ಕಲಬುರಗಿ: ರವಿಕುಮಾರ್ ಸದನದಲ್ಲಿ ಅಲ್ಲ. ನಿಮ್ಮಾನ್ಸ್ನಲ್ಲಿ ಇರಬೇಕು. ಅವರು ಅಶ್ಲೀಲವಾಗಿ ಮಾತನಾಡಿದ್ದಕ್ಕೆ ವಿಡಿಯೋ ಸಾಕ್ಷಿಯಿದೆ. ಈಗ ರವಿಕುಮಾರ್ ನೇಣು ಹಾಕಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ಶುಕ್ರವಾರ ನಗರದಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್.ರವಿಕುಮಾರ್ (N Ravikumar) ಮೂಲತಃ ಬಿಜೆಪಿಯವರು ಅಲ್ಲ. ಅವರು ಆರ್‌ಎಸ್‌ಎಸ್ ಶಾಖೆಯಿಂದ ಬಂದವರು. ತಮ್ಮ ಬಾಯಿ ಚಪಲಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮನೆ ಕೆಲಸದವಳ ಜೊತೆ ಅಕ್ರಮ ಸಂಬಂಧ – ಟೆಕ್ಕಿ ಪತಿಯನ್ನೇ ಹತ್ಯೆಗೈದ ಪತ್ನಿ!
ರವಿಕುಮಾರ್ ಅವರಿಗೆ ಮುಂಚೆಯಿಂದ ಬಾಯಿ ಚಪಲವಿದೆ. ಕಲಬುರಗಿಯಲ್ಲೂ (Kalaburagi) ಜಿಲ್ಲಾಧಿಕಾರಿಗಳ ವಿರುದ್ಧ ಬಾಯಿಗೆ ಬಂದ ಹಾಗೇ ಮಾತಾಡಿದ್ದಾರೆ. ಅದಕ್ಕೆ ಕೋರ್ಟ್ ಸಹ ಛೀಮಾರಿ ಹಾಕಿದೆ. ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಕೆಟ್ಟ ಮಾತನಾಡುವ ಮೂಲಕ ತಮ್ಮ ಕೊಳಕು ಬುದ್ಧಿ, ಕೊಳಕು ಮನಸ್ಸನ್ನು ರವಿಕುಮಾರ್ ತೋರಿದ್ದಾರೆ. ರವಿಕುಮಾರ್ ಸದನದಲ್ಲಿ ಅಲ್ಲ. ನಿಮ್ಮಾನ್ಸ್ನಲ್ಲಿ ಇರಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು
ಮುಖ್ಯ ಕಾರ್ಯದರ್ಶಿಗಳ ಬಗ್ಗೆ ಮಾತನಾಡಿ ಕೊಳಲು ಮನಸ್ಸು ಪ್ರದರ್ಶನ ಮಾಡಿದ ರವಿಕುಮಾರ್ ಆ ರೀತಿ ಅಶ್ಲೀಲ ಮಾತನಾಡಿಲ್ಲ. ಅಶ್ಲೀಲ ಹೇಳಿಕೆ ನೀಡಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಬೇರೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಅವರಿಗೆ ನಾಚಿಕೆ ಆಗಬೇಕು. ವಿಧಾನಸೌಧದ ಎದುರಿಗೆ ಮಾತನಾಡಿದ ವಿಡಿಯೋವೇ ಸಾಕ್ಷಿಯಾಗಿದೆ. ಹಗ್ಗ ಕೊಡಿ ರವಿಕುಮಾರ್ ನೇಣು ಹಾಕಿಕೊಳ್ಳಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಶಾಲಿನಿ ರಜನೀಶ್ ವಿರುದ್ಧ ರವಿಕುಮಾರ್ ಮಾತಾಡಿದ್ದು ಸರಿ ಅಲ್ಲ: ಬಿಜೆಪಿ ಶಾಸಕ ಸುರೇಶ್ ಗೌಡ
ಸಂವಿಧಾನದ ಮೇಲೆ ನಂಬಿಕೆ ಇಡದ ಆರ್‌ಎಸ್‌ಎಸ್‌ಗೆ ಮನುಸ್ಮೃತಿ ಪಾಲಿಸುತ್ತದೆ. ಮನುಸ್ಮೃತಿ ಮಹಿಳೆಯರನ್ನು ಹೇಗೆ ನಡೆದುಕೊಳ್ಳುತ್ತದೆ ಎಂದು ನಮ್ಮೆಲ್ಲರಿಗೂ ತಿಳಿದಿದೆ. ಇದೆಲ್ಲವೂ ಬಿಜೆಪಿಗೆ ಆರ್‌ಎಸ್‌ಎಸ್ ಕಲಿಸಿದ ಪಾಠದಿಂದ ಬಂದಿದೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ, ದೌರ್ಜನ್ಯ ನೀಡುವ, ಪೋಕ್ಸೋ ಅತ್ಯಾಚಾರಿಗಳು ಬಿಜೆಪಿಯಲ್ಲೇ ಇದ್ದಾರೆ. ಸಮರ್ಥನೆ ಮಾಡಿಕೊಳ್ಳುವ ಬಿಜೆಪಿ ನಾಯಕರು ಮೊದಲು ತಮ್ಮ ಮನೆಯಲ್ಲಿ ಮನುಸ್ಮೃತಿ ಜಾರಿಗೆ ತರಲಿ ನೋಡಣ ಎಂದು ಸವಾಲ್ ಹಾಕಿದ್ದಾರೆ.
