Connect with us

Districts

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಅನುಮಾನಾಸ್ಪದ ಸಾವು!

Published

on

ಕಲಬುರಗಿ: ಜಿಲ್ಲೆಯ ಹೊರವಲಯದ ಕೇಂದ್ರಿಯ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಜೈಲಿನಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

ಜಿ. ಮಹೇಶ್(35) ಮೃತಪಟ್ಟ ಕೈದಿ. ಗುರುವಾರ ತಡರಾತ್ರಿ ಜೈಲಿನಲ್ಲಿ ಊಟ ಮುಗಿಸಿ ಐಪಿಎಲ್ ಮ್ಯಾಚ್ ನೋಡಿ ಮಹೇಶ್ ಮಲಗಿದ್ದನು. ಆದ್ರೆ ಬೆಳಗಾಗುವ ಹೊತ್ತಿಗೆ ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸದ್ಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೊದಲು ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಮಹೇಶ್, ಇತ್ತೀಚೆಗೆ ಕಲಬುರಗಿ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದನು. ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅಪರಾಧಿ 1999ರಿಂದ 2019ರ ವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದನು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕಲಬುರಗಿ ಕಾರಾಗೃಹಕ್ಕೆ ಆತನನ್ನು ವರ್ಗಾವಣೆ ಮಾಡಲಾಗಿತ್ತು.

ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *