ಬೆಂಗಳೂರು: ಗಣೇಶ ಹಬ್ಬಕ್ಕೆಂದು ಊರಿಗೆ ಹೊರಟವರಿಗೆ ಶಾಕ್. ಖಾಸಗಿ ಬಸ್ ಟಿಕೆಟ್ ದರ ಬಲು ದುಬಾರಿಯಾಗಿವೆ. ಹಬ್ಬದ ಹೆಸರಲ್ಲಿ ‘ಖಾಸಗಿ’ ಲೂಟಿ ನಡೆಯುತ್ತಿದ್ದು, ಸಾರಿಗೆ ಸಚಿವರೇ, ಸಚಿವ ಶ್ರೀರಾಮುಲು ಅವರೇ ಈ ಲೂಟಿಗೆ ಬ್ರೇಕ್ ಯಾವಾಗ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.
Advertisement
ರಿಯಾಲಿಟಿ ಚೆಕ್:
ಖಾಸಗಿ ಬಸ್ ಗಳ ಲೂಟಿ ಸಂಬಂಧ ಪಬ್ಲಿಕ್ ಟಿವಿ ಮೊದಲಿಗೆ ರಿಯಾಲಿಟಿ ಚೆಕ್‍ಗೆ ಇಳಿದಿದ್ದು ಗಾಂಧಿನಗರದಲ್ಲಿ. ಟ್ರಾವೆಲ್ ಏಜೆನ್ಸಿ ಒಂದರಲ್ಲಿ ಧಾರವಾಡ, ಕಲಬುರಗಿಗೆ ಬಸ್ ಟಿಕೆಟ್ ಕೇಳಿದ ನಮ್ಮ ತಂಡ ಖಾಸಗಿ ಬಸ್ ಟಿಕೆಟ್ ರೇಟ್ ಕೇಳಿ ದಂಗಾಗಿ ಹೋಯ್ತು.
Advertisement
Advertisement
ಮೌರ್ಯ ಸರ್ಕಲ್‍ನಲ್ಲಿ ಪಬ್ಲಿಕ್ ಟಿವಿ ಮತ್ತೊಂದು ರಿಯಾಲಿಟಿ ಚೆಕ್ ನಡೆಸ್ತು. ಬೆಂಗಳೂರಿನಿಂದ ಉಡುಪಿ, ಮಂಗಳೂರಿಗೆ ಟಿಕೆಟ್ ಕೇಳಿದ್ರೆ 1 ಸಾವಿರಕ್ಕಿಂತ ಕಡಿಮೆ ಹೇಳೇ ಇಲ್ಲ. ಇನ್ನು ನವರಂಗ್‍ನ ಟ್ರಾವೆಲ್ಸ್ ಏಜೆನ್ಸಿ ಒಂದರಲ್ಲಿ ನಮ್ಮ ತಂಡ ಬೆಳಗಾವಿಗೆ ಖಾಸಗಿ ಬಸ್ ಟಿಕೆಟ್ ಕೇಳಿದಾಗ ಬೆಂಗಳೂರಿನಿಂದ ಬೆಳಗಾವಿಗೆ ಹೊರಟವರ ಬಳಿ ಖಾಸಗಿ ಬಸ್‍ಗಳ ಸುಲಿಗೆ ಹೇಗಿದೆ ಅನ್ನೋದು ಬಯಲಾಯ್ತು. ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್
Advertisement
ನವರಂಗ್‍ನಲ್ಲೇ ಮತ್ತೊಂದು ಟ್ರಾವೆಲ್ ಏಜೆನ್ಸಿಗೆ ಭೇಟಿ ನೀಡಿದಾಗ ಹುಬ್ಬಳ್ಳಿಗೆ ಬಸ್ ಟಿಕೆಟ್ ಕೇಳಿದ್ರೆ ಅಲ್ಲೂ ಅದೇ ಸುಲಿಗೆ ಮುಂದುವರಿದಿತ್ತು. ಹೀಗೆ ಹಬ್ಬಕ್ಕೆ ಖಾಸಗಿ ಸಾರಿಗೆ ಶಾಕ್ ನೀಡಿದ್ದು, ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಪ್ರಯಾಣ ದರ ಹೆಚ್ಚಳ ಮಾಡಿದೆ. ಇದನ್ನೂ ಓದಿ: ಒಗ್ಗಟ್ಟು ಇಲ್ಲದೆ 3 ಪಾಲಿಕೆಯಲ್ಲಿ ಸೋಲು – ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‍ಗೆ ಡಿಕೆಶಿ ಚಾರ್ಜ್‍ಶೀಟ್