– ಕೊಹ್ಲಿಯನ್ನು ಅನುಕರಿಸಿದ ಪೃಥ್ವಿ ಶಾ
ಗುವಾಹತಿ: ಬಿಸಿಸಿಐ ನಿಂದ ನಿಷೇಧಕ್ಕೆ ಒಳಗಾಗಿ ಕಳೆದ 8 ತಿಂಗಳಿನಿಂದ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಯುವ ಆಟಗಾರ ಪೃಥ್ವಿ ಶಾ, ಸೈಯದ್ ಮಷ್ತಾಕ್ ಅಲಿ ಟ್ರೋಫಿಯಲ್ಲಿ ಕಮ್ ಬ್ಯಾಕ್ ಮಾಡಿದ್ದು, ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಭಾಗವಾಗಿ ಭಾನುವಾರ ಅಸ್ಸಾಂ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಪರ ಶಾ ಬ್ಯಾಟಿಂಗ್ ನಡೆಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ತಂಡದ ಪರ ಬ್ಯಾಟಿಂಗ್ ಇಳಿದ ಪೃಥ್ವಿ ಶಾ, ಅದಿತ್ಯ ತಾರೆ ಇನ್ನಿಂಗ್ಸ್ ಆರಂಭಿಸಿದ್ದರು.
Advertisement
Welcome back! He is making a comeback today and @PrithviShaw makes it a memorable one with a fine-half century for Mumbai against Assam in @Paytm #MushtaqAliT20. pic.twitter.com/hiBfiElhed
— BCCI Domestic (@BCCIdomestic) November 17, 2019
Advertisement
20 ವರ್ಷದ ಪೃಥ್ವಿ ಶಾ ಪಂದ್ಯದಲ್ಲಿ 39 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 63 ರನ್ ಗಳಿಸಿದರೆ, ಆದಿತ್ಯ ತಾರೆ 48 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ನೆರವಿನಿಂದ 82 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ 138 ರನ್ ಗಳ ಜೊತೆಯಾಟವನ್ನು ನೀಡಿತ್ತು. ನಿಷೇಧಿತ ಔಷಧಿ ಸೇವಿಸಿದ್ದ ಪೃಥ್ವಿ ಶಾ ಬಿಸಿಸಿಐನಿಂದ 8 ತಿಂಗಳ ಕಾಲ ನಿಷೇಧ ಮಾಡಿದ ಅವರಿಗೆ ಇದು ಕಮ್‍ಬ್ಯಾಕ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಮುಂಬೈ 83 ರನ್ ಅಂತರದಿಂದ ಗೆಲುವು ಪಡೆದಿದ್ದು, ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಸಿಡಿಸಿತ್ತು. ಆ ಬಳಿಕ ಗುರಿ ಬೆನ್ನತ್ತಿದ್ದ ಅಸ್ಸಾಂ 8 ವಿಕೆಟ್ ನಷ್ಟಕ್ಕೆ 123 ಗಳನ್ನು ಮಾತ್ರ ಗಳಿಸಿ ಸೋಲುಂಡಿತು. ಇದರೊಂದಿಗೆ ಮುಂಬೈ ಸರಣಿಯಲ್ಲಿ ಮತ್ತೊಂದು ಗೆಲುವು ಪಡೆಯಿತು. ಅರ್ಧ ಶತಕ ಗಳಿಸಿದ ಪೃಥ್ವಿ ಶಾ ಟೀಂ ಇಂಡಿಯಾ ನಾಯಕ ಕೊಹ್ಲಿರಂತೆ ಅನುಕರಣೆ ಮಾಡಿ ಬ್ಯಾಟ್ ಮಾತನಾಡುತ್ತಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
Advertisement
ಅಂದಹಾಗೇ ಶಾ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಗಳಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಪೃಥ್ವಿ ಶಾ ರಾಜ್ ಕೋಟ್‍ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 134 ರನ್ ಸಿಡಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟೂರ್ನಿಯಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿದ್ದರು. ಆ ಬಳಿಕ ಐಪಿಎಲ್‍ನಲ್ಲಿ ಡೆಲ್ಲಿ ತಂಡದ ಪರ ಆಡಿ 16 ಪಂದ್ಯಗಳಲ್ಲಿ 353 ರನ್ ಗಳಿಸಿದ್ದರು.
Advertisement
https://twitter.com/shortarmjab_18/status/1196037686542290946