ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕಳೆದ 2016ರಿಂದ ಕಲ್ಪತರು ಎನ್ನುವ ಹೋಟೆಲ್ ಮ್ಯಾನೇಜ್‍ಮೆಂಟ್ ಕಾಲೇಜು ಪ್ರಾರಂಭವಾಗಿತ್ತು. ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಮುಗಿಸಿದರೆ ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ವಿದ್ಯಾರ್ಥಿಗಳನ್ನು ಕೋರ್ಸ್‍ಗೆ ದಾಖಲಾತಿ ಮಾಡಿಕೊಂಡಿದ್ದನು.
Advertisement
Advertisement
ಕಾಲೇಜು ಶುಲ್ಕ ಎಂದು ಪ್ರತಿಯೊಬ್ಬರಿಂದ 60 ಸಾವಿರ ಹಣ ಸಹ ಪಡೆದಿದ್ದ. ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಂಕಾಂಗ್‍ನಲ್ಲಿ ಕೆಲಸ ಕೊಡಿಸುವುದಾಗಿ ಸುಮಾರು 76 ವಿದ್ಯಾರ್ಥಿಗಳಿಂದ ತಲಾ 1.10 ಲಕ್ಷದಂತೆ 83,60,000 ಲಕ್ಷ ಪಡೆದಿದ್ದಾನೆ. ಆದರೆ ಸಾಲಸೋಲ ಮಾಡಿ ಹಣ ಖರ್ಚು ಮಾಡಿದ್ದ ವಿದ್ಯಾರ್ಥಿಗಳು ಇದೀಗ ಕೆಲಸ ಇಲ್ಲದೆ ಕೊಟ್ಟ ಹಣವೂ ವಾಪಾಸ್ ಸಿಗದೇ ಬೀದಿಗೆ ಬಿದ್ದು ನ್ಯಾಯಕ್ಕಾಗಿ ಹೋರಾಡುತಿದ್ದಾರೆ.
Advertisement
Advertisement
2016ರಿಂದ ಪ್ರಾಂಶುಪಾಲನಾಗಿ ಸೇರಿಕೊಂಡಿದ್ದ ಗಂಗಾಧರ್ ಕಾಲೇಜಿನಲ್ಲಿ ಮೊದಲ ಬ್ಯಾಚ್‍ನವರು ಕೋರ್ಸ್ ಮುಗಿಸಿ ಎರಡನೇ ಬ್ಯಾಚ್‍ನವರು ಪರೀಕ್ಷೆ ಬರೆದಿದ್ದು, ಕೆಲಸಕ್ಕಾಗಿ ಕಾಯುವ ವೇಳೆ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ಅಲ್ಲದೆ ಒಳ್ಳೆಯವನಂತೆ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದನು.
ವಿದೇಶದಲ್ಲಿ ಕೆಲಸ ಸಿಗುತ್ತೆ ಎಂದು ಎಲ್ಲರೂ ಹಣವನ್ನು ಕಟ್ಟಿದ್ದು ಪಾಸ್‍ಪೋರ್ಟ್ ಮಾಡಿಸಿಕೊಂಡ ನಂತರ ಪ್ರವಾಸಿಗರಿಗೆ ಕೊಡುವ ವೀಸಾವನ್ನು ಹೊರದೇಶಕ್ಕೆ ಕೆಲಸಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ನೀಡಿದ್ದನು. ಮೆಡಿಕಲ್ ಮಾಡಿಸಬೇಕು, ಬೇರೆ ಸರ್ಟಿಫಿಕೇಟ್ ಮಾಡಿಸಬೇಕು ಎಂದು ಹಲವು ಬಾರಿ ಈ ಪ್ರಾಂಶುಪಾಲ ವಿದ್ಯಾರ್ಥಿಗಳಿಂದ ಹಣ ಪಡೆದು ಪರಾರಿಯಾಗಿದ್ದಾನೆ.