ಮಲಯಾಳಂ ಸ್ಟಾರ್ ನಟಿ ಪುನೀತ್ ನಾಯಕಿ ಪ್ರಿಯಾ ಆನಂದ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದು, ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮೆರಿಕಾದಲ್ಲಿ ಬೆಳೆದ ಈ ಚೆಲುವೆ ಬಹುಭಾಷಾ ನಟಿ ಎಂದೇ ಫೇಮಸ್ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ `ಜೇಮ್ಸ್’ ಸೇರಿದಂತೆ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಿಯಾ ಆನಂದ್ ತಮ್ಮ ಮದುವೆಯ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದಾರೆ.
ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಪ್ರಿಯಾ, ದೇಶಬಿಟ್ಟು, ತಮ್ಮದೇ ದೇಶವೊಂದನ್ನು ನಿರ್ಮಿಸಿರುವ, ಬಿಡದಿಯ ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದೇನೆ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿತ್ಯಾನಂದ ಸ್ವಾಮಿಯನ್ನು ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದಿದ್ದಾರೆ. ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಜೇಮ್ಸ್ ನಾಯಕಿ ಈ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸಿದ ‘ಜೇಮ್ಸ್’ ಚೆಲುವೆ ಪ್ರಿಯಾ ಆನಂದ್

Live Tv
[brid partner=56869869 player=32851 video=960834 autoplay=true]


