– ಪ್ರಧಾನಿ ಹಾಗೂ ಅಜಿತ್ ದೋವಲ್ ನಮ್ಮ ಸೇನೆ, ಜನರಿಗೆ ನಿರಾಸೆ ಮಾಡಿದ್ದಾರೆ
– ಬೇರೆ ದೇಶದವರ ಉಪದೇಶ ನಮಗೆ ಬೇಡ
ಕಲಬುರಗಿ: ಭಾರತ ಪಾಕಿಸ್ತಾನ ಯುದ್ಧ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನಡೆದಿದೆ. ಕೇಂದ್ರ ಸರ್ಕಾರ ಸಾಕಷ್ಟು ನೀರಿಕ್ಷೆಗಳನ್ನ ಹೆಚ್ಚಿಸಿತ್ತು. ಆದರೆ ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆಯೇ(Bihar Election) ಮುಖ್ಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ(Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದವರನ್ನು ನಂಬೋದಕ್ಕೆ ಆಗೋದಿಲ್ಲ. ಅವರು ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಕದನ ವಿರಾಮ ಉಲ್ಲಂಘನೆ ಮಾಡಿದ್ರೆ ವಾರ್ ಆಗುತ್ತೆ ಅಂತಾ ಹೇಳಿದ್ದರು. ಆದರೆ ಕಳೆದ ಕೆಲ ಬೆಳವಣಿಗೆಯನ್ನು ನೋಡಿದ್ರೆ ಆಶ್ಚರ್ಯ ಆಗುತ್ತಿದೆ. ನಮ್ಮ ಸೈನಿಕರು ಭಯೋತ್ಪಾದನೆ ಹುಟ್ಟುವ ಜಾಗದ ಮೇಲೆ ದಾಳಿ ಮಾಡಿದ್ದರು. ನಮ್ಮ ಸೇನೆಗೆ, ಜನರಿಗೆ ಪ್ರಧಾನಿ ಮೋದಿ ಹಾಗೂ ಅಜಿತ್ ದೋವಲ್ ನಿರಾಸೆ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ
ನಮ್ಮ ವಿದೇಶಾಂಗ ನೀತಿ ಸಂಪೂರ್ಣವಾಗಿ ಕುಸಿದು ಹೋಗಿದೆ. ವಿಶ್ವಗುರು ಅಂತಾ ಹೇಳಿಕೊಳ್ಳುವವರು, ನಾವು ದಾಳಿ ಮಾಡಿದ ಉಗ್ರರ ದೇಶಕ್ಕೆ ಐಎಂಫ್‌ನಿಂದ ಸಾಲ ಸಿಗುತ್ತಿದೆ ಎಂದರೆ ನಾವು ಅವರ ಮನವೊಲಿಸುವಲ್ಲಿ ವಿಫಲರಾಗಿದ್ದೇವೆ ಎಂದು ಅರ್ಥ. ಅಂದರೆ ವಿದೇಶಾಂಗ ನೀತಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ ಎಂಬ ಅಭಿಪ್ರಾಯ ಸ್ಪಷ್ಟವಾಗಿ ತಿಳಿಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್‌ನಲ್ಲಿರುವ ಎಲ್ಲಾ ಭಯೋತ್ಪಾದಕರು ಈಗ ಧರ್ಮಗುರುಗಳಾಗಿದ್ದಾರೆ – ಸಚಿವ ಖವಾಜಾ ಆಸಿಫ್
