Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಹತಾಶೆ ಹಾಗೂ ಪ್ರಚಾರಕ್ಕಾಗಿ ಕಟೀಲ್ ಟೀಕೆ: ಪ್ರಿಯಾಂಕ್ ಖರ್ಗೆ

Public TV
Last updated: October 21, 2021 2:18 pm
Public TV
Share
5 Min Read
priyank kharge
SHARE

ಕಲಬುರಗಿ: ಹತಾಶೆ ಹಾಗೂ ಪ್ರಚಾರದ ಗೀಳಿನಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ಮೇಲೆ ವೈಯಕ್ತಿಕ ದಾಳಿಗಿಳಿದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

nalin kumar kateel

ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯೊಬ್ಬ ಹತಾಶೆನಾದಾಗ ಏನೇನೋ ಮಾತನಾಡಲು ಶುರು ಮಾಡುತ್ತಾನೆ ಹಾಗೂ ದಾರಿ ತಪ್ಪುವುದು ಸಹಜ. ಕೆಲವೊಮ್ಮೆ ಹತಾಶೆ ತೀವ್ರಗೊಂಡಾಗ ಮದ್ಯಪಾನ ಮಾಡುತ್ತಾರೆ ಅಥವಾ ಡ್ರಗ್ ಕೂಡಾ ತೆಗೆದುಕೊಳ್ಳುತ್ತಾನೆ. ಬಹುಶಃ ಕಟೀಲ್ ಆ ಹಂತ ತಲುಪಿಲ್ಲ ಎಂದು ಭಾವಿಸುತ್ತೇನೆ. ಆದರೆ ಕೆಲವೊಮ್ಮೆ ಅವರು ಮಾತನಾಡುವುದು ನೋಡಿದರೆ ಅನುಮಾನ ಮೂಡುತ್ತಿದೆ. ಒಂದು ವೇಳೆ ಅವರಿಗೆ ವೈದ್ಯರ ಆಪ್ತ ಸಮಾಲೋಚನೆ ಅವಶ್ಯಕತೆ ಇದ್ದರೆ ಕಾಂಗ್ರೆಸ್ ಪಕ್ಷ ವೈದ್ಯರಿಂದ ಸಮಾಲೋಚನೆ ಕೊಡಿಸಲಿದೆ ಎಂದು ಕುಟುಕಿದರು.

NALIN 2

ಕಟೀಲ್ ಅವರನ್ನ ಸಿಎಂ ಹಾಗೂ ಯಡಿಯೂರಪ್ಪ ಅವರು ಓವರ್ ಶಾಡೋ ಮಾಡಿದ್ದಾರೆ. ಹಾಗಾಗಿ ಅವರ ಮಾತಿಗೆ ಅವರ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಮಾಧ್ಯಮಗಳು ಕಟೀಲ್ ಅವರಿಗೆ ಹೆಚ್ಚು ಪ್ರಚಾರ ಕೊಡುತ್ತಿಲ್ಲ. ಹಾಗಾಗಿ ಪ್ರಚಾರದ ಹಂಬಲದಿಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರನ್ನು ಡ್ರಗ್ ಪೆಡ್ಲರ್ ಎಂದಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ್ ಮೇಘ ಸ್ಫೋಟ – ಸಾವಿನ ಸಂಖ್ಯೆ 52ಕ್ಕೆ ಏರಿಕೆ 5 ಮಂದಿ ನಾಪತ್ತೆ

FotoJet 5 5

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದೆ. ಸ್ವತಃ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಡ್ರಗ್ ದಂಧೆಯಲ್ಲಿ ತೊಡಗಿ ಅರೆಸ್ಟ್ ಆಗಿದ್ದಾರೆ. ಮಣಿಪುರ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ ಹಾಗೂ ಪಂಜಾಬ್ ಗಳಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿತ್ತು ಎಂದು ಆರೋಪಿಸಿದರು. ಈ ಕುರಿತು ಆರ್ ಎಸ್ ಎಸ್ ಮುಖಂಡರಾದ ಮೋಹನ್ ಭಾಗವತ್ ಅವರೇ ಹೇಳಿಕೆ ನೀಡಿದ್ದು ಗಮನಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ದಂಧೆಯನ್ನು ತಡೆಯಲು ವಿಫಲವಾಗಿದ್ದಾರೆ ಎಂದರ್ಥವಾಯ್ತಲ್ಲ ಎಂದರು.

