ಸಿಡ್ನಿ: ಆಸ್ಟೇಲಿಯಾ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೆ 6 ದಿನಗಳು ಬಾಕಿ ಇರುವ ಸಮಯದಲ್ಲೇ ಟೀಂ ಇಂಡಿಯಾಗೆ ಮೊದಲ ಅಘಾತ ಎದುರಾಗಿದ್ದು, ತಂಡ ಯುವ ಬ್ಯಾಟ್ಸ್‍ಮನ್ ಪೃಥ್ವಿ ಶಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಟೀಂ ಇಂಡಿಯಾ ಆಸೀಸ್ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದ್ದು, ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಪೃಥ್ವಿ ಶಾ ಕ್ಯಾಚ್ ಪಡೆಯುವ ಸಂರ್ಭದಲ್ಲಿ ಗಾಯಗೊಂಡಿದ್ದು, ಅಭ್ಯಾಸ ಪಂದ್ಯದ ಮೂರನೇ ದಿನದಾಟದ ವೇಳೆ ಆಸೀಸ್ ಆರಂಭಿಕ ಬ್ಯಾಟ್ಸ್‍ಮನ್ ಮ್ಯಾಕ್ಸ್ ಬ್ರಯಾಂಟ್ ಸಿಡಿಸಿದ ಚೆಂಡನ್ನು ಕ್ಯಾಚ್ ಪಡೆಯಲು ಪೃಥ್ವಿ ಶಾ ಪ್ರಯತ್ನಿಸಿದರು. ಆದರೆ ಈ ವೇಳೆ ಪೃಥ್ವಿ ಅವರ ಬಲಗಾಲಿನ ಪಾದ 90 ಡಿಗ್ರಿ ಸ್ಥಿತಿಯಲ್ಲಿ ತಿರುಗಿ ನೆಲಕ್ಕೆ ಬಿದ್ದಿದ್ದಾರೆ. ಇದರಿಂದ ಹೆಚ್ಚು ನೋವು ಅನುಭವಿಸಿದ ಪೃಥ್ವಿ ಶಾ ರನ್ನು ಟೀಂ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಹೊತ್ತು ಮೈದಾನದಿಂದ ಹೊತ್ತು ಸಾಗಿಸಿದರು.
Advertisement
Advertisement
ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಆಡಿಲೇಡ್‍ನಲ್ಲಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ಯುವ ಆಟಗಾರ ಪೃಥ್ವಿ ಶಾ ಅಲಭ್ಯರಾಗಿದ್ದಾರೆ ಎಂದು ಬರೆದುಕೊಂಡಿದೆ. ಅಲ್ಲದೇ ಪೃಥ್ವಿ ಶಾ ಅವರ ಕಾಲಿಗೆ ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
Advertisement
ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಪೃಥ್ವಿ ಶಾ, ಆಸೀಸ್ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಇನ್ನಿಂಗ್ಸ್‍ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಸದ್ಯ ಪೃಥ್ವಿ ಶಾರ ಗೈರು ಹಾಜರಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿಗೆ ತಲೆನೋವು ಉಂಟಾಗಿದ್ದು, ಮೊದಲ ಟೆಸ್ಟ್ ಆರಂಭಿಕ ಜೋಡಿಯಾಗಿ ಮುರಳಿ ವಿಜಯ್ ಅಥವಾ ಕೆಎಲ್ ರಾಹುಲ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
Advertisement
2 ಟೆಸ್ಟ್ ಪಂದ್ಯದ ಮೂರು ಇನ್ನಿಂಗ್ಸ್ ಆಡಿ 237 ರನ್ ಹೊಡೆದಿದರುವ ಪೃಥ್ವಿ ಶಾ ಒಂದು ಶತಕ, ಒಂದು ಅರ್ಧಶತಕ ಹೊಡೆದಿದ್ದಾರೆ.
Brilliant start with the bat for Prithvi Shaw. Brings up his half century in 52 balls. Has looked positive through this innings. #TeamIndia 90/1. C Pujara 23* #CAXIvIND pic.twitter.com/xJkqOG2L1l
— BCCI (@BCCI) November 29, 2018
UPDATE – Prithvi Shaw ruled out of First Test against Australia in Adelaide. https://t.co/bOB8e6Ijrv
— BCCI (@BCCI) November 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv