ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ಸ್ (France) ಮತ್ತು ಯುಎಇಗೆ (UAE) ಮೂರು ದಿನ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ಪ್ಯಾರಿಸ್‌ಗೆ (Paris) ಪ್ರಧಾನಿ ತೆರಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಫ್ರಾನ್ಸ್‌ಗೆ ತೆರಳಿದ್ದು, ಜುಲೈ 13 ಮತ್ತು 14ರಂದು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಜುಲೈ 14ರಂದು ನಡೆಯಲಿರುವ ಬಾಸ್ಟಿಲ್ ಡೇ ಪರೇಡ್‌ನಲ್ಲಿ (Bastille Day Parade) ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದು, ಈ ಪರೇಡ್‌ನಲ್ಲಿ 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿ ಭಾಗವಹಿಸಲಿದೆ.ಇದನ್ನೂ ಓದಿ: ಫ್ರಾನ್ಸ್ ಪ್ರವಾಸದ ನಡುವೆಯೂ ಅಬುಧಾಬಿಗೆ ಭೇಟಿ ನೀಡಲಿದ್ದಾರೆ ಮೋದಿ
Advertisement
Leaving for Paris, where I will take part in the Bastille Day celebrations. I look forward to productive discussions with President @EmmanuelMacron and other French dignitaries.
Other programmes include interacting with the Indian community and top CEOs. https://t.co/jwT0CtRZyB
— Narendra Modi (@narendramodi) July 13, 2023
Advertisement
ಈ ಸಂದರ್ಭ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (IAF) ಮೂರು ರಫೇಲ್ ಫೈಟರ್ ಜೆಟ್‌ಗಳು (Rafale Fighter Jets) ಫ್ಲೈಪಾಸ್ಟ್‌ಗೆ ಸೇರಿಕೊಳ್ಳಲಿವೆ. ಅಲ್ಲದೇ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದೆ ಕೊಂಡೊಯ್ಯಲು ಪ್ರಧಾನಿ ಮೋದಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಯಮುನಾ ನದಿಯ ತಗ್ಗು ಪ್ರದೇಶದ ನಿವಾಸಿಗಳ ಸ್ಥಳಾಂತರಕ್ಕೆ ಕೇಜ್ರಿವಾಲ್ ಸೂಚನೆ
Advertisement
Advertisement
ಫ್ರಾನ್ಸ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅಬುಧಾಬಿಗೆ ( Abu Dhabi) ಪ್ರಯಾಣಿಸಲಿದ್ದಾರೆ. ಫ್ರಾನ್ಸ್ ಪ್ರವಾಸದ ಕುರಿತು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಟ್ವೀಟ್‌ನಲ್ಲಿ ಯುಎಇ ಭೇಟಿಯನ್ನು ಪ್ರಸ್ತಾಪಿಸಿರುವ ಅವರು, 15ರಂದು ಹೆಚ್‌ಹೆಚ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ( H.H. Sheikh Mohamed bin Zayed Al Nahyan) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ನಮ್ಮ ಈ ಸಂವಾದಗಳು ಭಾರತ ಮತ್ತು ಯುಎಇ ಸ್ನೇಹಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ – ಕೇಜ್ರಿವಾಲ್ ನಿವಾಸದ ಬಳಿಯೂ ಪ್ರವಾಹ ಸ್ಥಿತಿ
Web Stories