ಮನಮೋಹನ್ ಸಿಂಗ್(Manmohan Singh) ಅವರು ಹೇಳಿದ ಹಾಗೆ ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ. ಬದಲಾಗಿ ಕುಳಿತುಕೊಂಡು ಮಾತನಾಡಿ ನಮ್ಮ ಅವರ ಸಂಬಂಧವನ್ನು ಗಟ್ಟಿಗೊಳಿಸುವುದು. ಪಾಕಿಸ್ತಾನಕ್ಕೆ(Pakistan) ಟರ್ಕಿ ಹಾಗೂ ಚೀನಾ ಸಪೋರ್ಟ್ ಮಾಡಿದೆ. ಆದ್ರೆ ಭಾರತಕ್ಕೆ ಯಾವ ದೇಶ ಕೂಡ ಬಹಿರಂಗವಾಗಿ ಬೆಂಬಲ ನೀಡಿಲ್ಲ. ಪ್ರಧಾನಿ ಅವ್ರು ಡೊನಾಲ್ಡ್ ಟ್ರಂಪ್(Donald Trump) ನಮ್ಮ ಸ್ನೇಹಿತರು ಅಂತಾ ಹೇಳ್ತಾರೆ. ಆದರೆ ಕದನ ವಿರಾಮ ಆಗಿರೋ ವಿಷಯ ನಮಗೆ ಹೇಗೆ ಗೊತ್ತಾಯ್ತು ಅಂದ್ರೆ ಟ್ರಂಪ್ ಅವರ ಟ್ವೀಟ್ ಮೂಲಕ ಗೊತ್ತಾಗಿದೆ. ಆ ಟ್ವೀಟ್‌ನಲ್ಲಿ ನಮ್ಮನ್ನೂ ಪಾಕಿಸ್ತಾನವನ್ನು ಹೋಲಿಕೆ ಮಾಡಿ, ಎರಡೂ ದೇಶದವರು ಸಮಾನರು ಎಂದು ಹೇಳಿದ್ದಾರೆ. ನಾವು ಪಾಕಿಸ್ತಾನದವರಿಗಿಂತ ಮುಂದಿದ್ದೇವೆ. ಟ್ರಂಪ್ ಅವ್ರು ನಮಗೆ ಸಾಮಾನ್ಯ ಪ್ರಜ್ಞೆ ಹೇಳಿ ಕೊಡ್ತಿದ್ದಾರಾ ಎಂದು ಗುಡುಗಿದರು. ಇದನ್ನೂ ಓದಿ: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕೊಂಡು ಕುರಿ ಕಾಯ್ತಿದ್ದೆ – ಸಿದ್ದರಾಮಯ್ಯ
ಪಹಲ್ಗಾಮ್‌ನಲ್ಲಿ(Pahalgam) 26 ಮಂದಿ ಅಮಾಯಕರನ್ನು ಹತ್ಯೆ ಮಾಡಿದ ನಾಲ್ವರು ಉಗ್ರರು ಎಲ್ಲಿ ಹೋದರು? ನೀವು ಏನೇ ಮಾಡಿದ್ರು ನಮ್ಮ ಬೆಂಬಲವಿದೆ. ಆದ್ರೆ ನಮ್ಮ ವಿದೇಶಾಂಗ ನೀತಿ ಬಗ್ಗೆ ಮೋದಿ ಹೇಳಬೇಕು. ಸದ್ಯ ದೇಶ ಮರೆತು ವ್ಯಕ್ತಿಯ ಪೂಜೆ ವೈಭವಿಕರಣಕವಾಗುತ್ತಿದೆ. ನಮ್ಮ ಸೈನಿಕರ ಪರಿಶ್ರಮ, ಬಲಿದಾನವನ್ನು ಗೌರವಿಸಬೇಕು. ಇವರು ನೋಡಿದ್ರೆ ಕರಾಚಿವರೆಗೆ ಹೋಗುತ್ತೇವೆ ಅಂತಾರೆ ಇಲ್ಲಿ ನೋಡಿದ್ರೆ ಕರಾಚಿ ಬೇಕರಿ ಒಡೆಯುತ್ತಿದ್ದಾರೆ. ಕದನ ವಿರಾಮದ ಬಗ್ಗೆ ನಮ್ಮ ಮನೆ ಯಜಮಾನರು ಹೇಳಬೇಕು. ಬೇರೆ ದೇಶದವರ ಉಪದೇಶ ನಮಗೆ ಬೇಡ ಎಂದರು. ಇದನ್ನೂ ಓದಿ: ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್ ಸೂರ್ಯ
ಯುಪಿಎ ಸರ್ಕಾರ ಇದ್ದಾಗ ಮನಮೋಹನ್ ಸಿಂಗ್ ಅವರು ಪಾಕಿಸ್ತಾನವನ್ನು ಉಗ್ರರ ದೇಶ ಅಂತಾ ಹೇಳಿದ್ದರು. ಪಾಕಿಸ್ತಾನಕ್ಕೆ ವಿದೇಶದಿಂದ ಆರ್ಥಿಕ ದಿಗ್ಬಂಧನ ಹಾಕಿದ್ದರು. ಆದರೆ ಈಗ ಏನಾಗ್ತಿದೆ. ಪಾಕ್‌ಗೆ ಆರ್ಥಿಕ ನೆರವು ಹೇಗೆ ಸಿಗ್ತಿದೆ. ಯಾಕೆ ಕೇಂದ್ರ ಸರ್ಕಾರ ಇದರ ಬಗ್ಗೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದರು.