ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ (MUDA Scam) ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತ ಆದೇಶವನ್ನು ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (Court of Representatives) ಪ್ರಕಟಿಸಲಿದೆ.
ನ್ಯಾಯಾಲಯದ ಈ ಆದೇಶ ಆಧರಿಸಿ ಸಿದ್ದರಾಮಯ್ಯ (Siddaramaiah) ಅವರು ವಿಚಾರಣೆ ಎದುರಿಸಲಿದ್ದಾರೆಯೇ ಎಂಬುದು ಗೊತ್ತಾಗಲಿದೆ. ಕೋರ್ಟ್ ನೀಡುವ ಆದೇಶ ನೋಡಿಕೊಂಡು ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ನೀಡಿರುವ ದೂರನ್ನು ಅಭಿಯೋಜನೆಗೆ ಅನುಮತಿ ಪರಿಗಣಿಸಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯಪಾಲರು ನಿರ್ಧರಿಸುವ ಸಾಧ್ಯತೆಯಿದೆ. ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದತ್ತ ಎಲ್ಲರ ಚಿತ್ರ ಇದೆ. ಇದನ್ನೂ ಓದಿ: ಮೈಸೂರು ದಸರಾ 2024: ಜಂಬೂಸವಾರಿ ಆನೆಗಳ ಪಟ್ಟಿ ರಿಲೀಸ್ – ಈ ಬಾರಿಯೂ ಅಭಿಮನ್ಯು ʻಕ್ಯಾಪ್ಟನ್ʼ
Advertisement
Advertisement
ಐದು ದಿನಗಳ ಹಿಂದೆಯಷ್ಟೇ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ , ನಿಂಗಾ (ಜವರ) ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿದೆ.
Advertisement
ದೂರುದಾರರ ಪರವಾಗಿ ವಕೀಲರಾದ ಲಕ್ಷ್ಮಿ ಐಯ್ಯಂಗಾರ್ ಅವರು ವಾದ ಮಂಡಿಸಿದ್ದರು. ಮುಡಾ ಹಗರಣದ ವಿಚಾರದಲ್ಲಿ ತಕ್ಷಣಕ್ಕೆ ಅಭಿಯೋಜನೆಯ ಅಗತ್ಯ ಇಲ್ಲ. ಅದಿಲ್ಲದೆಯೇ ಪ್ರಕರಣವನ್ನ ವಿಚಾರಣೆಗೊಳಪಡಿಸಬಹುದು ಎಂದು ವಾದ ಮಂಡಿಸಿ, ಅಯ್ಯಪ್ಪ ಮತ್ತು ಮಂಜು ಸುರಾನಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದರು. ಇದನ್ನೂ ಓದಿ: Mysuru | ಶುರುವಾಯ್ತು ಹೊಸ ವಿವಾದ – ರಾಜ್ಯ ಸರ್ಕಾರ & ರಾಜಮನೆತನದ ನಡುವೆ ಜಟಾಪಟಿ
Advertisement
ಪ್ರಕರಣದ ಬೆಳವಣಿಗೆ ಏನು?
• ಮುಡಾ ಅಕ್ರಮ ಸಂಬಂಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕಳೆದ ವಾರ ಅರ್ಜಿ ಸಲ್ಲಿಕೆಯಾಗಿತ್ತು.
• ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರಿಂದ ಖಾಸಗಿ ದೂರು ಸಲ್ಲಿಕೆಯಾಗಿತ್ತು.
• ಈ ಅರ್ಜಿಯನ್ನು ವಿಚಾರಣೆಗೆ ಆಂಗೀಕರಿಸಬೇಕೇ ಎಂಬ ಬಗ್ಗೆ ಇಂದು (ಆ.13) ಕೋರ್ಟ್ ಆದೇಶ ನೀಡಲಿದೆ.
• ಕೋರ್ಟ್ ವಿಚಾರಣೆಗೆ ಅಂಗೀಕರಿಸಿದರೆ ಸಿದ್ದರಾಮಯ್ಯಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಐಿದೆ
• ಕೋರ್ಟ್ ಆದೇಶ ಗಮನಿಸಿ ಸಿದ್ದು ವಿರುದ್ಧ ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
* ಈಗಾಗಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿರುವ ಅಬ್ರಹಾಂ ಕರೆಸಿ ರಾಜ್ಯಪಾಲರು ಮಾಹಿತಿ ಸಹ ಪಡೆದುಕೊಂಡಿದ್ದಾರೆ.