ಬೆಂಗಳೂರು: ಬಿಬಿಎಂಪಿ (BBMP) ಜಾಗವನ್ನ ಯಾರು ಬೇಕಾದ್ರೂ ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದು. ಯಾಕೆಂದರೆ ವರ್ಷಗಳ ಕಾಲ ಖಾಸಗಿಯವರು ಅಕ್ರಮವಾಗಿ ಬಳಸಿದರೂ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸಿದೆ.
ವಾರ್ಡ್ ನಂಬರ್ 12 ರ ಶೆಟ್ಟಿಹಳ್ಳಿ ಬಳಿಯ ಬಿಬಿಎಂಪಿ ಆಟದ ಮೈದಾನವನ್ನ (Ground) ಕಟ್ಟಡ ಸಾಮಾಗ್ರಿಗಳ ಹಾಗೂ ಕೆಲಸಗಾರರಿಗೆ ಟೆಂಟ್ ಹಾಕಿಕೊಡಲಾಗಿದೆ. ಅದೂ ಕಳೆದ ಎರಡು ವರ್ಷಗಳಿಂದ. ಇದರಿಂದ ರೋಸಿಹೋಗಿದ್ದ ಸ್ಥಳಿಯರು ಬಿಬಿಎಂಪಿ ಅಧಿಕಾರಿಗಳು ಹಾಗೂ ಖಾಸಗಿ ಕಂಟ್ರಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಆಟದ ಮೈದಾನವನ್ನೇ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಖಾಸಗಿ ಗುತ್ತಿಗೆದಾರನನ್ನು ಸಂಪರ್ಕಿಸಿದರೆ ಶಾಸಕರ ಅನುಮತಿ ಪಡೆದಿದ್ದೇನೆ ಎಂದು ಎಂದು ಕಥೆ ಕಟ್ಟಿದ್ದ. ಈ ಬಗ್ಗೆ ದಾಸರಹಳ್ಳಿ ಶಾಸಕರಾದ ಮುನಿರಾಜು (Muniraju) ಅವರನ್ನು ಪಬ್ಲಿಕ್ ಟಿವಿ ಕೇಳಿದಾಗ ಅವನ್ಯಾರೋ ಫ್ರಾಡ್, ನಾನು ಯಾರಿಗೂ ಹೇಳಿಲ್ಲ. ನಾನೇ ಖಾಲಿ ಮಾಡಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದೇನೆ ಆದರೂ ಖಾಲಿ ಮಾಡಿಲ್ಲ. ಇನ್ನೊಂದು ವಾರದಲ್ಲಿ ಖಾಲಿ ಮಾಡಿ ಮೈದಾನವನ್ನ ಸ್ಥಳಿಯರಿಗೆ ಬಿಟ್ಟುಕೊಡದೇ ಹೋದರೆ ಕಟ್ಟಡ ಸಾಮಾಗ್ರಿಗಳನ್ನ ನಾನೇ ಹೊರಗೆ ಹಾಕಿಸುತ್ತೇನೆ ಎಂದರು. ಇದನ್ನೂ ಓದಿ: Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ
ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಸಹಿಸಿಕೊಂಡು ಇದ್ದ ಸಾರ್ವಜನಿಕರು ಕೊನೆಗೆ ರೊಚ್ಚಿಗೆದ್ದು ತಮ್ಮ ಬಿಬಿಎಂಪಿ ಮೈದಾನ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರೂ ಗಡುವು ಕೊಟ್ಟಿದ್ದಾರೆ.