ಶ್ರೀನಗರ: ಶಾಲೆಯಲ್ಲಿ ವಸ್ತ್ರಸಂಹಿತೆ (Dress Code) ಅನ್ನು ಅನುಸರಿಸಬೇಕಾಗಿ ಆದೇಶಿಸಿದ ಪ್ರಾಂಶುಪಾಲೆಗೆ (Principal) ಭಯೋತ್ಪಾದಕರ (Terrorists) ಗುಂಪೊಂದು ಬೆದರಿಕೆ ಹಾಕಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ (Srinagar) ನಡೆದಿದೆ. ಇದಾದ ಬಳಿಕ ತಕ್ಷಣವೇ ಪ್ರಾಂಶುಪಾಲರು ಕ್ಷಮೆಯಾಚಿಸಿ ವಿದ್ಯಾರ್ಥಿನಿಯರಿಗೆ ಅಬಯಾ (Abaya) ಧರಿಸಲು ಅನುಮತಿ ನೀಡಿದ್ದಾರೆ.
ಶ್ರೀನಗರದ ವಿಶ್ವ ಭಾರತಿ ಎಂಬವರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಕೆಲ ವಿದ್ಯಾರ್ಥಿನಿಯರಿಗೆ ಶಾಲೆಯೊಳಗೆ ಅಬಯಾ (ಉದ್ದನೆಯ ನಿಲುವಂಗಿ) ಧರಿಸದಂತೆ ಹೇಳಿದ್ದರು. ಆದರೂ ಸಮವಸ್ತçದೊಂದಿಗೆ ಹಿಜಬ್ (ತಲೆಯ ಸ್ಕಾರ್ಫ್) ಧರಿಸಲು ಅನುಮತಿ ನೀಡಿದ್ದರು. ಆದರೆ ಕೆಲವು ವಿದ್ಯಾರ್ಥಿನಿಯರು ಡ್ರೆಸ್ ಕೋಡ್ ಅನ್ನು ಒಪ್ಪಿಕೊಳ್ಳಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದಾರೆ.
Advertisement
Advertisement
ಪ್ರಾಂಶುಪಾಲರು ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಿದ್ದಾರೆ. ಇದು ತಮ್ಮ ಧಾರ್ಮಿಕ ಆಚರಣೆಗಳ ಪ್ರಕಾರ ಧರಿಸಲು ಬಯಸುವ ತಮ್ಮ ಆಯ್ಕೆಯ ವಿರುದ್ಧವಾಗಿದೆ ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ. ಅಬಯಾ ಧರಿಸಲೇಬೇಕಾದರೆ ನೀವು ಶಾಲೆಗೆ ಬರುವುದು ಬೇಡ. ಮದರಸಾಗೆ ಸೇರಿಕೊಳ್ಳಿ ಎಂದು ಪ್ರಿನ್ಸಿಪಾಲ್ ಹೇಳಿರುವುದಾಗಿ ಕೆಲವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಪ್ರಾಂಶುಪಾಲರು ನಿರಾಕರಿಸಿದ್ದಾರೆ.
Advertisement
ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿ ಬಳಿಕ ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿತು. ಸುದ್ದಿ ವಾಹಿನಿಗಳಲ್ಲೂ ಪ್ರಸಾರ ಮಾಡಲಾಯಿತು. ರಾಜಕೀಯ ಮುಖಂಡರು ಶಾಲೆಯ ಅಧಿಕಾರಿಗಳನ್ನು ಟೀಕಿಸಿದರು ಮಾತ್ರವಲ್ಲದೇ ಕರ್ನಾಟಕದಲ್ಲಿ ಹಿಜಬ್ ನಿಷೇಧವಾದ ಘಟನೆಗೆ ಹೋಲಿಸಿದರು. ಇದನ್ನೂ ಓದಿ: ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ
Advertisement
ಬಳಿಕ ಪ್ರಾಂಶುಪಾಲರು ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಿಜಬ್ ಧರಿಸುತ್ತಾರೆ. ಆದರೆ ಅಬಯಾ ಧರಿಸುವವರು ಕೆಲವೇ ಹುಡುಗಿಯರು ಇದ್ದಾರೆ. ಹೀಗಾಗಿ ಶಾಲೆಯೊಳಗೆ ಅಬಯಾ ಧರಿಸದಂತೆ ಹೇಳಿರುವುದಾಗಿ ಅವರು ಸ್ಪಷ್ಟಪಡಿಸಲು ಯತ್ನಿಸಿದರು. ಆದರೆ ಈ ವಿಚಾರ ಅಲ್ಲಿಗೇ ತಣ್ಣಗಾಗದೇ ಭಯೋತ್ಪಾದಕರು ಕೂಡಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದರು.
ಘಟನೆ ದೊಡ್ಡ ವಿವಾದವಾಗುತ್ತಿದ್ದಂತೆ ಭಯೋತ್ಪಾದಕರ ಗುಂಪೊಂದು ಶಾಲೆಯ ಪ್ರಾಂಶುಪಾಲರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದೆ. ಆಕೆ ಬಲಪಂಥೀಯಳೆಂದು ಆರೋಪಿಸಿದೆ. ಯಾವಾಗ ವಿಚಾರ ಭಯೋತ್ಪಾದಕರ ವರೆಗೆ ಹೋಯಿತೋ ಅಂದೇ ಸಂಜೆ ವೇಳೆಗೆ ಪ್ರಾಂಶುಪಾಲರು ಕ್ಷಮೆಯಾಚಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ನನ್ನ ಸಂಭಾಷಣೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಅಥವಾ ಪೋಷಕರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಅದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಇಂದಿನಿಂದ ವಿದ್ಯಾರ್ಥಿನಿಯರು ಅಬಯಾ ಧರಿಸಬಹುದು ಮತ್ತು ತರಗತಿಗಳಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!