ಗಾಂಧೀನಗರ: ಖಾಸಗಿ ಬಸ್‌ವೊಂದು ಕಂದಕಕ್ಕೆ ಉರುಳಿದ ಪರಿಣಾಮ 7 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 15 ಜನರು ಸ್ಥಿತಿ ಗಂಭೀರವಾಗಿರುವ ಘಟನೆ ನಾಸಿಕ್-ಗುಜರಾತ್ ಹೆದ್ದಾರಿಯಲ್ಲಿ (Nasik -Gujarat Highway) ನಡೆದಿದೆ.
ಈ ಕುರಿತು ಅಧಿಕಾರಿಯೊಬ್ಬರು ಮಾತನಾಡಿ, ಭಾನುವಾರ ಬೆಳಗ್ಗೆ 5:30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ನಾಸಿಕ್‌ನಿಂದ ಗುಜರಾತ್‌ಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ನಾಸಿಕ್-ಗುಜರಾತ್ ಹೆದ್ದಾರಿಯ ಸಪುತಾರಾ ಘಾಟ್‌ನಲ್ಲಿ 200 ಅಡಿ ಆಳದ ಕಂದಕ್ಕೆ ಬಸ್ ಉರುಳಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಇನ್ನೊಂದು ಲಾರಿ ಡಿಕ್ಕಿ – ಚಾಲಕ ಸಾವು
Advertisement
Advertisement
ಇನ್ನೂ ಪ್ರಾಥಮಿಕ ವರದಿಗಳ ಪ್ರಕಾರ, ಮೃತಪಟ್ಟವರು ಹಾಗೂ ಗಾಯಗೊಂಡ ಪ್ರಯಾಣಿಕರು ಮಧ್ಯಪ್ರದೇಶದವರು ಎಂದು ತಿಳಿಯಲಾಗಿದ್ದು, ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಅಪಘಾತದ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು – ಇಂದಿನ ಎಲ್ಲ ಕಾರ್ಯಕ್ರಮಗಳು ರದ್ದು