ಸೌತ್ ಬ್ಯೂಟಿ ಪ್ರಿಯಾ ಆನಂದ್ (Priya Anand) ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಾ ಕನ್ನಡವರಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಕನ್ನಡ ಸಿನಿಪ್ರೇಕ್ಷಕರಿಗೆ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು ಮತ್ತೆ ‘ಜೇಮ್ಸ್’ (James) ನಟಿ ಪ್ರಿಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Advertisement
ರಾಜಕುಮಾರ, ಜೇಮ್ಸ್, ಆರೆಂಜ್, ಕರಟಕ ದಮನಕ ಸಿನಿಮಾಗಳಲ್ಲಿ ನಟಿಸಿ ಪ್ರಿಯಾ ಸೈ ಎನಿಸಿಕೊಂಡಿದ್ದಾರೆ. ಇದೀಗ ವಿನೋದ್ ಪ್ರಭಾಕರ್‌ಗೆ (Vinod Prabhakar) ನಾಯಕಿಯಾಗಿ ಬಲರಾಮನ ಅಡ್ಡಾಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
Advertisement
Advertisement
ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ‘ಬಲರಾಮನ ದಿನಗಳು’ ಎಂದು ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಪ್ರಿಯಾ ನಾಯಕಿಯಾಗಿದ್ದು, ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಈ ಕುರಿತು ಚಿತ್ರತಂಡ ಕೂಡ ಅಧಿಕೃತವಾಗಿ ತಿಳಿಸಿದೆ. 80ರ ಕಾಲಘಟ್ಟದ ಭೂಗತಲೋಕದ ಹಿನ್ನೆಲೆಯುಳ್ಳ ವಿಭಿನ್ನ ಕಥೆ ಇದಾಗಿದೆ. ಇದಕ್ಕೆ ‘ಆ ದಿನಗಳು’ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಲಿದ್ದಾರೆ.
Advertisement
ಅಂದಹಾಗೆ, ‘ರಾಜಕುಮಾರ’ ಮತ್ತು ‘ಜೇಮ್ಸ್’ ಈ ಎರಡು ಸಿನಿಮಾಗಳಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಪ್ರಿಯಾ ನಾಯಕಿಯಾಗಿದ್ರು. ಈ ಹಿಂದೆ ಹಲವು ಸಂದರ್ಶನಗಳಲ್ಲಿ ನನ್ನ ನೆಚ್ಚಿನ ನಟ ಅಪ್ಪು ಎಂದು ನಟಿ ಹೇಳಿದ್ದರು. ಅಪ್ಪು ಮೇಲಿನ ಅವರು ತೋರೋ ಗೌರವ ಮತ್ತು ಕನ್ನಡ ಸಿನಿಮಾ ಮೇಲಿನ ಅವರ ಪ್ರೀತಿಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.