– ಕಲಬುರಗಿಯಿಂದ ಬೆಳಗಾವಿಗೆ ತೆರಳಿತ್ತಿದ್ದಾಗ ಘಟನೆ
ವಿಜಯಪುರ: ಬಬಲೇಶ್ವರ ತಾಲೂಕಿನ ಮಂಗಳೂರು (Mangaluru) ಗ್ರಾಮದಲ್ಲಿ ಜೆಟ್ ವಿಮಾನವೊಂದು (Private Jet Plane) ಇಂದು ಮಧ್ಯಾಹ್ನ 3 ಗಂಟೆಯ ವೇಳೆಗೆ ಪತನವಾಗಿದೆ.
ಕಲಬುರಗಿಯಿಂದ ಬೆಳಗಾವಿಗೆ (Belagavi) ತೆರಳುತ್ತಿದ್ದ ಇಂಧನ ಖಾಲಿಯಾದ ಕಾರಣ ವಿಮಾನ ಪತನಗೊಂಡಿದೆ ಎಂಬ ಪ್ರಾಥಮಿಕ ಮಾಹಿಲತಿ ಲಭ್ಯವಾಗಿದೆ.
ರೆಡ್ ಬರ್ಡ್ ಕಂಪನಿಯ ಖಾಸಗಿ ಕಂಪನಿಯ ವಿಮಾನ ಪತನಗೊಂಡು ರೈತರ ಜಮೀನಿನ ಮೇಲೆ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಜೆಟ್‌ನಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿರುವ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

