ಧಾರವಾಡ/ಹುಬ್ಬಳ್ಳಿ: ವಿಚಾರಣಾಧೀನ ಖೈದಿಯೊಬ್ಬ ನ್ಯಾಯಾಲಯಕ್ಕೆ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ತಗೆದುಕೊಂಡು ಬಂದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಹೊಸ ಕೋರ್ಟ್ ನಲ್ಲಿ ನಡೆದಿದೆ.
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾನಗಲ್ ಮೂಲದ ನಾಗರಾಜ್ ಎಂಬಾತನೇ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣವನ್ನು ಕಿಸೆಯಲ್ಲಿ ಇಟ್ಟುಕೊಂಡು ನ್ಯಾಯಾಲಯಕ್ಕೆ ಆಗಮಿಸಿದ ಆರೋಪಿ. ಹಾವೇರಿ ಟೌನ್ ಠಾಣೆ ಪೊಲೀಸರು ಮನೆಗಳ್ಳತನ ಪ್ರಕರಣದಲ್ಲಿ ಈತನನ್ನು ಬಂಧಿಸಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಕಳುಹಿಸಿದ್ದರು. ಇಂದು ಬಳ್ಳಾರಿ ಜೈಲಿನಿಂದ ಹುಬ್ಬಳ್ಳಿ ಕೋರ್ಟ್ ಗೆ ವಿಚಾರಣೆಗಾಗಿ ಕರೆ ತರಲಾಗಿತ್ತು. ಆದ್ರೆ ಕೋರ್ಟ್ ಆವರಣ ಪ್ರವೇಶಕ್ಕೂ ಮುನ್ನ ಭದ್ರತಾ ಸಿಬ್ಬಂದಿ ಈತನನ್ನು ತಪಾಸಣೆ ಮಾಡಿದಾಗ ಈತನ ಬಳಿ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಪತ್ತೆಯಾಗಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
Advertisement
Advertisement
ಜೈಲಿನಲ್ಲಿ ಈತನಿಗೆ ಖಾರದ ಪುಡಿ ಹಾಗೂ ಬೆಂಕಿ ಪೊಟ್ಟಣ ಕೊಟ್ಟವರು ಯಾರು ಎಂಬ ಅನುಮಾನ ಕಾಡುತ್ತಿದೆ. ಅದರ ಜೊತೆಗೆ ಈ ವಸ್ತುಗಳನ್ನು ನ್ಯಾಯಾಲಯಕ್ಕೆ ಏಕೆ ತಗೆದುಕೊಂಡ ಬಂದ. ಈತನ ಉದ್ದೇಶ ಏನಾಗಿತ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Advertisement
ಈತನ ಬಳಿ ಇಂತಹ ವಸ್ತುಗಳು ಪತ್ತೆಯಾಗಿದ್ದು ಬಳ್ಳಾರಿ ಜೈಲಿನ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಆದ್ರೆ ಕೋರ್ಟ್ ನ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಆಗಬಹುದಾದ ಅನಾಹುತ ತಪ್ಪಿದಂತಾಗಿದೆ.