ಲಕ್ನೋ: ಮಿಡ್-ಡೇ ಮೀಲ್(ಎಂಡಿಎಂ) ಯೋಜನೆಯ 11.46 ಕೋಟಿ ಹಣವನ್ನು ಸ್ವಾಧೀನಪಡಿಸಿಕೊಂಡ ಆರೋಪದ ಮೇಲೆ ಫಿರೋಜಾಬಾದ್‍ನ ಮೂಲ ಶಿಕ್ಷಣ ಇಲಾಖೆಯ ಶಾಲೆ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಶರ್ಮಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಪ್ರಾಂಶುಪಾಲರು ನಕಲಿ ದಾಖಲೆಗಳನ್ನು ಬಳಸಿ ಸರ್ಕಾರೇತರ ಸಂಸ್ಥೆ(ಎನ್‍ಜಿಒ) ನೋಂದಾಯಿಸಿದ್ದಾರೆ. ಅವರ ಇಲಾಖೆ, ಬ್ಯಾಂಕ್‍ಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಾಯದಿಂದ 11.46 ಕೋಟಿ ರೂ. ಮಿಡ್-ಡೇ ಮೀಲ್ ಬಳಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲುಷಿತ ಕುಡಿಯುವ ನೀರು ಸೇವಿಸಿ 40 ಮಂದಿ ಅಸ್ವಸ್ಥ – ವೃದ್ಧ ಸಾವು
Advertisement
Advertisement
ಫಿರೋಜಾಬಾದ್ ಜಿಲ್ಲೆಯ ಮೂಲ ಶಿಕ್ಷಣ ಇಲಾಖೆಯ ಪ್ರಾಂಶುಪಾಲ ಚಂದ್ರಕಾಂತ್ ಶರ್ಮಾ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಾಗಿದೆ. ಅವರು ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ನಿವಾಸಿಯಾಗಿದ್ದಾರೆ. ಅವರು ಫಿರೋಜಾಬಾದ್ ಜಿಲ್ಲೆಯ ತುಂಡ್ಲಾ ಜಾಜುಪುರದ ಪ್ರಾಥಮಿಕ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.
Advertisement
ಜುಲೈ 27 ರಂದು ಆಗ್ರಾದ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಮೂಲ ಶಿಕ್ಷಣ ಇಲಾಖೆ ಮತ್ತು ಬ್ಯಾಂಕ್‍ಗಳ ಇತರ ಕೆಲವು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಫಿರೋಜಾಬಾದ್‍ನ ಶಿಕೋಹಾಬಾದ್‍ನಲ್ಲಿ ನೋಂದಣಿಯಾಗಿರುವ ಎನ್‍ಜಿಒ ‘ಸರಸ್ವತ್ ಅವಾಸಿಯ ಶಿಕ್ಷಾ ಸೇವಾ ಸಮಿತಿ’ ಮೂಲಕ ಚಂದ್ರಕಾಂತ್ ಶರ್ಮಾ ಹಣವನ್ನು ವಂಚಿಸಿದ್ದಾರೆ. ಇದು 2007ರಲ್ಲಿ ಆಗ್ರಾದಲ್ಲಿರುವ ಫಮ್ರ್ಸ್, ಸೊಸೈಟಿಗಳು ಮತ್ತು ಚಿಟ್ಸ್‍ನ ಉಪ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಅವರು ಎನ್‍ಜಿಒ ನೋಂದಾಯಿಸಲು ನಕಲಿ ಪಡಿತರ ಚೀಟಿ ಮತ್ತು ಐಡಿ ಕಾರ್ಡ್‍ಗಳನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಿಂಧೆ ನಿಷ್ಠಾವಂತ ಅಧಿಕಾರಿ ಕಾರಿನ ಮೇಲೆ ಶಿವಸೈನಿಕರ ದಾಳಿ
Advertisement
ಎಫ್‍ಐಆರ್ ಏನಿದೆ?
ಶಿಕ್ಷಕ ತನ್ನ ತಂದೆಯನ್ನು ಎನ್‍ಜಿಒ ಅಧ್ಯಕ್ಷರನ್ನಾಗಿ, ಅವರ ತಾಯಿಯನ್ನು ಮ್ಯಾನೇಜರ್ ಮತ್ತು ಕಾರ್ಯದರ್ಶಿಯನ್ನಾಗಿ ಮತ್ತು ಅವರ ಪತ್ನಿಯನ್ನು ಖಜಾಂಚಿಯನ್ನಾಗಿ ಮಾಡಿದ್ದಾರೆ. ಅವರು ಎನ್‍ಜಿಒದಲ್ಲಿ ಇತರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಸ್ಥಾನಗಳನ್ನು ಗೊತ್ತುಪಡಿಸಿದರು. ಅಲ್ಲದೇ ಅವರು ತಮ್ಮ ತಾಯಿ ಸೇರಿದಂತೆ ಎನ್‍ಜಿಒದ ಕೆಲವು ಸದಸ್ಯರ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ ಎಂಬುದು ದಾಖಲಾಗಿದೆ.