Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗ್ರಾಮೀಣ ಕುಡಿಯುವ ನೀರು ಯೋಜನೆ ನಿಗದಿತ ಸಮಯಕ್ಕೆ ಪೂರ್ಣಗೊಳಿಸದ ಗುತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಿ – ಪ್ರಿಯಾಂಕ್‌ ಖರ್ಗೆ ಸೂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗ್ರಾಮೀಣ ಕುಡಿಯುವ ನೀರು ಯೋಜನೆ ನಿಗದಿತ ಸಮಯಕ್ಕೆ ಪೂರ್ಣಗೊಳಿಸದ ಗುತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಿ – ಪ್ರಿಯಾಂಕ್‌ ಖರ್ಗೆ ಸೂಚನೆ

Bengaluru City

ಗ್ರಾಮೀಣ ಕುಡಿಯುವ ನೀರು ಯೋಜನೆ ನಿಗದಿತ ಸಮಯಕ್ಕೆ ಪೂರ್ಣಗೊಳಿಸದ ಗುತಿಗೆದಾರರನ್ನ ಕಪ್ಪುಪಟ್ಟಿಗೆ ಸೇರಿಸಿ – ಪ್ರಿಯಾಂಕ್‌ ಖರ್ಗೆ ಸೂಚನೆ

Public TV
Last updated: July 18, 2025 7:48 pm
Public TV
Share
2 Min Read
Priyank Kharge 1
SHARE

ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ (Rural Drinking Water Project) ಕಾಮಗಾರಿಗಳನ್ನ ಗುತ್ತಿಗೆ ಪಡೆದು ಕೆಲ ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಅವರು, ಗ್ರಾಮೀಣ ನೀರು ಸರಬರಾಜು ಇಲಾಖೆಯ ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರುಗಳಿಗೆ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಗ್ರಾಮೀಣ ನೀರು ಸರಬರಾಜು ಇಲಾಖೆಯ (Rural Water Supply Department) ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರುಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಎಂಜನಿಯರರು ನಿಧಾನ ಪ್ರವೃತ್ತಿಯನ್ನ ಬಿಟ್ಟು, ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ನಿರ್ದಿಷ್ಟ ಸಮಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಆದ್ಯತೆ ನೀಡಬೇಕೆಂದು ಆದೇಶಿಸಿದರು. ಇದನ್ನೂ ಓದಿ: ಸಿಎಂ ಬದಲಾವಣೆಗೆ ಸಿದ್ದರಾಮಯ್ಯ ಮೈಂಡ್ ಸೆಟ್ ಆಗಿದೆ: ಕೇಂದ್ರ ಸಚಿವ ಸೋಮಣ್ಣ ವ್ಯಂಗ್ಯ

Priyank Kharge 2

ಏಕಗ್ರಾಮ ಹಾಗೂ ಬಹುಗ್ರಾಮ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಮುಕ್ತಾಯಗೊಂಡ ನಂತರ ಅಗೆದ ರಸ್ತೆಗಳನ್ನು ಯಥಾಸ್ಥಿತಿಗೆ ತರುತ್ತಿಲ್ಲವೆಂಬ ದೂರುಗಳು ಬಹಳಷ್ಟು ಬರುತ್ತಿದೆ. ಈ ಸಂಬಂಧ ಎಂಜನಿಯರುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ ಸಚಿವರು, ನೀರು ಸರಬರಾಜು ಕಾಮಗಾರಿ ಮುಗಿದ ನಂತರ ಆದ್ಯತೆಯ ಮೇಲೆ ರಸ್ತೆಗಳನ್ನು ಸರಿಪಡಿಸುವಲ್ಲಿ ಗಮನ ಹರಿಸಲು ಸೂಚಿಸಿದರು. ಜೊತೆಗೆ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಮೊದಲು ಅವರಲ್ಲಿನ ಯಂತ್ರೋಪಕರಣಗಳು ಮುಂತಾದ ಸಾಮರ್ಥ್ಯವನ್ನು ಪರೀಕ್ಷಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

Siddaramaiah govt hikes drinking water Tax BWSSB

ಏಕಗ್ರಾಮ ಹಾಗೂ ಬಹುಗ್ರಾಮ ನೀರು ಸರಬರಾಜು ಯೋಜನೆಗಳಿಗೆ ಮಂಜೂರಾತಿ ಪಡೆದು, ಕಾರ್ಯಗತವಾಗುವ ಸಮಯದಲ್ಲಿ ಎದುರಾಗುವ ಅರಣ್ಯಭೂಮಿ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣ ನೀಡಿ, ಯೋಜನೆಗಳನ್ನು ವೀಳಂಬ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಯೋಜನಾವರದಿ ಸಿದ್ಧಪಡಿಸುವಾಗಲೇ ಎದುರಾಗುವ ಅಡ್ಡಿ ಆತಂಕಗಳನ್ನು ಗಮನಿಸಬೇಕೆಂದು ಸಲಹೆ ಮಾಡಿದರು.  ಇದನ್ನೂ ಓದಿ: ಇದು ಸಿಎಂ ಅಳಿವು-ಉಳಿವಿನ ಸಮಾವೇಶ, ಜನರ ಸಾವಿನ ಮೇಲೆ ಮೈಸೂರು ಸಾಧನಾ ಸಮಾವೇಶ – ಆರ್.ಅಶೋಕ್ ಲೇವಡಿ

ಜಿಲ್ಲಾ ಪಂಚಾಯತಿ ಸಿಇಓಗಳು ತಿಂಗಳಲ್ಲಿ ಮೂರು ದಿನ ಪಂಚಾಯತ್‌ ರಾಜ್‌, ಗ್ರಾಮೀಣ ನೀರು ಸರಬರಾಜು ಹಾಗೂ ನರೇಗಾ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಬೇಕು, ಜಿಲ್ಲಾ ಮಟ್ಟದಲ್ಲೇ ಸಿಇಓಗಳು ಸಮಸ್ಯೆಗೆ ಪರಿಹಾರ ಹುಡಕಬೇಕು ಎಂದೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಇಡೀ ದಿನ ನಡೆದ ಸಭೆಯಲ್ಲಿ ಸಚಿವರು ಜಿಲ್ಲಾವಾರು ಪ್ರಗತಿಯನ್ನು ಪರಿಶೀಲಿಸಿ, ಕಡಿಮೆ ಪ್ರಗತಿ ಸಾಧಿಸಿದ ಎಂಜನಿಯರುಗಳ ಚಳಿ ಬಿಡಿಸಿದರಲ್ಲದೆ, ಸಾಕಷ್ಟು ಪ್ರಮಾಣದಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸುವಲ್ಲಿ ಆಲಸ್ಯ ತೋರುವ ಎಂಜನಿಯರುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ನೀರು ಕಲುಷಿತಗೊಂಡು ಗ್ರಾಮಗಳಲ್ಲಿ ಸಮಸ್ಯೆ ತಲೆದೋರಿದಲ್ಲಿ ಎಂಜನಿಯರುಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.  ಇದನ್ನೂ ಓದಿ: ಮಾಜಿ ಸಂಸದ ಅನಂತ ಕುಮಾರ್‌ ಹೆಗಡೆಗೆ ಜೀವ ಬೆದರಿಕೆ

ಸಾರ್ವಜನಿಕರಿಂದ ಬರುವ ದೂರುಗಳನ್ನು ತಮ್ಮ ಮೇಜಿನಿಂದ ಕಳುಹಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರಿಯುವದಲ್ಲ, ದೂರನ್ನು ಪೂರ್ಣವಾಗಿ ಪರಿಹರಿಸುವ ಮೂಲಕ ಜನರ ಸಮಸ್ಯೆಗಳನ್ನು ದೂರ ಮಾಡಬೇಕು, ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಬರುವ ದೂರುಗಳನ್ನು ಅಂದೇ ಪರಿಶೀಲಿಸಿ, ಅಗತ್ಯವಿದ್ದಲ್ಲಿ ಕ್ರಮ ಕೈಗೊಂಡು ಸೂಕ್ತ ಸ್ಪಷ್ಟನೆ ನೀಡಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ಕೆ.ನಾಗೇಂದ್ರಪ್ರಸಾದ್‌ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರಿಗೂ ಅನುದಾನ ಸಿಗುತ್ತೆ, ತಾಳ್ಮೆಯಿಂದ ಇರಬೇಕು: ಡಿಕೆಶಿ

TAGGED:bengalurudrinking waterDrinking Water ProjectPriyank Khargeಕುಡಿಯುವ ನೀರಿನ ಯೋಜನೆಕುಡಿಯುವ ನೀರುಪ್ರಿಯಾಂಕ್ ಖರ್ಗೆಬೆಂಗಳೂರು
Share This Article
Facebook Whatsapp Whatsapp Telegram

Cinema news

vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories

You Might Also Like

Ramanagar Monkey
Districts

ವೃದ್ಧೆ ಸಾವಿಗೆ ಮರುಗಿದ ಮಂಗ – ಮೃತದೇಹದ ಮೇಲೆ ಮಲಗಿ ಮೂಕರೋಧನೆ

Public TV
By Public TV
15 minutes ago
Accident on bengaluru mysuru expressway car overturns on side road
Districts

ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ – ಪಕ್ಕದ ರಸ್ತೆಗೆ ಉರುಳಿಬಿದ್ದ ಕಾರು

Public TV
By Public TV
45 minutes ago
income tax returns
Latest

ಆದಾಯ ತೆರಿಗೆ ಪದ್ದತಿಯಲ್ಲಿ ಏನು ಬದಲಾವಣೆ? ಇಲ್ಲಿದೆ ಪೂರ್ಣ ವಿವರ

Public TV
By Public TV
1 hour ago
gajendra elephant
Bengaluru City

ಒಂಟಿಯಾಗಿದ್ದ 63 ವರ್ಷದ ಗಜೇಂದ್ರ ಆನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ

Public TV
By Public TV
1 hour ago
AI Image
Bagalkot

ಹೆಚ್ಚಾದ ಬಿಸಿಲು – ಉ.ಕರ್ನಾಟಕದ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

Public TV
By Public TV
1 hour ago
g.parameshwara 2
Bengaluru City

ಗೃಹಸಚಿವ ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ – ಸುಮೋಟೋ ಕೇಸ್ ದಾಖಲು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?