ಗದಗ: ವಯಸ್ಸು, ಸಂಪತ್ತು, ಅಧಿಕಾರವಿದ್ದರೆ ಮದ ಬರುತ್ತದೆ ಎಂದು ಸಚಿವ ಸಿ.ಸಿ ಪಾಟೀಲ್ ಪ್ರಿಯಾಂಕ್ ಖರ್ಗೆ ಅವರ ಲಂಚ, ಮಂಚ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಸಿ ಪಾಟೀಲ್, ಮೊದಲು ಕಲ್ಯಾಣ ಕರ್ನಾಟಕ ಪರಿಸ್ಥಿತಿ ಹೇಗಿದೆ ಅಂತ ನೋಡಲಿ. ಇಷ್ಟು ವರ್ಷ ಮಲ್ಲಿಕಾರ್ಜುನ ಖರ್ಗೆ, ದಿವಂಗತ ಧರ್ಮಸಿಂಗ್ ಆಳ್ವಿಕೆ ಮಾಡಿದ್ರಲ್ಲಾ ಏನು ಮಾಡಿದ್ರು? ಎಷ್ಟು ಅಭಿವೃದ್ಧಿಯಾಗಿದೆ? ಎಷ್ಟು ಖರ್ಚಾಗಿದೆ? ಆ ಹಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿ, ಮಹಿಳೆಯರು ಸರ್ಕಾರಿ ನೌಕರಿ ಸೇರುವ ಬಗ್ಗೆ ಹಗುರವಾಗು ಮಾತನಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಶಿವಕುಮಾರ್ ಪಿಎಫ್ಐ ಸೇರಿದ್ರೆ ಒಳ್ಳೆದು: ಸಿ.ಸಿ ಪಾಟೀಲ್
Advertisement
Advertisement
ಕಾಂಗ್ರೆಸ್ ಮೂಲ: ಪಿತಾಮಹ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಸಿಗರೇಟು ಸೇದುವುದು, ತಬ್ಬಿಕೊಳ್ಳುವುದು ಅದರ ಕಡೆ ಖರ್ಗೆ ಸ್ವಲ್ಪ ತಿರುಗಿ ನೋಡಲಿ. ಕಾಂಗ್ರೆಸ್ ಇತಿಹಾಸ ಕೆದಕಿದರೆ ಬೆತ್ತಲಾಗುತ್ತದೆ. ಖರ್ಗೆ ಕ್ಷಮೆ ಕೇಳಲ್ಲ ಎಂದರೆ ನಾಚಿಕೆ ಇಲ್ಲದವ ಎಂದರ್ಥ ಅಂತ ವಾಗ್ದಾಳಿ ಮಾಡಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್ ಕೇರ್
Advertisement
ಈ ವೇಳೆ ನಗರಸಭೆ ಅಧ್ಯಕ್ಷ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ದು ಪಲ್ಲೆದ, ಎಮ್.ಎಸ್ ಕರಿಗೌಡ್ರ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.