ಬೆಂಗಳೂರು: ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ U-20 ಬೆಳ್ಳಿ ಗೆದ್ದ ಕರ್ನಾಟಕದ ಪ್ರಿಯಾ ಮೋಹನ್ ಒಳಗೊಂಡ ಭಾರತ ರಿಲೇ ತಂಡಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Advertisement
ಕರ್ನಾಟಕದ ಪ್ರಿಯಾ ಮೋಹನ್, ಭರತ್ ಶ್ರೀಧರ್, ರೂಪಾಲ್ ಚೌಧರಿ ಮತ್ತು ಕಪಿಲ್ ಅವರನ್ನೊಳಗೊಂಡ ಮಿಕ್ಸಡ್ ರಿಲೇ ತಂಡ ಉತ್ತಮ ಪ್ರದರ್ಶನ ತೋರಿಸಿದ್ದು, ಕೂದಲೆಳೆ ಅಂತದರಲ್ಲಿ ಚಿನ್ನದ ಪದಕ ಕೈ ತಪ್ಪಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ
Advertisement
Congratulations to the Indian quartet of Barath Sridhar, Priya Mohan, Kapil and Rupal Chaudhary on winning SILVER MEDAL in 4x400m Mixed Relay at the World U20 Athletics Championships!
They also created Asian U20 record with a time of 3:17.76 !#IndianAthletics pic.twitter.com/03zNN5bEkQ
— Kiren Rijiju (@KirenRijiju) August 3, 2022
Advertisement
ಕಳೆದ ವರ್ಷ ಕಂಚಿನ ಪದಕದ ಸಾಧನೆ ಮಾಡಿದ್ದ ಭಾರತದ ರಿಲೇ ತಂಡ ಈ ಬಾರಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದೆ. ಸ್ವಲ್ಪದರಲ್ಲೆ ಚಿನ್ನದ ಪದಕ ಕೈ ತಪ್ಪಿದ್ದು, ಮುಂದಿನ ಸಲ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದ್ದು, ಅತ್ಯುತ್ತಮ ಸಾಧನೆ ಮಾಡಿರುವ ರಿಲೇ ತಂಡಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
Advertisement
ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪ್ರಿಯಾ ಮೋಹನ್ ಅವರಿಗೆ 5 ಲಕ್ಷ ನಗದು ಪುರಸ್ಕಾರ ನೀಡುವುದಾಗಿ ಸಚಿವ ಡಾ.ನಾರಾಯಣಗೌಡ ಘೋಷಿಸಿದ್ದಾರೆ.