ಕಲಬುರಗಿ: ಟ್ರಂಪ್ ಬಳಿ ವಿದೇಶಾಂಗ ನೀತಿ ಅಡವಿಟ್ಟಿದ್ದಾರೆ. ಟ್ರಂಪ್‌ಗೆ ಯಾಕೆ ಹೆದರುತ್ತಿದ್ದಾರೋ ಗೊತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದರು.
ಕಲಬುರಗಿಯಲ್ಲಿ (Kalaburagi) ಮಾತನಾಡಿದ ಅವರು, ಮೋದಿ ಬಹಳ ಒಳ್ಳೆ ಫ್ರೆಂಡ್. ಅವರ ಪೊಲಿಟಿಕಲ್ ಕೆರಿಯರ್ ಹಾಳು ಮಾಡೋದಕ್ಕೆ ಇಷ್ಟ ಪಡೋದಿಲ್ಲ ಅಂತಾ ಟ್ರಂಪ್ ಹೇಳ್ತಾರೆ. ಹಾಗಂದ್ರೆ ಏನ್ ನಡೆಯುತ್ತಿದೆ, ಏನಿದೆ ಇದರಲ್ಲಿ? ಅಸ್ತಿತ್ವದಲ್ಲಿ ಇಲ್ಲದ ಅವಾರ್ಡ್ ತಗೊಂಡು ಬಂದಿರೋದು. ತಾಮ್ರದ ಪ್ಲೇಟ್‌ಗೆ ಚಿನ್ನದ ಕವರ್ ಹಾಕಿಕೊಂಡು ತಂದಿದ್ದಾರೆ ಎಂದು ಪ್ರಧಾನಿ ಮೋದಿಗೆ ಲೇವಡಿ ಮಾಡಿದರು. ಇದನ್ನೂ ಓದಿ: ಹೆಚ್‌ಡಿಕೆಗೆ ಗೂಢಚರ್ಯೆಯ ಪಾಠ ಅವರ ತಂದೆಯೇ ಹೇಳಿಕೊಟ್ಟಿರಬಹುದು: ಸಿಎಂ ಕಿಡಿ
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ದುಬೈನಲ್ಲಿ 28 ಜನ ಇದ್ದಾರೆ. ಸದ್ಯ ಆ ದೇಶಗಳಿಗೆ ವಿಮಾನ ಹಾರಾಟ ನಡೆಯುತ್ತಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನ ಪಾಲನೆ ಮಾಡಬೇಕು. ಜನ ಆತಂಕ ಪಡುವ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಕನ್ನಡಿಗರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಎಂಇಎ ಜೊತೆ ಕೂಡ ಖರ್ಗೆ ಸಾಹೇಬರು ನಿರಂತರ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು.
ಖಮೇನಿ ಸಾವಿನ ಪ್ರತಿಭಟನೆಯಲ್ಲಿ ಹ್ಯಾರಿಸ್ ಭಾಗಿ ವಿಚಾರಕ್ಕೆ ಅಶೋಕ ಹೇಳಿಕೆಗೆ ಪ್ರಿಯಾಂಕ್ ಕೌಂಟರ್ ನೀಡಿದ್ದು, ಅಶೋಕ್ ಅವರಿಗೆ ಇತಿಹಾಸದ ಅರಿವು ಇಲ್ಲ. ಪ್ರಧಾನಿ ಅವರೇ, ಇರಾನ್ ಈಸ್ ಎ ಗುಡ್ ಫ್ರಂಡ್ ಅಂತಾ ಹೇಳಿದ್ದರು. ನಾವು ಅವರ ಜೊತೆ ವ್ಯಾಪಾರ ಕೂಡ ಮಾಡುತ್ತೇವೆ ಅಲ್ವಾ? ಏನು ಶತ್ರು ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ಮಾಡ್ತೀವಾ ಹೇಗೆ? ಹಿಂದೆ ಬೇರೆ ದೇಶದ ಅಧ್ಯಕ್ಷರು ಸಾವನ್ನಪ್ಪಿದ್ದಾಗ ನಮ್ಮವರು ಅರ್ಧ ಧ್ವಜ ಹಾರಿಸಿದ್ದಾರೆ. ನಾವು ಯಾರ ಜೊತೆ ಸಂಬಂಧ ಇಟ್ಟುಕೊಳ್ಳಬೇಕು, ವ್ಯಾಪಾರ ಮಾಡಬೇಕು ಅನ್ನೋದನ್ನ ಅಮೆರಿಕ ಕೇಳಿ ಮಾಡಬೇಕಾ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ವಿಜಯೇಂದ್ರ ವಿಡಿಯೋ ಕಾಲ್