ಆರ್‌ಎಸ್‌ಎಸ್ ಬ್ಯಾನ್ ತೆಗೆದು ತಪ್ಪಾಗಿದೆ
ನಾನು ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇನೆ ಎಂದು ಹೇಳಿಲ್ಲ. ಮೂರು ಬಾರಿ ಆರ್‌ಎಸ್‌ಎಸ್ ಬ್ಯಾನ್ ಆಗಿತ್ತು. ಆ ಬ್ಯಾನ್ ತೆಗೆದು ತಪ್ಪು ಮಾಡಿದ್ದೇವೆ ಎಂದು ಹೇಳಿದ್ದು, ಕಾಲಚಕ್ರವಿದೆ, ಮುಂದೆ ನಾವು ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದಾಗ ಮತ್ತೊಮ್ಮೆ ಸಂಘವನ್ನು ಬ್ಯಾನ್ ಮಾಡುತ್ತೇವೆ. ಜೈಲಿಗೆ ಹೋಗೋಕ್ಕೆ ಏಕೆ ಅಷ್ಟು ಆತುರ ಅವರಿಗೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್ ಸಿಂಧೂರದಲ್ಲಿ ಪಾಕ್-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ
ಬಿಜೆಪಿಗರು ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಲು 10 ಕಾರಣ ಕೇಳುತ್ತಾರೆ. ಆದರೆ, ಬಿಜೆಪಿಗರು ಸ್ಥಾಪನೆಯಾಗಿ 100 ವರ್ಷ ಆಯ್ತು. ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಾಲಿ ಧನಂಜಯ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್
ರಾಷ್ಟ್ರ ವಿರೋಧಿ ಆರ್‌ಎಸ್‌ಎಸ್
ಆರ್‌ಎಸ್‌ಎಸ್‌ನವರಿಗೆ ರಾಷ್ಟ್ರ ಧ್ವಜ ಹಾರಿಸಲು 52 ವರ್ಷ ಬೇಕಾಗಿತ್ತು. ನಮಗೆ ಮನುಸ್ಮೃತಿ ಬೇಕು ಎಂದು 150 ಹೋರಾಟ ಮಾಡಿದ್ದಾರೆ. ಆರ್‌ಎಸ್‌ಎಸ್ ಅವರ ಆರ್ಗನೈಜರ್ ಮ್ಯಾಗಜಿನಿನ ಇತಿಹಾಸ ತೆಗದು ನೋಡಿದರೇ ಅವರ ಮನಸ್ಥಿತಿ ತಿಳಿಯುತ್ತದೆ. ಆರ್‌ಎಸ್‌ಎಸ್‌ನ ಚೇಲಲಾಗಿರುವ ಬಿಜೆಪಿ ಪಕ್ಷದ ನಾಯಕರು ಅದನ್ನು ಓದಿಕೊಳ್ಳಲಿ. ಜಾತಿ, ಧರ್ಮದ ಹೆಸರಲ್ಲಿ ಸಂಘರ್ಷ ಉಂಟು ಮಾಡುವ ಯಾವುದೇ ಚಟುವಟಿಕೆಗಳು ನಡೆಸಿದರು. ಅವರೇ ನಿಜವಾದ ದೇಶ ದ್ರೋಹಿಗಳು ಎಂದು ಡಾ.ಅಂಬೇಡ್ಕರ್ ಉಲ್ಲೇಖಸಿ ಹೇಳಿದ್ದಾರೆ. ಈಗ ದೇಶದಲ್ಲಿ ಆರ್‌ಎಸ್‌ಎಸ್ ಅಂತಹ ಕೆಲಸಕ್ಕೆ ಮುಂದಾಗಿರುವ ರಾಷ್ಟ್ರ ವಿರೋಧಿ ಸಂಘಟನೆಯಾಗಿದೆ ಎಂದು ಆರೋಪಿಸಿದ್ದಾರೆ.