mohan bhagwat

ಕರ್ನಾಟಕದಲ್ಲಿಯೂ ಡ್ರಗ್ ದಂಧೆ ಹೆಚ್ಚಾಗಿದ್ದು, ಮಾದಕವಸ್ತುಗಳ ಸಾಗಾಣಿಕೆಗೆ ಇಡೀ ಏಷ್ಯಾದಲ್ಲೇ ಬೆಂಗಳೂರು ಹೇಳಿ ಮಾಡಿಸಿದ ಜಾಗದಂತಿದೆ. ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿಯಲ್ಲಿ ಸುಮಾರು 2,600 ಕೆಜಿಯ ರೂ 6 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದವರು ಬಿಜೆಪಿಯವರೇ. ಇನ್ನೂ ಬಿಜೆಪಿಯ ಸ್ಟಾರ್ ಪ್ರಚಾರಕಿ ಕೂಡಾ ಡ್ರಗ್ ದಂಧೆಯ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ. ಇದನ್ನೂ ಓದಿ: ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

ಕಟೀಲ್ ಅವರದೇ ಪಕ್ಷ ಆಡಳಿತ ನಡೆಸುವ ನಮ್ಮ ರಾಜ್ಯದಲ್ಲಿ 2018 ರಲ್ಲಿ 285 ಪ್ರಕರಣಗಳಲ್ಲಿ 44 ಜನ ವಿದೇಶಿಯರು ಅರೆಸ್ಟ್ ಆಗಿದ್ದಾರೆ. 2019 ರಲ್ಲಿ 768 ಪ್ರಕರಣಗಳಲ್ಲಿ 38 ವಿದೇಶಿಯರು ಹಾಗೂ 1,260 ಸ್ಥಳೀಯರು ಅರೆಸ್ಟ್ ಆಗಿದ್ದಾರೆ ಮತ್ತು 1,053 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. 2020 ರಲ್ಲಿ 2,766 ಪ್ರಕರಣದಲ್ಲಿ 70 ವಿದೇಶಿಯರು ಹಾಗೂ 3,673 ಸ್ಥಳಿಯರು ಅರೆಸ್ಟ್ ಆಗಿದ್ದಾರೆ ಮತ್ತು 1,912 ಕೆಜಿ ಡ್ರಗ್ ವಶಪಡಿಸಿಕೊಳ್ಳಲಾಗಿದೆ. 2021 ರ ಅಕ್ಟೋಬರ್ ವರೆಗೆ 3,337 ಪ್ರಕರಣದಲ್ಲಿ 100ಕ್ಕೂ ಹೆಚ್ಚು ವಿದೇಶಿಯರು ಹಾಗೂ 4,210 ಸ್ಥಳೀಯರು ಅರೆಸ್ಟ್ ಆಗಿದ್ದಾರೆ ಮತ್ತು 3,255 ಕೆಜಿ ಡ್ರಗ್ ಪಡಿಸಿಕೊಳ್ಳಲಾಗಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರಲ್ಲಿ 6 ಪಟ್ಟು ಹೆಚ್ಚಾಗಿದೆ ಹಾಗೂ 290% ಡ್ರಗ್ ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಡ್ರಗ್ ತೆಗೆದುಕೊಳ್ಳುವ 40 ವಯಸ್ಸಿನವರಲ್ಲಿ 37% ಇದ್ದಾರೆ . ಮೊದಲ ಸಲ ಡ್ರಗ್ ಸೇವನೆ ಪ್ರಕರಣದಲ್ಲಿ ಸಿಕ್ಕವರು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳು ಹಾಗೂ ಕೊರೊನಾದಿಂದ ಕೆಲಸ ಕಳೆದುಕೊಂಡರಾಗಿದ್ದಾರೆ. ಆತಂಕಕಾರಿ ಎಂದರೆ ಶಿಕ್ಷಕರೇ ಇದರಲ್ಲಿ ಭಾಗಿಯಾಗಿದ್ದಾರೆ ಇದು ಸಂಶೋಧನೆಯಿಂದ ಹೊರಬಂದ ಮಾಹಿತಿ ಎಂದು ವಿವರಿಸಿದರು.

