ಮುಂಬೈ: ಕಳೆದ 8 ತಿಂಗಳ ಹಿಂದೆ ಬಿಸಿಸಿಐನಿಂದ ನಿಷೇಧಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತೆ ಕ್ರಿಕೆಟ್‍ಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆ ಇದ್ದು, ಮುಂಬೈ ತಂಡದ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಡೋಪಿಂಗ್ ಪರೀಕ್ಷೆಯಲ್ಲಿ ಪೃಥ್ವಿ ಶಾ ಮಾದಕ ದ್ರವ್ಯ ಸೇವನೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಬಿಸಿಸಿಐ ನಿಷೇಧ ಹೇರಿ ಆದೇಶ ನೀಡಿತ್ತು. ನ.15ಕ್ಕೆ ಪೃಥ್ವಿ ಶಾ ನಿಷೇಧ ಅಂತ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ಪಂದ್ಯಗಳಲ್ಲಿ ಮುಂಬೈ ತಂಡವನ್ನು ಪೃಥ್ವಿ ಶಾ ಪ್ರತಿನಿಧಿಸುವ ಸಾಧ್ಯತೆ ಇದೆ. ಮುಂಬೈ ಆಯ್ಕೆ ಸಮಿತಿಯ ತಾತ್ಕಾಲಿಕ ಅಧ್ಯಕ್ಷ ಮಿಲಿಂದ್ ಈ ಕುರಿತು ಮಾಹಿತಿ ನೀಡಿದ್ದು, ಪೃಥ್ವಿ ಶಾ ಆಯ್ಕೆಯನ್ನು ಪರಿಗಣಿಸಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
Advertisement
Advertisement
ಸದ್ಯ ಮುಂಬೈ ತಂಡ ಸೈಯದ್ ಅಲಿ ಟ್ರೋಫಿಯ ಮೊದಲ 3 ಪಂದ್ಯಗಳಿಗೆ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಮುಂಬೈ ತಂಡದ ಪ್ರಮುಖ ಯುವ ಆಟಗಾರರಾದ ಶ್ರೇಯರ್ ಅಯ್ಯರ್, ಶಾರ್ದೂಲ್ ಠಾಕೂರ್, ಶಿವಂ ದುಬೆ ಅವರು ಬಾಂಗ್ಲಾ ವಿರುದ್ಧದ ಟಿ20 ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಶಾ ಮೇಲಿನ ನಿಷೇಧ ತೆರವಾಗುವ ವೇಳೆಗೆ ಮುಂಬೈ ಟೂರ್ನಿಯಲ್ಲಿ ತನ್ನ 7 ಪಂದ್ಯಗಳನ್ನು ಆಡಲಿದೆ.
Advertisement
19 ವರ್ಷದ ಪೃಥ್ವಿ ಶಾ ಟೀಂ ಇಂಡಿಯಾ ಪರ 2018 ರಲ್ಲಿ 2 ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಈ ಹಿಂದೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಪರಿಣಾಮ ಶಾ ಮಾರ್ಚ್ 16 ರಿಂದ ನವೆಂಬರ್ 15ರ ವರೆಗೂ ಅಮಾನತು ಎದುರಿಸಿದ್ದರು. ಪೃಥ್ವಿ ಶಾ ಮುಂಬೈ ಕ್ರಿಕೆಟ್ ಅಸೋಸಿಯೆಷನ್ ಅಡಿ ನೋಂದಣಿಯಾಗಿದ್ದಾರೆ. ಶಾ ತನ್ನ ಅಜಾಗರೂಕತೆಯಿಂದ ನಿಷೇಧಿತ ವಸ್ತುವನ್ನು ಸೇವಿಸಿದ್ದರು. ಇದನ್ನು ಸಾಮಾನ್ಯ ಕೆಮ್ಮು ಸಿರಪ್‍ಗಳಲ್ಲಿ ಕಾಣಬಹುದಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.