ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.
ಶುಕ್ರವಾರದಂದು ಛಾಪಾಕಾಗದ ವಂಚಕ ಅಬ್ದುಲ್ ಕರೀಂ ತೆಲಗಿಗೆ ಸಿಗ್ತಿರೋ ಐಶಾರಾಮಿ ಟ್ರೀಟ್‍ಮೆಂಟ್ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಎಕ್ಸ್ ಕ್ಲೂಸಿವ್ ವಿಡಿಯೋ ಪ್ರಸಾರವಾಗಿತ್ತು. ಇದೀಗ ಇದಕ್ಕಿಂತಲೂ ಭಯಾನಕವಾದ ಮತ್ತೊಂದು ದೃಶ್ಯ ಲಭ್ಯವಾಗಿದೆ. ಜೈಲು ಅಕ್ರಮಗಳ ಬಗ್ಗೆ ಉಪ ನಿರೀಕ್ಷಕಿ ರೂಪಾ ವರದಿ ನೀಡಿದ ನಂತರ ಬಗೆದಷ್ಟೂ ಪರಪ್ಪನ ಅಗ್ರಹಾರದ ಜೈಲಿನ ಕರ್ಮಕಾಂಡ ಬಯಲಾಗ್ತಿದೆ.
ಇದನ್ನೂ ಓದಿ:ಎಲ್‍ಇಡಿ ಟಿವಿ,ಕುಷನ್ ಬೆಡ್, ಮಿನರಲ್ ವಾಟರ್- ಪರಪ್ಪನ ಅಗ್ರಹಾರದಲ್ಲಿ ವಂಚಕ ತೆಲಗಿಗೆ ರಾಜಮರ್ಯಾದೆ
ಪರಪ್ಪನ ಅಗ್ರಹಾರ ಕೇವಲ ಸೆಂಟ್ರಲ್ ಜೈಲಲ್ಲ, ಜೂಜು ಅಡೆಯೂ ಹೌದು. ಇಲ್ಲಿ ರಾಜಾರೊಷವಾಗಿಯೇ ಇಸ್ಪೀಟ್ ಆಡಲಾಗ್ತಿದೆ. ಜೈಲು ವಾರ್ಡನ್ ಮುಂದೆಯೇ ಇಸ್ಪೀಟ್ ಆಟ ಖುಲ್ಲಂಖುಲ್ಲಾ ನಡೆಯುತ್ತಿದೆ. ಬಾಜಿ ಕಟ್ಟಿ ಹೇಗೆ ಇಸ್ಪೀಟ್ ಆಟ ಆಡ್ತಾರೆ ಅನ್ನೋದನ್ನ ಈ ದೃಶ್ಯಾವಳಿಯಲ್ಲಿ ನೋಡಬಹುದು.
ಇಸ್ಪೀಟ್ ಅಷ್ಟೇ ಅಲ್ಲ ಇಲ್ಲಿ ಕೈದಿಗಳು ಮದ್ಯಪಾನ ಕೂಡ ಮಾಡ್ತಾರೆ. ಸಜಾ ಬಂಧಿಗಳು ಮದ್ಯಪಾನ ಮಾಡ್ತಿರೋದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ
ಇದನ್ನೂ ಓದಿ:ಶಶಿಕಲಾಗೆ ಕಿಚನ್ ಅಲ್ಲದೇ ಜೈಲಿನಲ್ಲಿದೆ ವಿಶೇಷ ವಿಸಿಟಿಂಗ್ ರೂಂ!
ಇದನ್ನೂ ಓದಿ: ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ
https://www.youtube.com/watch?v=fSPNd2X6E-4&feature=youtu.be
https://www.youtube.com/watch?v=ZN8zHv5J7aU&feature=youtu.be