nallinkumar kateel medium

ಗ್ರಹ ಇಲಾಖೆ ಮಾಹಿತಿ ಪ್ರಕಾರ ಕಳೆದ ಮೂರು ಕೊಕೇನ್ ಬಳಕೆ ದುಪ್ಪಟ್ಟಾಗಿದೆ. ನಿಮ್ಮದೇ ಸರ್ಕಾರ ಇತ್ತಲ್ಲ ಏನು ಮಾಡಿದಿರಿ? ಮಲೆನಾಡು, ಕೊಡಗು, ಚಿಕ್ಕಮಗಳೂರು ಜಿಲ್ಲೆಯ ರೆಸಾರ್ಟ್ ಹಾಗೂಹೋಂ ಸ್ಟೇಗಳಲ್ಕಿ ಡ್ರಗ್ ದೊರಕುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಚಿಂಚೋಳಿ ಸೇರಿದಂತೆ ಡ್ರಗ್ ದಂದೆ ಹೆಚ್ಚಾದ ಜಿಲ್ಲೆಯ ಶಾಸಕರನ್ನೇ ಹೊಣೆಗಾರರನ್ನಾಗಿ ಮಾಡಲಿ ಎಂದು ಎಂದು ಲೆಹರ್ ಸಿಂಗ್ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಡ್ರಗ್ ನಿಂದಾಗಿ ರಾಜ್ಯದಲ್ಲಿ ದಿನವೊಂದಕ್ಕೆ ಮೂರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಕ್ರೈಮ್ ವರದಿ ಪ್ರಕಾರ ದೇಶದಲ್ಲಿ 2018 ರಲ್ಲಿ 1,230 ಜನ ಹಾಗೂ 2019 ರಲ್ಲಿ 1,113 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ರಗ್ ನಿಯಂತ್ರಣಕ್ಕಾಗಿ ರಾಜ್ಯದ ಶಾಲೆ- ಕಾಲೇಜುಗಳಲ್ಲಿ ಗಳಲ್ಲಿ ಡ್ರಗ್ ವಿರೋಧಿ ಸಮಿತಿ ಮಾಡುವುದಾಗಿ ಸಿಎಂ ಹಾಗೂ ಆರೋಗ್ಯ ಸಚಿವರು ಹೇಳಿದ ಮಾತು ಇನ್ನೂ ಜಾರಿಗೆ ಬಂದಿಲ್ಲ.

delhi sudhakar 2

ಇತ್ತೀಚಿಗೆ ಗುಜರಾತ್ ನ ಅದಾನಿ ಬಂದರಲ್ಲಿ ರೂ 21,000 ಕೋಟಿ ಮೌಲ್ಯದ 3,000 ಕೆಜಿ ಡ್ರಗ್ ಸಿಕ್ಕಿದೆ. ಅದೇ ಗುಜರಾತ್ ನಲ್ಲಿ ಜೂನ್ ತಿಂಗಳಲ್ಲಿ 1.75 ಕೋಟಿ ವೌಲ್ಯದ 25,000 ಕೆಜಿ ತೂಕದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ ಅಫ್ಘಾನಿಸ್ತಾನ ಹಾಗೂ ಪಾಕಿಸ್ಥಾನ ದಿಂದ ಬಂದಿರುವ ಮಾಹಿತಿಇದೆ. ಇದೇನಾ ಗುಜರಾತ್ ಮಾಡಲ್ ಕಳೆದ ಏಳು ವರ್ಷದಲ್ಲಿ ಡ್ರಗ್ ಮಾಫಿಯಾ ವ್ಯಾಪಕವಾಗಿದೆ. ಡ್ರಗ್ ದಂಧೆಯಿಂದ ಬರುವ ಹಣದಿಂದ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎನ್ನುವ ಮಾತಿದೆ. ಈ ಕುರಿತು ಕಟೀಲ್ ಯಾಕೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಎಸ್‍ಪಿ ವರ್ಗಾವಣೆ ವಾರ್ – ರಾಜಕೀಯ ಪ್ರಭಾವಿಗಳ ಒತ್ತಡ ಆರೋಪ

