CinemaKarnatakaLatestMain PostSandalwood

ಪ್ರಿಯಾಮಣಿ ನಟನೆಯ ’56′ ಸಿನಿಮಾದ ಟ್ರೈಲರ್ ಬಿಡುಗಡೆ

ಮೆಡಿಕಲ್ ಮಾಫಿಯಾ ಸುತ್ತ ನಡೆಯುವ ಕಥಾಹಂದರ ಹೊಂದಿರುವ ” 56″ ಚಿತ್ರದ ಟ್ರೈಲರ್ ಹಾಡು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಲನಚಿತ್ರ ವಾಣಿಜ್ಯ‌ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮಾತನಾಡಿ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು. ಚತುರ್ಭಾಷಾ ಕಲಾವಿದೆ ಪ್ರಿಯಾಮಣಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ರೆಡ್ಡಿ  ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ‌ ಸೇರಿ ೪/ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಚಿತ್ರದ ಟ್ರೈಲರ್ ಬಿಡುಗಡೆ‌ ಮಾಡಿದ ಹಿರಿಯ ಸಿನಿಮಾ ಪ್ರಚಾರಕರ್ತ ನಾಗೇಂದ್ರ ಅವರು ಮಾತನಾಡುತ್ತ,  ಚಿತ್ರ‌ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಪ್ರಯತ್ನ ಮಾಡಿದ್ದಾರೆ, ಈ ಚಿತ್ರ ಖಂಡಿತ ಶತದಿನೋತ್ಸವ ಆಚರಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. ನಿರ್ದೇಶಕ ರಾಜೇಶ್ ಆನಂದ್ ಲೀಲಾ ಮಾತನಾಡಿ,  ನಿರ್ಮಾಪಕ ಪ್ರವೀಣ್ ರೆಡ್ಡಿ ಅವರೇ  ಕಥೆ,  ಚಿತ್ರಕಥೆ  ಬರೆದಿದ್ದಾರೆ. ಚಿತ್ರಕ್ಕೆ ನಟಿ ಪ್ರಿಯಾಮಣಿ ಅವರು  ಚಿನ್ನದ ಕಳಸವಿದ್ದಂತೆ,  ಮೆಡಿಕಲ್ ಮಾಫಿಯಾದ ಸುತ್ತ ಸಾಗುವ  ಸೈನ್ಸ್  ಫಿಕ್ಷನ್ ಕತೆ, ಈವರೆಗೂ ಇದನ್ನು ಯಾರೂ ತೆರೆಮೇಲೆ ತರುವ ಪ್ರಯತ್ನ ಮಾಡಿಲ್ಲ, ವೀಕ್ಷಕರಿಗೂ ಆಶ್ಚರ್ಯವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: EXCLUSIVE:ಆಗಿದ್ದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಲ್ಲ: ವೈಷ್ಣವಿ

ನಟಿ ಪ್ರಿಯಾಮಣಿ ಮಾತನಾಡಿ, ನಾನು ಮೊದಲು ಕಥೆ ಕೇಳಿದಾಗ, ನೀವು ಹೇಳಿದ ಹಾಗೆ ಸಿನಿಮಾ ಮಾಡಿದರೆ  ಹಿಟ್ ಆಗಲಿದೆ ಎಂದು ಹೇಳಿದ್ದೆ‌.  ಚಿತ್ರದ ಮೂಲಕ ಒಂದೊಳ್ಳೆ ಸಂದೇಶ ಹೇಳಲಾಗಿದೆ. ಕಥೆಯೇ ಪವರ್ ಹೌಸ್ ಹೊರತು ನಾನಲ್ಲ ಎಂದು ಹೇಳಿದರು. ನಟ, ನಿರ್ಮಾಪಕ ಪ್ರವೀಣ್ ರೆಡ್ಡಿ ಮಾತನಾಡಿ,  ಡಿಆರ್ 56 ಕಥೆ  ರೆಡಿ ಮಾಡಿಕಡು, ಸಿನಿಮಾ ಮಾಡಲು ಮುಂದಾದೆವು. ಪ್ರಿಯಾಮಣಿ ಅವರು ಕಥೆ ಕೇಳಿ ಸುಮ್ಮನೆ ಇದ್ದರು. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೇ ಅನ್ನಿಸಿತ್ತು. ನಂತರ ಒಪ್ಪಿದರು. ಅವರಿಲ್ಲದಿದ್ದರೆ, ಸಿನಿಮಾನ ಎಲ್ಲಾ ಕಡೆ ತಲುಪಿಸಲು ಆಗುತ್ತಿರಲಿಲ್ಲ ಎಂದು ಹೇಳಿದರು.

ನಟ ರೂಪೇಶ್ ಕುಮಾರ್ ಮಾತನಾಡಿ,  ಚಿತ್ರದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೇನೆ. ಚಿತ್ರದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು. ಸಂಚಿತ್ ಫಿಲಂಸ್ ವೆಂಕಟ್ ಗೌಡ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗೆಯಾಗಲಿದೆ ಎನ್ನುವ ಮಾಹಿತಿ ನೀಡಿದರು. ಛಾಯಾಗ್ರಾಹಕ ರಾಕೇಶ್ ಸಿ ತಿಲಕ್,  ಸಂಕಲನಕಾರ ವಿಶ್ವ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Live Tv

Leave a Reply

Your email address will not be published. Required fields are marked *

Back to top button