ಕಲಬುರಗಿ: ಜೋಡಿ ಕೊಲೆ ಮಾಡಿ ಜೈಲು ಸೇರಿದ ಕೈದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
35 ವರ್ಷದ ಸಿದ್ದಪ್ಪಾ ಆತ್ಮಹತ್ಯೆಗೆ ಶರಣಾದ ಕೈದಿ. ಸಿದ್ದಪ್ಪ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಅಣಕಲ್ ಗ್ರಾಮದ ನಿವಾಸಿಯಾಗಿದ್ದು, 2014ರಲ್ಲಿ ಜೋಡಿ ಕೊಲೆ ಮಾಡಿ ಜೈಲು ಸೇರಿದ್ದನು.
Advertisement
ಜೋಡಿ ಕೊಲೆ ಮಾಡಿದ್ದ ಸಿದ್ದಪ್ಪನಿಗೆ ಕೋರ್ಟ್ ಜೀವಾವದಿ ಶಿಕ್ಷೆ ನೀಡಿತ್ತು. ಸಿದ್ದಪ್ಪ ಜೀವಾವಧಿ ಶಿಕ್ಷೆ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದನು ಎಂದು ಹೇಳಲಾಗುತ್ತಿದೆ. ಮಾನಸಿಕವಾಗಿ ಕುಗ್ಗಿದ್ದ ಸಿದ್ದಪ್ಪ ಬಟ್ಟೆ(ಶಾಲ್)ಯಿಂದ ಬಾಗಿಲು ಚೌಕಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಫರಹತಾಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.