ಯುವಕರಿಗೆ ನೌಕರಿ ಇಲ್ಲ. 8% ನಿರುದ್ಯೋಗ ಇದೆ. ಉದ್ಯೋಗ ಕೊಡುವ ಬದಲು ನಶೆಯನ್ನು ಹಂಚುತ್ತಿದ್ದೀರಾ? Narcotics Control boardನಲ್ಲಿ DG ಪೋಸ್ಟ್ ಖಾಲಿ ಇದೆ. ಯಾಕೆ ಆ ಹುದ್ದೆ ತುಂಬಿಲ್ಲ? ಕಟೀಲ್ ಅವರೇ ನಿಮಗೆ ನಿಜವಾದ ಶಕ್ತಿ ಇದ್ದರೆ ರಾಹುಲ್ ಗಾಂಧಿ ಅವರಿಗೆ ಪ್ರಶ್ನೆ ಮಾಡುವ ಬದಲು ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡಿ ಎಂದು ಸಲಹೆ ನೀಡಿದರು. ಕಟೀಲ್ ಅವರು ನಮ್ಮ ನಾಯಕರನ್ನ ಟೀಕಿಸಲಿ ನಾವು ಅವರ ನಾಯಕರ ಕುರಿತು ಮಾತನಾಡುತ್ತೇವೆ ಎಂದು ಸವಾಲ್ ಹಾಕಿದರು.

Rahul Kateel

ನಾನು ಬಿಜೆಪಿ ನಾಯಕರ ಡ್ರಗ್ ಅವ್ಯವಹಾರ ಕುರಿತು ಹೇಳಿದ್ದೇನೆ. ಕಟೀಲ್ ಅವರು ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ಅವರನ್ನು ಡ್ರಗ್ ಪೆಡ್ಲರ್ ಎನ್ನುತ್ತಾರೆ? ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ಹೇಳಿಕೊಳ್ಳುವಂತ ಯೋಜನೆ ಜಾರಿಗೆ ತಂದಿಲ್ಲ. ಆ ಬಗ್ಗೆ ಎಂದಾದರೂ ಹೇಳಿದ್ದಾರಾ? ಬಿಜೆಪಿಯವರು ವೈಯಕ್ತಿಕ ಟೀಕೆ ಮಾಡುವ ಬದಲು ವಿಷಯಾಧಾರಿತ ಚರ್ಚೆ ನಡೆಸಲಿ. ಸಿದ್ಧಾಂತ ಹಾಗೂ ಅಭಿವೃದ್ದಿ ವಿಚಾರದಲ್ಲಿ ಚರ್ಚೆ ಮಾಡಲಿ ನಾವೂ ತಯಾರಿದ್ದೇವೆ ಎಂದು ಆಹ್ವಾನ ನೀಡಿದರು. ಇದನ್ನೂ ಓದಿ: ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ – ಸಾಲದ ಸುಳಿಯಲ್ಲಿ ರೈತರು

ಕೋಲಿ ಕಬ್ಬಲಿಗ ಹಾಗೂ ಕುರುಬ ಸಮಾಜವನ್ನು ಎಸ್‍ಟಿ ಗೆ ಸೇರಿಸುವ ಕುರಿತಾಗಿ ಸಚಿವ ಕೆ.ಎಸ್ ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ” ಸಂತೋಷ ಮಾಡಲಿ. ಚಿಟಿಕೆ ಹೊಡೆಯುವುದರೊಳಗೆ ಮಾಡುವುದಾಗಿ ಹೇಳುತ್ತಾರೆ. ಕಳೆದ ಎರಡು ವರ್ಷದಿಂದ ಚಿಟಿಕೆ ಹೊಡೆಯುವುದರಲ್ಲೇ ಇದ್ದಾರೆ” ಎಂದು ವ್ಯಂಗ್ಯವಾಡಿದರು.

