ಸೆಂಟ್ರಲ್‌ ಜೈಲಿನಲ್ಲೇ ಕೈದಿಗಳ ಎಣ್ಣೆ ಪಾರ್ಟಿ – ನಟೋರಿಯಸ್‌ ಕೈದಿಗಳ ವರ್ಗಾವಣೆ ಬೆನ್ನಲ್ಲೇ ವೀಡಿಯೋ ವೈರಲ್‌

Public TV
1 Min Read
kalaburagi central jail mobile

– ರಾಶಿ ರಾಶಿ ಬೀಡಿ, ಸಿಗರೇಟ್‌ ಪ್ಯಾಕ್, ಸ್ಮಾರ್ಟ್‌ಫೋನ್‌ಗಳು ಪತ್ತೆ
– ಕಲಬುರಗಿ ಜೈಲಿನ ಕರ್ಮಕಾಂಡ ಮತ್ತಷ್ಟು ಬಯಲು

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ (Kalaburagi Central Jail) ಕೈದಿಗಳಿಗೆ ರಾಜಾತಿಥ್ಯವೇ ನಡೆಯುತ್ತಿದೆ. ಜೈಲಿನಲ್ಲೇ ಕೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಜೈಲಿನ ಕರ್ಮಕಾಂಡ ಮತ್ತಷ್ಟು ಬಯಲಾಗಿದೆ.

ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿ ಆರು ನಟೋರಿಯಸ್‌ ಕೈದಿಗಳ ಶಿಫ್ಟ್ ಬೆನ್ನಲ್ಲೇ ಜೈಲಿನಲ್ಲಿನ ಮತ್ತಷ್ಟು ವೀಡಿಯೋ ವೈರಲ್‌ ಆಗಿವೆ. 2 ತಿಂಗಳ ಹಿಂದಿನ ವೀಡಿಯೋ ಇದು ಎನ್ನಲಾಗಿದೆ. ಇದನ್ನೂ ಓದಿ: ಅಪ್ಪ ಬೈಕ್ ಕೊಡಿಸಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಯುವಕ!

kalaburagi central jail prisoners party

ರಾಶಿ ರಾಶಿ ಸ್ಮಾರ್ಟ್‌ಫೋನ್‌ಗಳು, ಬೀಡಿ-ಸಿಗರೇಟ್ ಪ್ಯಾಕೇಟ್‌ಗಳನ್ನ ಒಂದೇಡೆ ಹಾಕಿರುವ ವೀಡಿಯೋ ಕೂಡ ವೈರಲ್‌ ಆಗಿದೆ. ಜೈಲ್ ಅಧೀಕ್ಷಕಿಯನ್ನ ಟಾರ್ಗೆಟ್ ಮಾಡಿಕೊಂಡು ವೀಡಿಯೋ ರಿಲೀಸ್ ಮಾಡಲಾಗಿದೆ. ಜೈಲು ಮುಖ್ಯ ಅಧೀಕ್ಷಕಿಗೆ ಹಣ ನೀಡುವ ಕುರಿತು ಕೈದಿಗಳು ಮಾತುಕತೆ ನಡೆಸಿರುವುದು ಇದರಿಂದ ಬಹಿರಂಗಗೊಂಡಿದೆ.

ಅ.14 ರಂದು ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅ.16 ರಿಂದ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಜೈಲ್ ಸುಪರಿಂಟೆಂಡೆಂಟ್‌ ಮುಂದಾಗಿದ್ದರು. ಇದನ್ನೂ ಓದಿ: ತರಗತಿಗೆ ಪದೇ ಪದೇ ಗೈರು – ಬುದ್ಧಿ ಹೇಳಿದ್ದಕ್ಕೆ ಪ್ರಿನ್ಸಿಪಾಲರ ತಲೆಗೆ ಗುಂಡಿಕ್ಕಿ ಹತ್ಯೆಗೈದ ವಿದ್ಯಾರ್ಥಿ!

ಅ.16 ದಿನಾಂಕ ಕಾಣುವಂತೆ ‌ದಿನಪತ್ರಿಕೆಯಲ್ಲಿ ದಿನಾಂಕ ತೋರಿಸಿ ಹಣದ ಬಗ್ಗೆ ಮಾತುಕತೆ ನಡೆಸಲಾಗಿದೆ. ಅ.29 ರಂದು ರಾಶಿ ರಾಶಿ ಗುಟ್ಕಾ, ಬೀಡಿ, ಸಿಗರೇಟ್ ಗುಡ್ಡೆ ಹಾಕಿ ವೀಡಿಯೋ ಮಾಡಲಾಗಿದೆ. ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದ ಅಧೀಕ್ಷಕಿ ಅನೀತಾರನ್ನ ಟಾರ್ಗೆಟ್‌ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಅ.16, 17 ರಂದು ಕಾರಗೃಹ ಇಲಾಖೆ ಎಸ್ಪಿ ಯಶೋಧಾ ತನಿಖೆಗೆ ಆಗಮಿಸಿದ್ದರು. ಎರಡೂ ದಿನ ಜೈಲಿನೊಳಗಡೆ ಇದ್ದು ತನಿಖೆ ಮಾಡಿದ್ದರು. ಅ ವೇಳೆ ವೀಡಿಯೋ ಹೇಗಾಯ್ತು ಎನ್ನುವ ಬಗ್ಗೆ ಅನುಮಾನ ಮೂಡಿದೆ.

Share This Article