ಬೀದರ್: ಜಿಲ್ಲೆಯ ಔರಾದ್ (Aurad) ತಾಲೂಕಿನ ಸಂತಪೂರ್ (Santhapur) ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ (Morarji Desai Residential School) ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿನ್ಸಿಪಲ್ ಹಾಗೂ ವಾರ್ಡನ್‌ನನ್ನು ಅಮಾನತು ಮಾಡಲಾಗಿದೆ.
ವಸತಿ ಶಾಲೆಯ ಪ್ರಿನ್ಸಿಪಲ್ ಭಗವಂತ ಕಾಂಬ್ಳೆ ಹಾಗೂ ವಾರ್ಡನ್ ಶಿವಕುಮಾರ್ ವೈಜಪ್ಪ ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಸ್ವೀಕರಿಸಿದ ಕೆಎಎಸ್ ಅಧಿಕಾರಿ
ಊಟದಲ್ಲಿ ಹುಳ ಬಿದ್ದಿದ್ದನ್ನು ಹಾಗೂ ಮೆನು ಚಾರ್ಟ್ ಪ್ರಕಾರ ಊಟ ನೀಡದಿದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಲ್ ಹಾಗೂ ವಾರ್ಡನ್ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಈ ವೇಳೆ ಕರ್ತವ್ಯಲೋಪ ಎಸಗಿದ್ದವರ ವಿರುದ್ಧ ವರದಿ ಸಲ್ಲಿಸಲಾಗಿದೆ.
ಇನ್ನು ಅಮಾನತಿನಿಂದ ತೆರವಾಗಿರುವ ಹುದ್ದೆಗಳಿಗೆ ಪ್ರಭಾರಿ ಪ್ರಾಂಶುಪಾಲರನ್ನಾಗಿ ಘೋಡಂಪಳ್ಳಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಉಪಪ್ರಾಂಶುಪಾಲ ರವೀಂದ್ರ ಚಟ್ನಳ್ಳಿ ಹಾಗೂ ಮೇಲ್ವಿಚಾರಕರನ್ನಾಗಿ ವಸತಿ ಶಾಲೆಯ ಕಂಪ್ಯೂಟರ್ ಶಿಕ್ಷಕ ದಯಾನಂದ ಅವರನ್ನು ನೇಮಿಸಲಾಗಿದೆ.ಇದನ್ನೂ ಓದಿ: Waqf: 150 ಕೋಟಿ ಆಫರ್| ವಿಜಯೇಂದ್ರ ಮೇಲಿನ ಸಿದ್ದರಾಮಯ್ಯ ಆರೋಪ ಸುಳ್ಳು: ಅನ್ವರ್ ಮಾಣಿಪ್ಪಾಡಿ