ನವದೆಹಲಿ: ಸರ್ಕಾರಿ ನೌಕರರ ಬಳಿಕ ಈಗ ಖಾಸಗಿ ಸಂಸ್ಥೆಗಳ ನೌಕರರು ಮತ್ತು ಕಾರ್ಮಿಕರು ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಎಂದು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.
ಕೊರೊನಾ ಸೋಂಕಿನಿಂದ ಸ್ವಯಂ ರಕ್ಷಣೆಗಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ರೂಪಿಸಿರುವ ‘ಆರೋಗ್ಯ ಸೇತು’ ಆ್ಯಪ್ ಬಳಕೆ ಮಾಡುವಂತೆ ಸೂಚಿಸಿದೆ. ಲಾಕ್‍ಡೌನ್ ವಿನಾಯತಿಯಲ್ಲಿ ಕೈಗಾರಿಕೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಶೇ.33 ನಷ್ಟು ಸಿಬ್ಬಂದಿ ಕಾರ್ಯ ನಿರ್ವಹಿಸಬಹುದು ಎಂದು ಸೂಚಿಸಿದ ಬೆನ್ನಲ್ಲೇ ಈ ಮಹತ್ವದ ಆದೇಶವನ್ನು ಗೃಹ ಇಲಾಖೆ ನೀಡಿದೆ.
Advertisement
Advertisement
ಈ ಹಿಂದೆ ಸರ್ಕಾರಿ ನೌಕರರು ಆರೋಗ್ಯ ಸೇತು ಆ್ಯಪ್ ಅನ್ನು ತಮ್ಮ ಮೊಬೈಲಿಗೆ ಡೌನ್‍ಲೋಡ್ ಮಾಡಿಕೊಳ್ಳಬೇಕು. ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಂಡವರಿಗಷ್ಟೇ ಕಚೇರಿಗಳಿಗೆ ಪ್ರವೇಶಾವಕಾಶ ಎಂದು ಹೇಳಿತ್ತು. ಈಗ ಇದೇ ರೀತಿಯ ನಿಯಮವನ್ನು ಖಾಸಗಿ ಸಂಸ್ಥೆಗಳ ಅಥವಾ ಕಂಪನಿಗಳ ನೌಕರರು ಮತ್ತು ಕಾರ್ಮಿಕರಿಗೂ ಸರ್ಕಾರ ವಿಸ್ತರಿಸಿದೆ. ಖಾಸಗಿ ಸಂಸ್ಥೆಗಳ ಅಥವಾ ಕಂಪನಿಗಳಲ್ಲಿ ಕೊರೊನಾದಿಂದ ಪಾರಾಗಲು ಈ ನಿರ್ದೇಶನಗಳನ್ನು ಸರ್ಕಾರ ನೀಡಿದೆ.
Advertisement
Advertisement
ಪ್ರತಿನಿತ್ಯ ಕರ್ತವ್ಯಕ್ಕೂ ಮುನ್ನ ಸಂಬಂಧಿಸಿದ ಸಿಬ್ಬಂದಿಯಲ್ಲಿ ಆರೋಗ್ಯ ಸೇತುವಿನ ಸ್ಟೇಟಸ್ ಅನ್ನು ತೋರಿಸಬೇಕು ಲೋ ರಿಸ್ಕ್ ಅಥವಾ ಸೇಫ್ ಅಂತ ಇದ್ದಲ್ಲಿ ಮಾತ್ರ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಹೇವಿ ರಿಸ್ಕ್ ಇದ್ದಲ್ಲಿ 14 ದಿನಗಳ ಕ್ವಾರಂಟೈನ್ ನಲ್ಲಿರುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ಕಳೆದ ಆದೇಶದಲ್ಲಿ ಕಚೇರಿಯಲ್ಲಿ ಕೊರೊನಾ ಸೋಂಕು ಪೀಡಿತರು ಇದ್ದಾರೆಯೋ ಇಲ್ಲವೋ ಎಂಬುದನ್ನು ಪತ್ತೆಹಚ್ಚಲು ಪೂಲ್ ಟೆಸ್ಟ್ ನಡೆಸಲು ನಿರ್ದೇಶನ ನೀಡಿತ್ತು.