ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರು 30.6 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದಾರೆ. ರಣ್‌ವೀರ್ ಸಿಂಗ್ (Ranveer Singh), ಅಕ್ಷಯ್ ಕುಮಾರ್ ಮನೆ ಪಕ್ಕದಲ್ಲೇ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ‘ಸಲಾರ್’ ನಟ ಪೃಥ್ವಿರಾಜ್ ಖರೀದಿಸಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ಈಗ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಮನೆ ಪಕ್ಕ ಮನೆಯನ್ನು ಖರೀದಿಸಿದ್ದಾರೆ. ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿ ಐಷಾರಾಮಿ ಡುಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿ ಮಾಡಿರುವ ಪೃಥ್ವಿರಾಜ್ ಸುಕುಮಾರನ್ ಈ ಮನೆಗೆ ಬರೋಬ್ಬರಿ 30.6 ಕೋಟಿ ರೂ. ಹಣವನ್ನು ನೀಡಿದ್ದಾರೆ.
ಅಂದಾಜು 2,970 ಚದರ ಅಡಿ ವಿಸ್ತೀರ್ಣದಲ್ಲಿ ಈ ಅಪಾರ್ಟ್‌ಮೆಂಟ್ ಹೊಂದಿದೆ. 40 ಚದರ ಮೀಟರ ವಿಸ್ತೀರ್ಣದಲ್ಲಿ ನಾಲ್ಕು ಕಾರು ಪಾರ್ಕಿಂಗ್ ಸ್ಥಳಗಳನ್ನು ನಿರ್ಮಾಣ ಮಾಡಲಾಗಿದೆ. ಸ್ಟ್ಯಾಂಪ್ ಡ್ಯೂಟಿಗೆ 1.84 ಕೋಟಿ ಖರ್ಚಾಗಿದೆ. ಸೆ.12ರಂದು ಈ ಮನೆಯನ್ನು ಅವರು ನೊಂದಣಿ ಮಾಡಿಸಿದ್ದಾರೆ. ಇದನ್ನೂ ಓದಿ:‘ಯುಐ’ ಸಿನಿಮಾ ಸೈಕಾಲಜಿಕಲ್ ಕಲ್ಕಿ ಎಂದು ಬಣ್ಣಿಸಿದ ಉಪೇಂದ್ರ
ಅವರು ಮನೆ ಖರೀದಿಸಿರುವ ಏರಿಯಾದಲ್ಲಿ ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್ ದಂಪತಿ, ತೃಪ್ತಿ ದಿಮ್ರಿ, ಅಥಿಯಾ ಶೆಟ್ಟಿ ಸೇರಿದಂತೆ ಅನೇಕರು ವಾಸ ಮಾಡುತ್ತಿದ್ದಾರೆ.