ಕನ್ನಡದ ಹೆಸರಾಂತ ನಟಿ ಪ್ರಿಯಾಮಣಿ (Priyamani) ನಟನೆಯ ಜವಾನ್ ಸಿನಿಮಾದ ಭಾರೀ ಗೆಲುವು ಹಲವರಿಗೆ ಅದೃಷ್ಟವನ್ನು ತಂದಿದೆ. ಜವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಪ್ರಿಯಾಮಣಿ ಇದೀಗ ಮತ್ತೋರ್ವ ಸ್ಟಾರ್ ನಟನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮಲಯಾಳಂನ ಹೆಸರಾಂತ ನಟ ಮೋಹನ್ ಲಾಲ್ (Mohan Lal) ನಟನೆಯ ‘ನೇರು’ (Neru) ಸಿನಿಮಾಗೆ ಪ್ರಿಯಾಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
- Advertisement 2-
ಈ ಮಾಹಿತಿಯನ್ನು ಸ್ವತಃ ಪ್ರಿಯಾಮಣಿ ಅವರೇ ಹಂಚಿಕೊಂಡಿದ್ದು, ನೇರು ಸಿನಿಮಾದ ಶೂಟಿಂಗ್ ನಲ್ಲೂ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಹೇಳಿಕೊಂಡಿದ್ದರೂ, ಪಾತ್ರದ ಹಿನ್ನೆಲೆಯನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಆದರೆ, ಹೆಮ್ಮೆಯಿಂದ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ
- Advertisement 3-
- Advertisement 4-
ಜವಾನ್ ಸಿನಿಮಾದಲ್ಲಿ ಪ್ರಿಯಾಮಣಿ ಅವರ ಪಾತ್ರ ತುಂಬಾ ಹೊತ್ತು ಪರದೆಯ ಮೇಲೆ ಬಾರದೇ ಇದ್ದರೂ, ಅದೊಂದು ವಿಭಿನ್ನ ಮತ್ತು ವಿಶೇಷ ಪಾತ್ರವಾಗಿತ್ತು. ಹಾಗಾಗಿ ಪ್ರಿಯಾಮಣಿ ಪಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಇದೀಗ ಮತ್ತೆ ಸ್ಟಾರ್ ನಟನ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.
ಈ ಸಿನಿಮಾವನ್ನು ಜೀತು ಜೋಸೆಫ್ (Jeetu Joseph) ನಿರ್ದೇಶನ ಮಾಡುತ್ತಿದ್ದು, ಮೋಹನ್ ಲಾಲ್ ನಟನೆಯ ದೃಶ್ಯಂ ಸಿನಿಮಾಗೆ ಇವರೇ ನಿರ್ದೇಶಕರು. ದೃಶ್ಯಂ, ದೃಶ್ಯಂ2 ಯಶಸ್ಸಿನ ನಂತರ ಮತ್ತೆ ಮೋಹನ್ ಲಾಲ್ ಜೊತೆ ಜೀತು ಕೈ ಜೋಡಿಸಿದ್ದಾರೆ. ಹೀಗಾಗಿ ನೇರು ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಕತೆಯನ್ನು ಹೇಳಲಿದ್ದಾರಂತೆ ಜೀತು ಜೋಸೆಫ್.
Web Stories