ಬೆಂಗಳೂರು: ಬಿಜೆಪಿ (BJP) ಉಗ್ರಗಾಮಿ ಪಕ್ಷ ಎಂದ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಯನ್ನು ಪುತ್ರ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಮರ್ಥನೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ:
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದರಲ್ಲಿ ಏನು ತಪ್ಪಿದೆ? ಬಿಜೆಪಿ ಅವರು ಗಾಂಧೀಜಿ (Gandhiji) ಪೂಜೆ ಮಾಡಲ್ಲ. ಇವರೆಲ್ಲ ಗೋಡ್ಸೆ (Godse) ಪೂಜೆಯನ್ನು ಮಾಡುವವರು. ಗೋಡ್ಸೆ ಮೊದಲ ಉಗ್ರ ಹಾಗಾಗಿ ಬಿಜೆಪಿ (BJP) ಉಗ್ರಗಾಮಿ ಪಕ್ಷ ಎಂದು ನಮ್ಮ ತಂದೆಯವರು ಹೇಳಿರುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನಲ್ಲಿದ್ದ ಕರ್ನಾಟಕದ ಮಹೇಂದ್ರ ಕುಮಾರ್ ಹೊರಗೆ ಬಂದು ಆರ್‌ಎಸ್‌ಎಸ್ (RSS) ಬಗ್ಗೆ ಹೇಳಿದ್ದಾರೆ. ಬಡವರ ಮಕ್ಕಳನ್ನ ದಾರಿ ತಪ್ಪಿಸುತ್ತಾರೆ ಎಂದು ಅವರೇ ಹೇಳಿದ್ದಾರೆ. ಅವರು ಹೇಳಿರುವುದನ್ನು ಒಮ್ಮೆ ಕೇಳಿದರೆ ಆರ್‌ಎಸ್‌ಎಸ್, ಬಿಜೆಪಿ ಎಂದರೆ ಏನು ಎಂದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.ಇದನ್ನೂ ಓದಿ: