ ಹಿಂದೆ ಎಫ್‌ಐಆರ್ ಆಗಿದೆ. ಇದರ ಬಗ್ಗೆ ಮಾತಾಡ್ತಾರಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ‘ಕಿರಾತಕ’ ನಟಿಗೆ ಫ್ಯಾನ್ಸ್ ತರಾಟೆ
ವಿನಯ್ ಸೋಮಯ್ಯ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಇವರು ಹನಿಟ್ರ‍್ಯಾಪ್ ಸಿಬಿಐ ಕೊಡಿ ಎಂದು ಹೇಳುತ್ತಾರೆ. ಇದನ್ನು ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದಾರೆ. ಸಿಬಿಐ ಅವರೇ ಪತ್ರ ಬರೆದಿದ್ದಾರೆ. ನೀವು ನಮಗೆ ಕೇಸ್ ಕೊಡಬೇಡಿ. ಆಕಸ್ಮಾತ್ ಕೇಸ್ ಕೊಟ್ಟರೆ ಅದಕ್ಕೆ ಸಿಬ್ಬಂದಿಯನ್ನು ನೀವೇ ಕೊಡಬೇಕು. ಸಾರಿಗೆ ವ್ಯವಸ್ಥೆ ನೀವೇ ಕೊಡಬೇಕು. ಅದರ ಶುಲ್ಕ ನೀವೇ ಪಾವತಿಸಬೇಕು. ಕರ್ನಾಟಕ ಪೊಲೀಸರ ಸಹಾಯ ಪಡೆದೇ ತನಿಖೆ ಮಾಡುತ್ತೇವೆ. ನಾವು ಸ್ವತಂತ್ರವಾಗಿ ತನಿಖೆ ಮಾಡಲು ಆಗುವುದಿಲ್ಲ ಎಂದು ಬರೆದಿದ್ದಾರೆ. ಅದನ್ನು ಬಿಜೆಪಿಯವರು ಮರೆತುಬಿಟ್ಟಿದ್ದಾರೆ. ಮಧ್ಯಾಹ್ನದೊಳಗೆ ಬಿಜೆಪಿಯವರಿಗೆ ಪತ್ರ ತಲುಪಿಸಿ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.