ಗದಗ: ಕಾಲೇಜಿನ ಕಾಮುಕ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಖಾಸಗಿ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಬಸವರಾಜ್ ವಿದ್ಯಾರ್ಥಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ ಕಾಮುಕ. ಈತ ಕಾಲೇಜಿನ ವಿದ್ಯಾರ್ಥಿನಿ ಜೊತೆ ಚಿನ್ನ, ರನ್ನಾ, ಬಂಗಾರ ಎಂದು ಸೆಕ್ಸ್ ಪಾಠ ಮಾಡಿರುವುದು ಬೆಳಕಿಗೆ ಬಂದಿದೆ. ಇಂಟರ್ನಲ್ ಮಾರ್ಕ್ಸ್ ಗಾಗಿ ನಡೆದ ವಿದ್ಯಾರ್ಥಿನಿ ಹಾಗೂ ಪ್ರಾಂಶುಪಾಲನ ಕಾಮಪುರಾಣ ಈಗ ಬೆಳಕಿಗೆ ಬಂದಿದೆ.
Advertisement
Advertisement
ಬೆಳಗ್ಗೆ ಸಭ್ಯನ ಹಾಗೆ ಬಂದು ಪಾಠ ಮಾಡುತ್ತಿದ್ದ ಬಸವರಾಜ್, ಆ ಬಳಿಕ ವಿದ್ಯಾರ್ಥಿನಿಯರ ಇಂಟರ್ನಲ್ ಮಾರ್ಕ್ಸ್ ಮುಂದಿಟ್ಟುಕೊಂಡು ಕಾಮದ ಪಾಠ ಶುರು ಮಾಡಿಕೊಳ್ಳುತ್ತಿದ್ದನು. ಇದೇ ರೀತಿ ಅರೆಬೆತ್ತಲಾಗಿ ಓರ್ವ ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮಾಡಿ, ಅದರ ಸ್ಕ್ರೀನ್‍ಶಾಟ್ ತೆಗೆದು ಸರಿಯಾಗೇ ತಗಲಾಕ್ಕೊಂಡಿದ್ದಾನೆ. ಈ ಫೋಟೋ, ಮೆಸೇಜ್‍ಗಳು ವೈರಲ್ ಆಗಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಬಸವರಾಜ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ಬಸವರಾಜ್ ಈ ರೀತಿ ಮಾಡಿರುವುದು ಇದೇ ಮೊದಲೇನಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ರೀತಿ ಕಾಮಪುರಾಣ ಮುಂದುವರಿಸಿದ್ದಾನೆ. ಈ ಬಗ್ಗೆ ಕಾಲೇಜ್ ಆಡಳಿತಕ್ಕೆ ಕೇಳಿದರೆ ಸೂಕ್ತ ದಾಖಲೆ ನೀಡಿ, ರೈಟಿಂಗ್‍ನಲ್ಲಿ ಬರೆದುಕೊಡಿ ಎನ್ನುತ್ತಿದ್ದಾರೆ.
ಏನು ಸಾರ್ ಹೀಗೆಲ್ಲಾ ಮಾಡುತ್ತಿರಲ್ಲ ಎಂದು ಬಸವರಾಜ್‍ನನ್ನು ಕೇಳಿದರೆ, ನಾನು ವಿದ್ಯಾರ್ಥಿನಿಯೊಂದಿಗೆ ಮೆಸೇಜ್ ಮಾಡಿದ್ದು ನಿಜ. ಆದರೆ ಇದು ನನ್ನ ಖಾಸಗಿ ಬದುಕು. ಯಾರೋ ನನ್ನ ಮತ್ತು ಆ ಹುಡುಗಿ ಮೊಬೈಲ್ ಹ್ಯಾಕ್ ಮಾಡಿ ಈ ಫೋಟೋ, ಮೆಸೇಜ್ ಕದ್ದಿದ್ದಾರೆ. ಅವರನ್ನು ಸುಮ್ನೆ ಬಿಡಲ್ಲ, ಕೇಸ್ ಹಾಕುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.
ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಒಂದು ಮಹತ್ವದ ಸ್ಥಾನ ಇದೆ. ಆದರೆ ಇಂತಹ ಕೆಲ ನೀಚರಿಂದ ಶಿಕ್ಷಕರ ಹೆಸರು ಹಾಳಾಗುತ್ತಿದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಯಾವ ರೀತಿ ಕ್ರಮಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.