ಕನ್ನಡದ ರಾಮ್, ಅಣ್ಣಾ ಬಾಂಡ್ (Annabond) ಸಿನಿಮಾಗಳ ನಟಿ ಪ್ರಿಯಾಮಣಿ (Priyamani) ಅವರು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಅನ್ಯಧರ್ಮದವನ ಜೊತೆ ಮದುವೆಯಾಗಿದ್ದಕ್ಕೆ (Wedding) ನಟಿ ಎದುರಿದ ಟ್ರೋಲ್, ಕಾಮೆಂಟ್‌ಗಳ ಬಗ್ಗೆ ಮೌನ ಮುರಿದ್ದಾರೆ. ತಮಗೆ ಹುಟ್ಟುವ ಮಕ್ಕಳು ಮುಂದೊಂದು ದಿನ ಭಯೋತ್ಪಾದಕರಾಗುತ್ತಾರೆ ಎಂದು ಟೀಕಿಸಿದವರಿಗೆ ನಟಿ ತಕ್ಕ ಉತ್ತರ ಕೊಟ್ಟಿದ್ದಾರೆ.
ನನಗೂ ಮತ್ತು ಮುಸ್ತಫಾಗೂ ಹುಟ್ಟುವ ಮಕ್ಕಳು ಭಯೋತ್ಪಾದಕರು ಆಗುತ್ತಾರೆ ಎಂದು ಕೆಲವರು ಹೇಳಿದ್ದರು. ಟ್ರೋಲ್ ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದ್ದಾರೆ. ಮದುವೆಯಾಗುತ್ತಿರುವ ಬಗ್ಗೆ ಘೋಷಣೆಯಾದ ದಿನದಿಂದ ಈ ದ್ವೇಷ ಅಭಿಯಾನವು ಮದುವೆಯ ನಂತರವೂ ಮುಂದುವರೆಯಿತು ಎಂದು ನಟಿ ಹೇಳಿದ್ದಾರೆ. ನನ್ನ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸುವ ರೀತಿಯಲ್ಲಿ ಈ ಸೈಬರ್ ದಾಳಿ ಮುಂದುವರೆದಿದೆ ಎಂದು ಪ್ರಿಯಾಮಣಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಅನ್ಯಧರ್ಮದವನ ಜೊತೆಗಿನ ಮದುವೆಯಾಗಿದ್ದಕ್ಕೆ ಮತ್ತೆ ಧರ್ಮದ ಕುರಿತು ಟೀಕಿಸಿದವರಿಗೆ ʻನಾನು ಹುಟ್ಟು ಹಿಂದೂʼ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಕೆಟ್ಟ ಟ್ರೋಲ್‌ಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್?
ಅಂದಹಾಗೆ, ಮುಂಬೈ ಮೂಲದ ಮುಸ್ತಫಾ ರಾಜ್ ಅವರನ್ನು 2017ರಲ್ಲಿ ಪ್ರಿಯಾಮಣಿ ಮದುವೆಯಾದರು. ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯ ಮುದ್ರೆ ಒತ್ತಿದ್ದರು.