KS Eshwarappa 1

“2020ರ ಮಾರ್ಚ್ 5ರಂದು ಚಿಂಚೋಳಿ ಎಂ.ಪಿ. ಅವರು ಪ್ರಧಾನ ಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿ ಬಂಜಾರ ಸಮುದಾಯವನ್ನು ಎಸ್‍ಟಿ ಸೇರಿಸಲು ಮನವಿ ಮಾಡಿದ್ದಾರೋ ಇಲ್ಲವೋ ಎಂದು ಹಲವಾರು ಬಾರಿ” ಚಿಂಚೋಳಿ ಎಂಪಿ” ಅವರಿಗೆ ಕೇಳಿದ್ದೇನೆ. ಉತ್ತರ ಕೊಟ್ಟಿಲ್ಲ. ಇತ್ತೀಚಿಗೆ ನಾನು ಎದುರಾದರೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ಒಂದು ವೇಳೆ ನಿಮಗೆ ಎಲ್ಲಾದರೂ ಸಿಕ್ಕರೆ ನೀವೇ ಕೇಳಿ” ಎಂದು ಕುಟುಕಿದರು. ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಡಾ.ಕಿರಣ್ ದೇಶಮುಖ, ಚೇತನ ಗೋನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

TAGGED:bjpKalaburagimodiNalin Kumar KateelPriyank KhargePublic TVRahul Gandhiಕಲಬುರಗಿನಳಿನ್ ಕುಮಾರ್ ಕಟೀಲ್ಪಬ್ಲಿಕ್ ಟಿವಿಪ್ರಿಯಾಂಕ್ ಖರ್ಗೆಬಿಜೆಪಿಮೋದಿರಾಹುಲ್ ಗಾಂಧಿ
Share This Article
Facebook Whatsapp Whatsapp Telegram

You Might Also Like

Sneha Debnath Yamuna River Delhi Tripura
Crime

ದೆಹಲಿಯಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ

Public TV
By Public TV
11 minutes ago
India vs England Test
Cricket

ಟೀಂ ಇಂಡಿಯಾ ಬೌಲರ್‌ಗಳ ಅಬ್ಬರಕ್ಕೆ ಆಂಗ್ಲರ ಪಡೆ ತತ್ತರ; ಭಾರತದ ಗೆಲುವಿಗೆ 193 ರನ್‌ ಗುರಿ

Public TV
By Public TV
22 minutes ago
Leopard Death
Crime

ರೈಲ್ವೆ ಹಳಿ ಬಳಿ ಎರಡು ಚಿರತೆಗಳ ಮೃತದೇಹ ಪತ್ತೆ – ರೈಲು ಡಿಕ್ಕಿಯಾಗಿ ಸಾವು ಶಂಕೆ

Public TV
By Public TV
32 minutes ago
bhatkal town police station
Crime

ಭಟ್ಕಳ ನಗರವನ್ನು 24 ಗಂಟೆಯಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ವಶಕ್ಕೆ

Public TV
By Public TV
52 minutes ago
Heart Attack Death
Chikkamagaluru

ಚಿಕ್ಕಮಗಳೂರು | ಪ್ರವಾಸಕ್ಕೆ ಬಂದಿದ್ದ ಬೆಂಗ್ಳೂರಿನ ಯುವಕ ಹೃದಯಾಘಾತಕ್ಕೆ ಬಲಿ

Public TV
By Public TV
1 hour ago
M.B Patil 1
Bengaluru City

ನಾಯಕತ್ವದಲ್ಲಿ ಗೊಂದಲವಿಲ್ಲ: ಸಿಎಂಗೆ ಶಾಸಕರ ಬೆಂಬಲವಿದೆ, ಹಾಗಂತ ಡಿಕೆಶಿಗೆ ಬೆಂಬಲ ಇಲ್ಲ ಅಂತ ಅಲ್ಲ: ಎಂ.ಬಿ.ಪಾಟೀಲ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?