ವಿಜಯನಗರ: ಖಾಸಗಿ ಸಾರಿಗೆ ಸಂಸ್ಥೆಯವರು ಮುಷ್ಕರಕ್ಕೆ (Private Transport Strike) ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ಅವರ ಹಕ್ಕು, ಮಾಡಲಿ ಎಂದು ಸೋಮವಾರ ನಡೆಯಲಿರುವ ಖಾಸಗಿ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ಖಾಸಗಿ ಸಾರಿಗೆ ನೌಕರರ ಹಲವಾರು ಬೇಡಿಕೆಗಳು ಇವೆ. ಸುಮಾರು 20-22 ಬೇಡಿಕೆಗಳಿವೆ. ಅದರಲ್ಲಿ 2 ಪ್ರಮುಖವಾಗಿವೆ. ಶಕ್ತಿ ಯೋಜನೆ ವಿಚಾರದಲ್ಲಿ ಅವರ ಬೇಡಿಕೆ ಇದೆ. ಎರಡನೆಯದು ಸ್ವಲ್ಪ ಟ್ಯಾಕ್ಸ್ ಹೆಚ್ಚಳವಾಗಿರೋದು ಎಂದು ತಿಳಿಸಿದರು.
Advertisement
Advertisement
ಇನ್ನು ಆಟೋ ಚಾಲಕರು ಕೆಲವು ವಿಚಾರಗಳು ಹೇಳಿದ್ದಾರೆ. ಇನ್ನೂ ಟ್ಯಾಕ್ಸ್ ವಿಚಾರದಲ್ಲಿ ಕೆಲವು ಬೇಡಿಕೆಗಳಿವೆ. ಈ 2 ಬೇಡಿಕೆಗಳು ಅಷ್ಟೇ ನಮ್ಮ ಸರ್ಕಾರದ್ದು. ಉಳಿದ ಎಲ್ಲಾ ಬೇಡಿಕೆಗಳು ಹಳೆಯ ಬಿಜೆಪಿ ಸರ್ಕಾರದ ಬೇಡಿಕೆಗಳು ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಸುದೀರ್ಘ ಚೆರ್ಚೆ ಆಗಬೇಕು: ಬೊಮ್ಮಾಯಿ
Advertisement
Advertisement
ಅವರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ, ಹೋರಾಟ ಮಾಡೋದು ಅವರ ಹಕ್ಕು, ಮಾಡಲಿ. ಸರ್ಕಾರ ಈ ಬಗ್ಗೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿದೆ. ನಾನು ಅವರಿಗೆ ಮುಷ್ಕರ ಮಾಡುವುದು ಬೇಡ ಎನ್ನಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್‌ಗೆ ಉತ್ತರ ಕನ್ನಡ ಜಿಲ್ಲೆಯ ಚಾಲಕರ ಸಂಘ ಬೆಂಬಲ
Web Stories