ಬೆಂಗಳೂರು: ಖಾಸಗಿ ಬಸ್ (Private Bus) ಗಳು ತಮ್ಮ ಹಳೆ ಚಾಳಿಯನ್ನ ಮತ್ತೆ ಮುಂದುವರಿಸಿವೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫ್ಲೈಟ್ ಟಿಕೆಟ್ (Flight Ticket) ದರಕ್ಕಿಂತಲೂ ಹೆಚ್ಚು ದರವನ್ನ ನಿಗದಿಪಡಿಸಿವೆ.
Advertisement
ದೀಪಾವಳಿ (Deepavali) ಹಬ್ಬಕ್ಕೆ ಖಾಸಗಿ ಬಸ್‍ಗಳು ತಮ್ಮ ಆಟಾಟೋಪ ಶುರುಮಾಡಿದ್ದು, ಲೂಟಿಕೋರ ಬಸ್‍ಗಳನ್ನ ಸೀಸ್ ಮಾಡಲು ಸಾರಿಗೆ ಇಲಾಖೆ ಮುಂದಾಗಿದೆ. ಇಂದಿನಿಂದ ದುಪ್ಪಟ್ಟು ಹಣ ಪೀಕುವ ಬಸ್‍ಗಳನ್ನ ಹಾಗೂ ಟ್ರಾವೆಲ್ ಏಜೆನ್ಸಿ (Travel Agency) ಗಳ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ: ಕೋರ್ಟ್ ನೋಟಿಸ್‌ಗೆ ಥಂಡಾ – ಕರೆ ಮಾಡಿ ಹೆಚ್ಚುವರಿ ಅಂಕ ನೀಡ್ತೀವಿ ಎಂದ ಪಿಯು ಬೋರ್ಡ್
Advertisement
Advertisement
ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಲ ಬಸ್‍ಗಳಲ್ಲಿ ಒಂದು ಸೀಟಿಗೆ ಬರೋಬ್ಬರಿ 5 ಸಾವಿರದಿಂದ, 6 ಸಾವಿರ ಹಣ ನಿಗದಿ ಮಾಡಲಾಗಿದೆ. ಫ್ಲೈಟ್ ಟಿಕೆಟ್ ದರ 4,849 ರೂ. ಇದೆ. ಬೆಂಗಳೂರಿನಿಂದ ಮಂಗಳೂರಿಗೆ 3 ಸಾವಿರದ 600 ರೂ. ಬಸ್ ಟಿಕೆಟ್ (Bus Ticket) ದರ ಇದ್ರೆ, ಫ್ಲೈಟ್ ಟಿಕೆಟ್ ದರ 3 ಸಾವಿರದ 700 ರೂ. ಇದೆ. ಇಷ್ಟೊಂದು ದುಬಾರಿ ಹಣ ಪೀಕುವ, ಖಾಸಗಿ ಬಸ್ ಮಾಲೀಕರ ಜೊತೆ ಒಂದು ಸುತ್ತಿನ ಮಾತುಕತೆಗೂ ಸಾರಿಗೆ ಇಲಾಖೆ ಮುಂದಾಗಿದೆ.
Advertisement
ಇಲಾಖೆಯ ಎಚ್ಚರಿಗೂ ಬಗ್ಗದಿದ್ರೆ, ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. 22 ರಂದು 4ನೇ ಶನಿವಾರ ಸೇರಿ, ದೀಪಾವಳಿಗೆ ನಿರಂತರ 5 ದಿನ ರಜೆಯಿದೆ. ಶುಕ್ರವಾರ ಸಂಜೆಯಿಂದಲೇ ಸಾಕಷ್ಟು ಜನ, ತಮ್ಮೂರುಗಳಿಗೆ ತೆರಳುತ್ತಾರೆ. ಖಾಸಗಿ ಬಸ್ ಗಳಿಗೆ ಇಂತಿಷ್ಟೆ ದರ ತೆಗೆದುಕೊಳ್ಳಬೇಕು ಎಂಬ ಒಪ್ಪಂದ ಸಾರಿಗೆ ಇಲಾಖೆಯೊಂದಿಗೆ ಆಗಿಲ್ಲ. ಇದೇ ಕಾರಣಕ್ಕೂ ಯದ್ವಾತದ್ವ ಟಿಕೆಟ್ ದರ ಏರಿಕೆ ಮಾಡ್ತಿದ್ದಾರೆ.