Connect with us

Cinema

100 ಕೋಟಿ ರೂ. ವೆಚ್ಚದಲ್ಲಿ ಪತಿಗಾಗಿ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ!

Published

on

ಬೆಂಗಳೂರು: ಸುದೀಪ್ ಪತ್ನಿ ಪ್ರಿಯಾ ಪತಿಗಾಗಿ 100 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಸುದೀಪ್ ಈ ಮೊದಲು ‘ವೀರ ಮದಕರಿ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈಗ ಮದಕರಿ ನಾಯಕನ ಕತೆಯನ್ನಾಧರಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದುರ್ಗದ ಮದಕರಿ ನಾಯಕನ ಜೀವನಾಧಾರಿತ ಸಿನಿಮಾವನ್ನು ಮಾಡಲು ಹೊರಟಿದ್ದು ಈ ಚಿತ್ರವನ್ನು 100 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಸಿದ್ಧತೆ ನಡೆದಿದೆ.

2009ರಲ್ಲಿ ವೀರ ಮದಕರಿ ಚಿತ್ರದಲ್ಲಿ ನಟಿಸಿದ ಸುದೀಪ್ ಅವರಿಗೆ ವಾಲ್ಮೀಕಿ ಟ್ರಸ್ಟ್ ಕಡೆಯವರು ಕಿಚ್ಚನಿಗೆ ಚಿತ್ರದುರ್ಗದ ಪಾಳೇಗಾರನ ಬಗ್ಗೆ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಹಾಗಾಗಿ ಕಳೆದ ಕೆಲ ವರ್ಷದಿಂದ ಸುದೀಪ್ ಈ ಬಗ್ಗೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗುವಿನಲ್ಲೂ ಚಿತ್ರ ತರಲು ಪ್ರಿಯಾ ಸುದೀಪ್ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸುದೀಪ್ ಅವರ ಮದಕರಿ ಚಿತ್ರ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಅಲ್ಲದೇ ಈ ಚಿತ್ರ ಸೆಟ್ಟೇರುವುದಕ್ಕೆ ಇನ್ನೊಂದು ವರ್ಷ ಬೇಕಾಗುತ್ತದೆ. ಅಲ್ಲದೇ ವಾಲ್ಮಿಕಿ ಮಠದ ಸ್ವಾಮೀಜಿ ಅವರು ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಕತೆ ಬರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದೀಪ್ ಅಭಿನಯದ ಮದಕರಿ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

ಇತ್ತ ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದು, ದರ್ಶನ್ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಚಿತ್ರದ ಘೋಷಣೆಯಾದ ಬೆನ್ನಲ್ಲೇ ಸುದೀಪ್ ಅವರು ಮದಕರಿ ನಾಯಕನ ಕಥೆ ಇರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *