ಫೋಟೋ ಸಮೇತ ಸಮಂತಾ ವಿರುದ್ಧ ತಿರುಗಿಬಿದ್ದ ಪ್ರಿನ್ಸ್ ಫ್ಯಾನ್ಸ್

Public TV
2 Min Read
samantha with mahesh babu

ಮಂತಾ (Samantha) ಮರೆತು ಬಿಟ್ಟಿದ್ದಾರೆ. ಆದರೆ ಮಹೇಶ್ ಬಾಬು (Mahesh Babu) ಫ್ಯಾನ್ಸ್ (Fans) ಬಿಡಬೇಕಲ್ಲ? ಅದಕ್ಕೆ ಏಟಿಗೆ ಎದಿರೇಟು ಎನ್ನುವುದನ್ನು ನೆನಪಿಸಿದ್ದಾರೆ ಕ್ವೀನ್‌ಗೆ. ಈಗ ಆಗಿರುವುದು ಏನು? ಅದ್ಯಾಕೆ ಪ್ರಿನ್ಸ್ ಭಕ್ತಗಣ ತಿರುಗಿಬಿದ್ದರು? ಒಂಬತ್ತು ವರ್ಷಗಳ ಹಿಂದಿನ ಘಟನೆಯನ್ನು ಈಗ ಕೆದಕಿದ್ಯಾಕೆ? ಅದೇ ಇಂಟ್ರಸ್ಟಿಂಗ್ ವಿಚಾರ.

samantha mahesh babu fans 1

ಒಂಬತ್ತು ವರ್ಷಗಳ ಹಿಂದೆ ಒಂದು ಸಿನಿಮಾ ಬಂದಿತ್ತು. ಅದರ ಹೆಸರು ನೇನೊಕ್ಕಡೇನೆ. ಇದು ಪ್ರಿನ್ಸ್ ಸಿನಿಮಾ. ಅಟ್ಟರ್ ಫ್ಲಾಪ್ ಆಗಿತ್ತು. ಕೃತಿ ಸನೋನ್ ನಾಯಕಿ. ಅದೇ ಮೊನ್ನೆ ಮೊನ್ನೆ ತೆರೆ ಕಂಡು ಡಿಸಾಸ್ಟರ್ ಪಟ್ಟಿಯಲ್ಲಿ ನಂಬರ್ ವನ್ ಪಟ್ಟದಲ್ಲಿ ಕುಳಿತಿರುವ ಆದಿಪುರುಷ್ ಹೀರೋಯಿನ್. ಇದೇ ಕೃತಿ ಆಗ ಮಹೇಶ್ ಬಾಬು ಜೊತೆ ನಟಿಸಿದ್ದರು. ಅದೊಂದು ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಎನ್ನುವುದಕ್ಕಿಂತ ಒಬ್ಬ ಮಹಿಳೆಗೆ ಅವಮಾನಕರ ಎನ್ನುವ ರೀತಿಯಲ್ಲಿ ಕಾಣಿಸಿದ್ದರು. ಅದಕ್ಕೆ ಸಮಂತಾ ಕೆಂಡ ಕಾರಿದ್ದರು.  ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

samantha mahesh babu fans 2

ಮಹೇಶ್ ಬಾಬು ನಡೆದುಕೊಂಡು ಹೋಗುವಾಗ ಕೃತಿ ಸನೋನ್ ಹಿಂದೆ ಹಿಂದೆ ತೆವಳುತ್ತಾ ಸಾಗುತ್ತಾರೆ. ಅದು ಒಂದು ಮಹಿಳೆಗೆ ಮಾಡುವ ಅವಮಾನ ಎಂದು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಖುದ್ದು ಮಹೇಶ್ ಕೂಡ ಇದನ್ನು ಖಂಡಿಸಿದ್ದರು. ಹಾಗೆಯೇ ಸಮಂತಾ ನನ್ನ ಫ್ಯಾಮಿಲಿ ಫ್ರೆಂಡ್. ಇದನ್ನು ಅವರು ನೇರವಾಗಿ ನನಗೆ ಹೇಳಬಹುದಿತ್ತು ಎಂದಿದ್ದರು. ಈಗ ನೋಡಿ ಅದೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಅಂಥದ್ದೇ ದೃಶ್ಯದಲ್ಲಿ ನಟಿಸಿದ್ದಾರೆ. ಸಿನಿಮಾ ಹೆಸರು ಖುಷಿ.

Samantha Vijay Devarakonda 1

ವಿಜಯ ದೇವರಕೊಂಡ ಮಲಗಿಕೊಂಡಿದ್ದಾರೆ. ಪಕ್ಕದಲ್ಲಿ ಸಮಂತಾ ಕುಳಿತಿದ್ದಾರೆ. ವಿಜಯ್ ಕಾಲು ಸಮಂತಾ ತೋಳನ್ನು ಮೀಟುತ್ತಿದೆ. ಇದನ್ನೇ ನೋಡಿ ಪ್ರಿನ್ಸ್ ಫ್ಯಾನ್ಸ್ ಕೆಂಡ ಕಾರುತ್ತಿದ್ದಾರೆ. ಆಗ ನೀನು ಹೇಳಿದ್ಧೇನು? ಈಗ ನೀನು ಮಾಡಿರುವುದು ಇನ್ನೇನು? ಎನ್ನುತ್ತಾ ಬೆಂಕಿ ಉಗುಳುತ್ತಿದ್ದಾರೆ. ಇದಕ್ಕೆ ಏನು ಉತ್ತರ ಕೊಡಬೇಕೆಂದು ತಿಳಿಯದೇ ಸಮಂತಾ ಕಂಗಾಲಾಗಿದ್ದಾರೆ. ಇದನ್ನೇ ನೋಡಿ ಟಿಟ್ ಫಾರ್ ಟ್ಯಾಟ್ ಅನ್ನೋದು. ಆಗ ಅದ್ಯಾವುದೋ ಕೋಪದಿಂದ ಕೆಂಡ ಕಾರಿದ್ದರು ಸಮಂತಾ. ಈಗ ಏನು ಮಾಡುತ್ತಾರೆ ?

ಮೊದಲೇ ಈಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ ಸಮಂತಾ. ಹೆಚ್ಚು ಕಮ್ಮಿ ಒಂದು ವರ್ಷ ಸಿನಿಮಾದಿಂದ ದೂರ ಉಳಿದಿದ್ದಾರೆ. ಮೈಯೋಸಿಟಿಸ್ ಖಾಯಿಲೆ ಅಂಟಿಕೊಂಡಿದೆ. ಅದಕ್ಕಾಗಿ ಅಮೆರಿಕಾ ಹಾಗೂ ಕೊರಿಯಾಕ್ಕೆ ಹೋಗಿ ಬರಲಿದ್ದಾರೆ. ಅದ್ಯಾವುದೋ ಅಹಂನ ಗಳಿಗೆಯಲ್ಲಿ ಪ್ರಿನ್ಸ್ ಫ್ಯಾನ್ಸ್ ಅನ್ನು ಕೆಣಕಿದ್ದರು ಸ್ಯಾಮ್. ಈಗ ಅದೇ ಮಾತು ಅವರ ಕಾಲ ಕೆಳಗೆ ಬಂದು ನಿಂತಿದೆ. ಮಾಡಿದ್ದುಣ್ಣೋ ಮಹರಾಯ ಅನ್ನೋದು ಇದಕ್ಕೇನಾ?

Web Stories

Share This Article