ಕಲಬುರಗಿ: ಕೇಂದ್ರ ಕಾರಾಗೃಹದಿಂದ (Kalaburagi Jail) ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಎತ್ತಂಗಡಿಗೆ ಶಿಫಾರಸು ಬೆನ್ನಲ್ಲೇ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ಇಸ್ಪೀಟ್, ಸಿಗರೇಟ್ ಹಾಗೂ ಮದ್ಯ ನೀಡಿ ಉದ್ದೇಶಪೂರ್ವಕವಾಗಿ ವೀಡಿಯೋ ಹರಿಬಿಡಲಾಗಿದ್ದು, ಜೈಲಿನ ಒಳಗಡೆ ಜೂಜಾಟದ ವೀಡಿಯೋ ಇದೀಗ ಸಾಮಾಜಿಕ ಕಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಈ ವೀಡಿಯೋ ಹಿಂದೆ ಆರ್.ಡಿ.ಪಾಟೀಲ್ ಕೈವಾಡವಿದೆ ಎಂದು ಜೈಲಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಕೈದಿಗಳ ಕೈಗೆ ಇದೆಲ್ಲ ಸೇರುವುದರ ಹಿಂದೆ ಕೆಲ ಸಿಬ್ಬಂದಿ ಕೈವಾಡವಿರುವ ಬಗ್ಗೆ ಸಹ ಜೈಲು ಅಧೀಕ್ಷಕಿ ಡಾ.ಅನೀತಾ ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 8 ಎಕರೆ ಭೂಮಿ ಕಬಳಿಕೆ; ನೆಲಮಂಗಲ ಹೆಡ್‌ಕಾನ್‌ಸ್ಟೆಬಲ್ ಅಮಾನತು
ಈ ಬಗ್ಗೆ ‘ಪಬ್ಲಿಕ್ ಟಿವಿ’ ವರದಿ ಬಳಿಕ ಇಬ್ಬರು ಎಸಿಪಿಗಳ ನೇತೃತ್ವದಲ್ಲಿ ಜೈಲಿನಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಆದರೆ, ದಾಳಿ ಬೆನ್ನಲ್ಲೇ ಮೊಬೈಲ್‌ಗಳನ್ನು ಬಚ್ಚಿಟ್ಟಿರುವುದಕ್ಕಾಗಿ ಬರಿಗೈಲಿ ಪೊಲೀಸರು ವಾಪಸಾಗಿದ್ದಾರೆ.

